Bird Flu: ಕೋಳಿಕೋಡ್​​ನ ಕೋಳಿ ಫಾರ್ಮ್​ನಲ್ಲಿ ಹಕ್ಕಿ ಜ್ವರ ಉಲ್ಬಣ; 1,800 ಕೋಳಿಗಳ ಸಾವು

ಆರಂಭಿಕ ಪರೀಕ್ಷೆಗಳಲ್ಲಿ ಹಕ್ಕಿ ಜ್ವರ ಇರುವ ಬಗ್ಗೆ ಸೂಚಿಸಿದ್ದರಿಂದ, ಕೋಳಿಗಳ ಮಾದರಿಗಳನ್ನು ಭೋಪಾಲ್​ನಲ್ಲಿರುವ ಹೈ ಸೆಕ್ಯುರಿಟಿ ಲ್ಯಾಬ್‌ಗೆ ಕಳುಹಿಸಲಾಗಿತ್ತು.

Bird Flu: ಕೋಳಿಕೋಡ್​​ನ ಕೋಳಿ ಫಾರ್ಮ್​ನಲ್ಲಿ ಹಕ್ಕಿ ಜ್ವರ ಉಲ್ಬಣ; 1,800 ಕೋಳಿಗಳ ಸಾವು
ಹಕ್ಕಿ ಜ್ವರ
Updated By: ಸುಷ್ಮಾ ಚಕ್ರೆ

Updated on: Jan 12, 2023 | 4:43 PM

ತಿರುವನಂತಪುರಂ: ಕೇರಳದ ಕೋಳಿಕೋಡ್ ಜಿಲ್ಲೆಯ ಸರ್ಕಾರಿ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ (Bird Flu) ಕಾಣಿಸಿಕೊಂಡ ಬಳಿಕ ಸುಮಾರು 1,800 ಕೋಳಿಗಳು ಹಕ್ಕಿ ಜ್ವರದ ಸೋಂಕಿನಿಂದ ಸಾವನ್ನಪ್ಪಿವೆ. ಈ ನಿಟ್ಟಿನಲ್ಲಿ ಕೇಂದ್ರದ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್ ಪ್ರಕಾರ ಹಕ್ಕಿ ಜ್ವರದ ಸೋಂಕನ್ನು ತುರ್ತಾಗಿ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ಕೇರಳದ (Kerala) ಪಶುಸಂಗೋಪನೆ ಸಚಿವರಾದ ಜೆ. ಚಿಂಚು ರಾಣಿ ಸೂಚನೆ ನೀಡಿದ್ದಾರೆ.

ಆರಂಭಿಕ ಪರೀಕ್ಷೆಗಳಲ್ಲಿ ಹಕ್ಕಿ ಜ್ವರ ಇರುವ ಬಗ್ಗೆ ಸೂಚಿಸಿದ್ದರಿಂದ, ಕೋಳಿಗಳ ಮಾದರಿಗಳನ್ನು ಭೋಪಾಲ್​ನಲ್ಲಿರುವ ಹೈ ಸೆಕ್ಯುರಿಟಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಇದರಲ್ಲಿ ಏವಿಯನ್ ಇನ್ಫ್ಲುಯೆನ್ಸ ದೃಢಪಟ್ಟಿದೆ ಎಂದು ಕೇರಳ ಸರ್ಕಾರದ ಹೇಳಿಕೆ ತಿಳಿಸಿದೆ. ಕೋಳಿ ಫಾರ್ಮ್‌ನಲ್ಲಿ 5,000ಕ್ಕೂ ಹೆಚ್ಚು ಕೋಳಿಗಳಿದ್ದು, ಅವುಗಳಲ್ಲಿ 1,800 ಕೋಳಿಗಳು ಸೋಂಕಿನಿಂದ ಸಾವನ್ನಪ್ಪಿವೆ.

ಇದನ್ನೂ ಓದಿ: Bird Flu: ಕೇರಳದಲ್ಲಿ ಹೆಚ್ಚಿದ ಹಕ್ಕಿ ಜ್ವರ; ಕೊಟ್ಟಾಯಂನಲ್ಲಿ 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

ಕೇರಳದ ಪಶುಸಂಗೋಪನಾ ಸಚಿವರಾದ ಜೆ. ಚಿಂಚು ರಾಣಿ ಈ ನಿಟ್ಟಿನಲ್ಲಿ ಕೇಂದ್ರದ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್‌ನ ಪ್ರಕಾರ, ತುರ್ತಾಗಿ ಹಕ್ಕಿಜ್ವರವನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಹಕ್ಕಿ ಜ್ವರಕ್ಕೆ ಒಳಗಾದ ಕೋಳಿಗಳ ಹತ್ಯೆ ಮತ್ತು ಮುಂದಿನ ಕಾರ್ಯವಿಧಾನಗಳನ್ನು ಜಿಲ್ಲೆಯ ಅಧಿಕಾರಿಗಳ ಅಧೀನದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯದೊಂದಿಗೆ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ