Bihar: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಯತ್ನಿಸಿದ ಮಹಿಳಾ ಅಧಿಕಾರಿಗೆ ಥಳಿತ

|

Updated on: Apr 18, 2023 | 9:30 AM

ಬಿಹಾರದಲ್ಲಿ ಅಕ್ರಮ ಮರಳು ಗಣಿಗಾರಿಕೆ(Sand Mining)  ತಡೆಗೆ ನಡೆಸಿದ ತಪಾಸಣೆ ವೇಳೆ ಮಹಿಳಾ ಅಧಿಕಾರಿ  ಸೇರಿದಂತೆ ಮೂವರು ಅಧಿಕಾರಿಗಳ ಮೇಲೆ ಗುಂಪೊಂದು ದಾಳಿ ನಡೆಸಿದೆ. ಗುಂಪು ಮೂವರ ಮೇಲೆ ಕಲ್ಲು ಎಸೆದು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದು, ಈ ವಿಡಿಯೋ ವೈರಲ್ ಆಗಿದೆ.

Bihar: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಯತ್ನಿಸಿದ ಮಹಿಳಾ ಅಧಿಕಾರಿಗೆ ಥಳಿತ
ಮಹಿಳಾ ಅಧಿಕಾರಿಗೆ ಥಳಿತ
Follow us on

ಬಿಹಾರದಲ್ಲಿ ಅಕ್ರಮ ಮರಳು ಗಣಿಗಾರಿಕೆ(Sand Mining)  ತಡೆಗೆ ನಡೆಸಿದ ತಪಾಸಣೆ ವೇಳೆ ಮಹಿಳಾ ಅಧಿಕಾರಿ  ಸೇರಿದಂತೆ ಮೂವರು ಅಧಿಕಾರಿಗಳ ಮೇಲೆ ಗುಂಪೊಂದು ದಾಳಿ ನಡೆಸಿದೆ. ಗುಂಪು ಮೂವರ ಮೇಲೆ ಕಲ್ಲು ಎಸೆದು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದು, ಈ ವಿಡಿಯೋ ವೈರಲ್ ಆಗಿದೆ.
ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪಾಟ್ನಾ ಬಳಿಯ ಬಿಹ್ತಾ ಎಂಬಲ್ಲಿ ಅಕ್ರಮ ಮರಳು ಸಾಗಾಟದಲ್ಲಿ ತೊಡಗಿದ್ದ ಜನರು ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಜನರು ಮಹಿಳಾ ಅಧಿಕಾರಿಯನ್ನು ಎಳೆದುಕೊಂಡು ಆಕೆಯ ಮೇಲೆ ಹಲ್ಲೆ ನಡೆಸಿದ್ದು ಇದೀಗ 44 ಮಂದಿಯನ್ನು ಬಂಧಿಸಲಾಗಿದೆ. ಮೂವರ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ.

ಬಿಹ್ತಾ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸುವ ಕಾರ್ಯಾಚರಣೆಯ ಭಾಗವಾಗಿ ತಂಡವೊಂದು ತಪಾಸಣೆ ಮತ್ತು ಶೋಧನೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ.

ಮತ್ತಷ್ಟು ಓದಿ: ಗದಗ: ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ಮಾಡಿದ ಅಧಿಕಾರಿ ವರ್ಗಾವಣೆ

ಅವರು ಕೊಯಿಲ್ವಾರ್ ಸೇತುವೆ ಬಳಿ ತಲುಪಿದಾಗ, ಅಧಿಕಾರಿಗಳ ಮೇಲೆ ಮರಳು ಮಾಫಿಯಾದಲ್ಲಿ ತೊಡೆಗಿರುವವರು ದಾಳಿ ನಡೆಸಿದ್ದಾರೆ. 44 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, 50 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧೀಕ್ಷಕ ರಾಜೀವ್ ಮಿಶ್ರಾ ಅವರು ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಇನ್ನೂ ಹೆಚ್ಚು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ. ಈ ಘಟನೆಯ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಪೊಲೀಸರು ಶೀಘ್ರದಲ್ಲೇ ಬಂಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:28 am, Tue, 18 April 23