Bird flu ಕೇರಳದಲ್ಲಿ ಹೆಚ್ಚಿದ ಹಕ್ಕಿ ಜ್ವರ ಭೀತಿ; ಕೋಟ್ಟಯಂ, ಆಲಪ್ಪುಳದಲ್ಲಿ ಬಾತುಕೋಳಿಗಳ ಹತ್ಯೆ

ಆಲಪ್ಪುಳ ಮತ್ತು ನೆರೆಯ ಕೋಟ್ಟಯಂ ಜಿಲ್ಲೆಯಲ್ಲಿ ಬಾತುಕೋಳಿ ಸಾಕಣೆ ಒಂದು ಪ್ರಮುಖ ವ್ಯವಹಾರವಾಗಿದೆ. ಮೊಟ್ಟೆಗಳು ಮತ್ತು ಪಕ್ಷಿಗಳ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ, ಸಾಮಾನ್ಯವಾಗಿ ಕೋಳಿಗಿಂತ ಹೆಚ್ಚಿನ ಬೆಲೆಯಿದೆ.

Bird flu ಕೇರಳದಲ್ಲಿ ಹೆಚ್ಚಿದ ಹಕ್ಕಿ ಜ್ವರ ಭೀತಿ; ಕೋಟ್ಟಯಂ, ಆಲಪ್ಪುಳದಲ್ಲಿ ಬಾತುಕೋಳಿಗಳ ಹತ್ಯೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 17, 2021 | 12:29 PM

ತಿರುವನಂತಪುರಂ: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪಕ್ಷಿ ಜ್ವರ (H5N1 influenza) ಬಗ್ಗೆ ರಾಜ್ಯ ಪಶುಸಂಗೋಪನಾ ಇಲಾಖೆ (State animal husbandry department)ಎಚ್ಚರಿಕೆ ನೀಡಿದ ನಂತರ ಭಾರೀ ಸಂಖ್ಯೆಯ ಬಾತುಕೋಳಿಗಳನ್ನು ಕೊಂದು ಸುಟ್ಟು ಹಾಕಲಾಗಿದೆ.ಬಾತುಕೋಳಿಗಳನ್ನು ಕೊಂದು ಸುಡಲಾಗುತ್ತದೆ. ಕಲ್ಲರ, ವೇಚೂರ್ ಮತ್ತು ಅಯ್ಮನಂ ಮುಂತಾದ ಸ್ಥಳಗಳು ಹಕ್ಕಿ ಜ್ವರದಿಂದ ಪ್ರಭಾವಿತವಾಗಿವೆ ಎಂದು ಕೊಟ್ಟಾಯಂ ಜಿಲ್ಲಾಧಿಕಾರಿ ಪಿ.ಕೆ.ಜಯಶ್ರೀ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.  ಕಳೆದ ವಾರ ಜಿಲ್ಲೆಯಲ್ಲಿ ಅನೇಕ ಬಾತುಕೋಳಿಗಳು ಮತ್ತು ಸ್ಥಳೀಯ ಪಕ್ಷಿಗಳು ಸಾವಿಗೀಡಾದ ನಂತರ ಅಲಪ್ಪುಳದಲ್ಲಿ ಹಕ್ಕಿ ಜ್ವರ ಮೊದಲ ಬಾರಿಗೆ ವರದಿಯಾಗಿದೆ. ಅಧಿಕಾರಿಗಳು ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಸಂಸ್ಥೆಗೆ ಮಾದರಿಗಳನ್ನು ಕಳಿಸುವಂತೆ ಒತ್ತಾಯಿಸಿದ್ದರು. ರಾಜ್ಯ ರಾಜಧಾನಿ ತಿರುವನಂತಪುರಂನಲ್ಲಿ ಪಶುಸಂಗೋಪನಾ ಸಚಿವ ಜೆ ಸಿಂಚು ರಾಣಿ ಅವರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಬಾತುಕೋಳಿ, ಕೋಳಿ, ಮತ್ತು ಸಾಕು ಪಕ್ಷಿಗಳ ಮೊಟ್ಟೆ, ಮಾಂಸ ಮತ್ತು ಗೊಬ್ಬರದ ಬಳಕೆ ಮತ್ತು ಮಾರಾಟವನ್ನು ಜಿಲ್ಲಾಡಳಿತ ಈಗಾಗಲೇ ನಿಷೇಧಿಸಿದೆ. ಹೆಚ್ಚುವರಿಯಾಗಿ ಹಕ್ಕಿಜ್ವರ ದೃಢಪಟ್ಟಿರುವ ಪ್ರದೇಶಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ನಿಯೋಜಿಸಲಾಗುವುದು ಮತ್ತು ಜನರಿಗೆ ತಡೆಗಟ್ಟುವ ಔಷಧಿಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಆಲಪ್ಪುಳ ಮತ್ತು ನೆರೆಯ ಕೋಟ್ಟಯಂ ಜಿಲ್ಲೆಯಲ್ಲಿ ಬಾತುಕೋಳಿ ಸಾಕಣೆ ಒಂದು ಪ್ರಮುಖ ವ್ಯವಹಾರವಾಗಿದೆ. ಮೊಟ್ಟೆಗಳು ಮತ್ತು ಪಕ್ಷಿಗಳ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ, ಸಾಮಾನ್ಯವಾಗಿ ಕೋಳಿಗಿಂತ ಹೆಚ್ಚಿನ ಬೆಲೆಯಿದೆ. ಅನೇಕ ಹಿನ್ನೀರುಗಳು ಮತ್ತು ಜಲಮೂಲಗಳಿಂದ ಕೂಡಿದ ಕೇರಳವು ಹೆಚ್ಚಾಗಿ ಹಕ್ಕಿಜ್ವರದಿಂದ ಬಳಲುತ್ತದೆ. ಇತರ ದೇಶಗಳಿಂದ ವಲಸೆ ಬರುವ ಪಕ್ಷಿಗಳು ವೈರಸ್‌ನ ಮುಖ್ಯ ವಾಹಕಗಳಾಗಿವೆ ಎಂದು ವರದಿಯಾಗಿದೆ.  ಜಿಲ್ಲೆಯಲ್ಲಿ ಕಳೆದ ವರ್ಷವೂ ಹಕ್ಕಿ ಜ್ವರ ಏಕಾಏಕಿ ವರದಿಯಾಗಿದೆ ಆದರೆ ಅದನ್ನು ಸ್ಥಳೀಯವಾಗಿ ನಿಯಂತ್ರಿಸಲಾಗಿತ್ತು. 2016ರಲ್ಲಿ ಆಲಪ್ಪುಳ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಹಕ್ಕಿ ಜ್ವರವನ್ನು ನಿಯಂತ್ರಿಸಲು ಕನಿಷ್ಠ 5 ಲಕ್ಷ ಕೋಳಿ ಮತ್ತು ಬಾತುಕೋಳಿಗಳನ್ನು ಕೊಲ್ಲಲಾಗಿತ್ತು.

ಇದನ್ನೂ ಓದಿ:  Bird Flu: ಕೊಟ್ಟಾಯಂನಲ್ಲಿ 3 ಹಕ್ಕಿ ಜ್ವರ ಕೇಸ್​ ಪತ್ತೆ; ಇಂದಿನಿಂದಲೇ ಶುರುವಾಗಲಿಗೆ ಸಾಮೂಹಿಕವಾಗಿ ಹಕ್ಕಿಗಳನ್ನು ಕೊಲ್ಲುವ ಪ್ರಕ್ರಿಯೆ