ಶೇಖ್‌ಪುರ, ಮೇ. 29: ಬಿಸಿಲಿನ ಶಾಖಕ್ಕೆ ಬಿಹಾರದ ಶೇಖ್‌ಪುರದ ಹಲವಾರು ಶಾಲಾ ವಿದ್ಯಾರ್ಥಿಗಳು ಮೂರ್ಛೆ ಹೋಗಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದನ್ನು ಎಎನ್ಐ ಹಂಚಿಕೊಂಡಿದೆ. ಉತ್ತರ ಭಾರತದಲ್ಲಿ ಬಿಸಿಲು ಹೆಚ್ಚಾಗಿದ್ದು, ಇಂತಹ ಘಟನೆಗಳು ನಡೆಯುತ್ತಿದೆ. ಶೇಖ್‌ಪುರದಲ್ಲಿ ಮಂಗಳವಾರ ಗರಿಷ್ಠ ತಾಪಮಾನ 42.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಈ ವಿಡಿಯೋದಲ್ಲಿ ವಿದ್ಯಾರ್ಥಿಗಳು ಬಿಸಿಲಿನಿಂದ ತುಂಬಾ ದಣಿದಿರುವುದನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ನೀರು ಕೊಟ್ಟು ಶಿಕ್ಷಕರು ಸಮಾಧಾನ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆ ಸಾಗಿಸಲಾಗಿದ್ದು, ಸಲೈನ್ ಚುಚ್ಚುಮದ್ದನ್ನು ನೀಡಲಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಹಂಚಿಕೊಂಡ ಮತ್ತೊಂದು ವೀಡಿಯೊದಲ್ಲಿ, ಆಸ್ಪತ್ರೆಯ ಅಧಿಕಾರಿಗಳು ಮಕ್ಕಳ ಆರೋಗ್ಯದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಮಕ್ಕಳಿಗೆ ಪೋಷಕರು ಆಸ್ಪತ್ರೆಯಲ್ಲಿ ನೀರು ಹಾಗೂ ORS ನೀಡುತ್ತಿದ್ದಾರೆ. ವೈದ್ಯರು ಕೂಡ ಈ ಬಗ್ಗೆ ಸಲಹೆಯನ್ನು ನೀಡಿದ್ದಾರೆ.
ಇನ್ನು ಶೇಖ್‌ಪುರದ ಸದರ್ ಆಸ್ಪತ್ರೆಯ ವೈದ್ಯರಾದ ರಜನಿಕಾಂತ್ ಕುಮಾರ್ ಅವರು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ವಿದ್ಯಾರ್ಥಿಗಳು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಗಳು ಗುಣಮುಖರಾಗಿದ್ದಾರೆ. ವಿದ್ಯಾರ್ಥಿಗಳು ಎಲ್ಲಾ ಸಮಯದಲ್ಲೂ ಹೈಡ್ರೇಟೆಡ್ ಆಗಿರಬೇಕು. ಅವರು ಸಾಧ್ಯವಾದಷ್ಟು ನೀರು ಕುಡಿಯಬೇಕು. ಶಾಲೆಗೆ ಹೋಗುವಾಗ ಎಲ್ಲ ವಿದ್ಯಾರ್ಥಿಗಳು ನೀರಿನ ಬಾಟಲಿ ಕೊಂಡೊಯ್ಯಬೇಕು ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ನೀರು ಪೋಲು ಮಾಡಿದ್ರೆ 2 ಸಾವಿರ ರೂ. ದಂಡ
ಉತ್ತರ ಭಾರತದ ಇತರ ಭಾಗಗಳಲ್ಲಿ ಬಿಸಿಲಿನ ಬೇಗೆ ಬಿಹಾರದಲ್ಲಿ ಕಂಡುಬರುತ್ತಿದೆ. ಮಂಗಳವಾರ, ರಾಜ್ಯದ ಒಂಬತ್ತು ಸ್ಥಳಗಳಲ್ಲಿ ಬಿಸಿಲಿನ ತಾಪಮಾನವು 44 ಡಿಗ್ರಿ ಸೆಲ್ಸಿಯಸ್ ಮೀರಿದೆ. ಪಾಟ್ನಾದ IMD ಕಚೇರಿಯ ವಿಜ್ಞಾನಿ ಆಶಿಶ್ ಕುಮಾರ್ ಪ್ರಕಾರ, ಔರಂಗಾಬಾದ್‌ನಲ್ಲಿ 47.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ, ಇದು ಬಿಹಾರದ ದಿನದ ಅತ್ಯಂತ ಬಿಸಿಯಾದ ಸ್ಥಳವಾಗಿದೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಈ ಸ್ಥಿತಿ ಇರಲಿದೆ ಎಂದು ಹೇಳಿದ್ದಾರೆ.
ಔರಂಗಾಬಾದ್ (47.7°C), ಡೆಹ್ರಿ (47°C), ಅರ್ವಾಲ್ (46.9°C), ಗಯಾ (46.8°C), ರೋಹ್ತಾಸ್‌ನ ಬಿಕ್ರಮ್‌ಗಂಜ್ (46.5°C), ಬಕ್ಸರ್ (46.4) ಸೇರಿದಂತೆ ಹಲವಾರು ಸ್ಥಳಗಳು 44 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಇದೆ. °C), ಭೋಜ್‌ಪುರ (45.6°C), ನಾವಡ (45.4°C), ಮತ್ತು ರಾಜಗೀರ್ (44.1°C) ತಾಪಮಾನವನ್ನು ಹೊಂದಿದೆ. ಗಯಾ ಕಳೆದ 11 ವರ್ಷಗಳಲ್ಲಿ ಗರಿಷ್ಠ ತಾಪಮಾನವನ್ನು ಅನುಭವಿಸಿದ್ದು, ಮಂಗಳವಾರ 46.8 ಡಿಗ್ರಿ ಸೆಲ್ಸಿಯಸ್ ತಲುಪಿದೆ. ವೈಶಾಲಿ (43.9°C), ಶೇಖ್‌ಪುರ (42.9°C), ಪಾಟ್ನಾ (42.8°C), ಮುಂಗೇರ್ (42.6°C), ಜಮುಯಿ (42.5°C), ಸಿವಾನ್ (42°C) ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಸಹ ಉಷ್ಣ ಅಲೆಯ ಪರಿಸ್ಥಿತಿಗಳು ಕಂಡುಬಂದಿವೆ. ), ಮತ್ತು ಸರನ್ (41°C) ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ