PM Modi Security: ಹೇಗಿರುತ್ತೆ ಪ್ರಧಾನಿ ಮೋದಿ ಭದ್ರತೆ? ರಾಜ್ಯ ಭೇಟಿ ವೇಳೆ ಕಾರನ್ನೂ ಕೊಂಡೊಯ್ಯಲಾಗುತ್ತದೆಯೇ?

ಪ್ರತಿ ಬಾರಿಯೂ ಪ್ರಧಾನಿಯವರು ವಿವಿಧ ರಾಜ್ಯಗಳಿಗೆ ತೆರಳುವಾಗ ಅಲ್ಲಿ ಭದ್ರತೆ ಒದಗಿಸುವವರು ಯಾರು? ಪ್ರಧಾನಿ ಪ್ರಯಾಣಿಸುವ ಕಾರನ್ನೂ ಅವರು ತೆರಳುವಲ್ಲಿಗೆಲ್ಲ ಮೊದಲೇ ಕೊಂಡೊಯ್ಯಲಾಗುತ್ತದೆಯೇ? ಇಲ್ಲವಾದರೆ ರಾಜ್ಯಗಳ ಭೇಟಿ ವೇಳೆ ಪ್ರಧಾನಿಯ ಪ್ರಯಾಣಕ್ಕೆ ಯಾರು ವ್ಯವಸ್ಥೆ ಮಾಡುತ್ತಾರೆ?

PM Modi Security: ಹೇಗಿರುತ್ತೆ ಪ್ರಧಾನಿ ಮೋದಿ ಭದ್ರತೆ? ರಾಜ್ಯ ಭೇಟಿ ವೇಳೆ ಕಾರನ್ನೂ ಕೊಂಡೊಯ್ಯಲಾಗುತ್ತದೆಯೇ?
ಪಂಜಾಬ್​ನ ಫಿರೋಜ್​ಪುರದಲ್ಲಿ ಫ್ಲೈಓವರ್ ಮೇಲೆ ಪ್ರಧಾನಿ ಪ್ರಯಾಣಿಸುತ್ತಿದ್ದ ಕಾರು ಮತ್ತು ಬೆಂಗಾವಲು ಪಡೆಗಳ ವಾಹನಗಳು ಬಾಕಿ ಆಗಿದ್ದ ಸಂದರ್ಭದ ಸಂಗ್ರಹ ಚಿತ್ರ
Follow us
TV9 Web
| Updated By: Ganapathi Sharma

Updated on:Jan 12, 2023 | 7:03 PM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹುಬ್ಬಳ್ಳಿ ಭೇಟಿ ವೇಳೆ ಭದ್ರತಾ ಲೋಪವಾಗಿದೆ (Security Breach) ಎಂದು ವರದಿಯಾಗಿದೆ. ಕಳೆದ ವರ್ಷ ಜನವರಿಯಲ್ಲಿ ಪಂಜಾಬ್​ನ ಫಿರೋಜ್​ಪುರದಲ್ಲಿ ಪ್ರಧಾನಿ ಪ್ರಯಾಣಿಸುತ್ತಿದ್ದ ಕಾರು ಮತ್ತು ಬೆಂಗಾವಲು ಪಡೆಗಳ ವಾಹನಗಳಿಗೆ ಹುಸ್ಸೇನಿವಾಲಾ ಬಳಿ ಮೇಲ್ಸೇತುವೆ ಸಮೀಪ ರೈತರು ಪ್ರತಿಭಟನೆ ನಡೆಸುತ್ತಿದ್ದ ಕಾರಣ, ಸುಮಾರು 20 ನಿಮಿಷ ಕಾಲ ತಡೆಯುಂಟಾಗಿತ್ತು. ಈ ಭದ್ರತಾ ಲೋಪದ ಬಗ್ಗೆ ದೇಶದಾದ್ಯಂತ ಸಾಕಷ್ಟು ಚರ್ಚೆಯಾಗಿತ್ತು. ಜತೆಗೆ ಪ್ರಧಾನಿಯವರು ಪ್ರಯಾಣಿಸುವ ಕಾರು, ಅವರ ಭದ್ರತೆಯ ಮಾನದಂಡಗಳ ಬಗ್ಗೆ ಜನರಲ್ಲಿ ಕುತೂಹಲವನ್ನೂ ಸೃಷ್ಟಿಸಿತ್ತು. ಇದೀಗ ಮತ್ತೆ ಕರ್ನಾಟಕದಲ್ಲಿ ಪ್ರಧಾನಿಗೆ ಭದ್ರತಾ ಲೋಪವಾಗಿದೆ ಎಂಬ ಬಗ್ಗೆ ವರದಿಯಾಗಿರುವುದು ಮತ್ತೆ ಚರ್ಚೆಗೆ ಕಾರಣವಾಗಿದೆ. ಪ್ರತಿ ಬಾರಿಯೂ ಪ್ರಧಾನಿಯವರು ವಿವಿಧ ರಾಜ್ಯಗಳಿಗೆ ತೆರಳುವಾಗ ಅಲ್ಲಿ ಭದ್ರತೆ ಒದಗಿಸುವವರು ಯಾರು? ಪ್ರಧಾನಿ ಪ್ರಯಾಣಿಸುವ ಕಾರನ್ನೂ ಅವರು ತೆರಳುವಲ್ಲಿಗೆಲ್ಲ ಮೊದಲೇ ಕೊಂಡೊಯ್ಯಲಾಗುತ್ತದೆಯೇ? ಇಲ್ಲವಾದರೆ ರಾಜ್ಯಗಳ ಭೇಟಿ ವೇಳೆ ಪ್ರಧಾನಿಯ ಪ್ರಯಾಣಕ್ಕೆ ಯಾರು ವ್ಯವಸ್ಥೆ ಮಾಡುತ್ತಾರೆ? ಇತ್ಯಾದಿ ಪ್ರಶ್ನೆಗಳು ಈ ಸಂದರ್ಭದಲ್ಲಿ ಉದ್ಭವಿಸುವುದು ಸಹಜ. ಇವುಗಳಿಗೆ ಉತ್ತರಿಸುವ ಪ್ರಯತ್ನ ಇಲ್ಲಿದೆ.

ಪ್ರಧಾನ ಮಂತ್ರಿಗೆ ಎಸ್​​ಪಿಜಿ ಭದ್ರತೆ

ಪ್ರಧಾನ ಮಂತ್ರಿಗಳು, ಅವರ ಜತೆ ಇರುವವರ ಭದ್ರತೆಗಾಗಿ 1985ರಲ್ಲಿ ವಿಶೇಷ ರಕ್ಷಣಾ ದಳ ಅಥವಾ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ / ಎಸ್‌ಪಿಜಿ ಸ್ಥಾಪಿಸಲಾಗಿದೆ. ಈ ದಳ ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯಡಿ ಬರುತ್ತದೆ. ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯಡಿ ಬರುವ ವಿವಿಧ ಪಡೆಗಳಿಂದ ಸಮರ್ಥ ಯೋಧರನ್ನು ಆಯ್ಕೆ ಮಾಡಿ ಎಸ್​ಪಿಜಿಗೆ ನೇಮಕ ಮಾಡಲಾಗುತ್ತದೆ. ಎಸ್​ಪಿಜಿಗೆ ನೇಮಕಗೊಂಡ ಯೋಧರು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಗುಪ್ತಚರ ಇಲಾಖೆಯೊಂದಿಗೆ ಚರ್ಚಿಸಿ ಪ್ರಧಾನಿಯವರ ಪ್ರವಾಸದ ಅಂತಿಮ ರೂಪುರೇಷೆ ಸಿದ್ಧಪಡಿಸುವ ಜವಾಬ್ದಾರಿ ಎಸ್​ಪಿಜಿಯದ್ದೇ ಆಗಿದೆ.

‘ಬ್ಲೂ ಬುಕ್’ ಮಾರ್ಗಸೂಚಿಗೆ ಅನುಗುಣವಾಗಿ ಭದ್ರತೆ

ಪ್ರಧಾನ ಮಂತ್ರಿಯೂ ಸೇರಿದಂತೆ ವಿವಿಐಪಿಗಳ ಭದ್ರತೆಗೆ ಸಂಬಂಧಿಸಿದ ಮಾರ್ಗಸೂಚಿಗಳುಳ್ಳ ‘ಬ್ಲೂ ಬುಕ್’ ಅನ್ನು ಕೇಂದ್ರ ಸರ್ಕಾರ ರೂಪಿಸಿದೆ. ಪ್ರಧಾನಿಯವರಿಗೆ ಹೇಗೆ ಭದ್ರತೆ ಒದಗಿಸಬೇಕು? ಯಾವ ರೀತಿಯ ಸಿದ್ಧತೆ ಇರಬೇಕು? ಪೂರ್ವನಿರ್ಧರಿತ ಯೋಜನೆ ರದ್ದಾದರೆ ಪರ್ಯಾಯ ಯೋಜನೆ ಹೇಗೆ ಸಿದ್ಧಪಡಿಸಿರಬೇಕು ಎಂಬಿತ್ಯಾದಿ ಸಂಪೂರ್ಣ ವಿವರಗಳನ್ನು ಈ ‘ಬ್ಲೂ ಬುಕ್’ ಒಳಗೊಂಡಿರುತ್ತದೆ. ಅದರಂತೆಯೇ ಪ್ರಧಾನಿಯವರಿಗೆ ಭದ್ರತೆ ಒದಗಿಸಬೇಕಾಗುತ್ತದೆ. ಎಸ್​ಪಿಜಿ ಮಾತ್ರವಲ್ಲದೆ, ಪ್ರಧಾನಿ ಸಂಚರಿಸುವ ರಾಜ್ಯಗಳ ಪೊಲೀಸರೂ ‘ಬ್ಲೂ ಬುಕ್’ ಮಾರ್ಗಸೂಚಿಗೆ ಅನುಗುಣವಾಗಿಯೇ ಭದ್ರತೆ ಒದಗಿಸಬೇಕಾಗುತ್ತದೆ.

ಪ್ರಧಾನಿ ರಾಜ್ಯ ಭೇಟಿ ವೇಳೆ ಕಾರನ್ನೂ ಒಯ್ಯಲಾಗುತ್ತದೆಯೇ?

ಪ್ರಧಾನಿಯವರು ರಾಜ್ಯಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿದಾಗ ಅವರ ಪ್ರಯಾಣಕ್ಕೆ ಕಾರುಗಳನ್ನು ಒದಗಿಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಪ್ರಧಾನ ಮಂತ್ರಿ ಮತ್ತು ಅವರ ಬೆಂಗಾವಲು ಪಡೆಗಳಿಗೆ ‘ಬ್ಲೂ ಬುಕ್’ ಮಾರ್ಗಸೂಚಿಗೆ ಅನುಗುಣವಾಗಿ ನಿರ್ದಿಷ್ಟ ಕಾರು/ವಾಹನಗಳನ್ನು ಒದಗಿಸುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರದ್ದಾಗಿದೆ. ರಾಜ್ಯಗಳ ಬಳಿ ಮಾರ್ಗಸೂಚಿಗೆ ಅನುಗುಣವಾದ ವಾಹನ ವ್ಯವಸ್ಥೆ ಇಲ್ಲದಿದ್ದಲ್ಲಿ ಮೊದಲೇ ತರಿಸಿಕೊಂಡು ವ್ಯವಸ್ಥೆ ಮಾಡಬೇಕು. ಬೆಂಗಾವಲು ಪಡೆಯಲ್ಲಿ ಸಾಮಾನ್ಯವಾಗಿ 8 ವಾಹನಗಳಿರುತ್ತವೆ. ಕೆಲವೊಂದು ಸಂದರ್ಭದಲ್ಲಿ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆ ಹೆಚ್ಚಿರಬಹುದಾಗಿದೆ. ಮೊತ್ತಮೊದಲಿಗೆ ಸೈರನ್ ಮೊಳಗಿಸುತ್ತಾ ವಾರ್ನಿಂಗ್ ಕಾರು ತೆರಳಿದರೆ ಅದರ ಹಿಂದಿನಿಂದ ಭದ್ರತೆಗೆ ಸಂಬಂಧಿಸಿದ ತಾಂತ್ರಿಕ ಉಪಕರಣಗಳನ್ನು ಒಳಗೊಂಡ ವಾಹನ ಸಂಚರಿಸುತ್ತದೆ. ಪ್ರಧಾನಿ ಸಾಗುವ ಕಾರನ್ನು ಫ್ಲ್ಯಾಗ್ ಕಾರು ಎಂದು ಕರೆಯಲಾಗುತ್ತದೆ. ಇದರ ಎಡ, ಬಲ, ಹಿಂದೆ ಹಾಗೂ ಮುಂದೆ ಬೆಂಗಾವಲು ಪಡೆಯ ಇತರ ವಾಹನಗಳಿರುತ್ತವೆ. ಜತೆಗೊಂದು ಆ್ಯಂಬುಲೆನ್ಸ್ ಮತ್ತು ಎಲ್ಲ ವಾಹನಗಳು ಮುಂದೆ ತೆರಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಹೊತ್ತ ಕಾರೊಂದು ಕೊನೆಯಲ್ಲಿ ಸಾಗುತ್ತದೆ.

ಇದನ್ನೂ ಓದಿ: PM Modi Security Breach: ಹುಬ್ಬಳ್ಳಿಯಲ್ಲಿ ಪ್ರಧಾನಿ ರೋಡ್‌ ಶೋ ವೇಳೆ ಭದ್ರತಾಲೋಪ, ಅಂಗ ರಕ್ಷಕರನ್ನು ತಳ್ಳಿ ಮೋದಿ ಸಮೀಪಕ್ಕೆ ತೆರಳಿದ ಬಾಲಕ

ಪ್ರಧಾನಿ ಬೆಂಗಾವಲು ಪಡೆಯ ಜವಾಬ್ದಾರಿಗಳೇನು?

ಪ್ರಧಾನಿಯವರು ಸಾಗಲಿರುವ ಮಾರ್ಗದಲ್ಲಿ ಇತರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಎಂಬ ಮಾಹಿತಿ ದೊರೆತ ಬಳಿಕವಷ್ಟೇ ಬೆಂಗಾವಲು ಪಡೆಗಳು ಪ್ರಯಾಣ ಆರಂಭಿಸಬೇಕು. ಪ್ರಧಾನಿಯವರ ಪ್ರಯಾಣ ಸಂಪೂರ್ಣವಾಗಿ ಕೊನೆಗೊಳ್ಳುವ ವರೆಗೂ ಬೆಂಗಾವಲು ಪಡೆಯ ವಾಹನಗಳ ಯಾವೊಬ್ಬ ಚಾಲಕ, ಸಿಬ್ಬಂದಿಯೂ ವಾಹನಗಳಿಂದ ಹೊರಗಿಳಿಯುವಂತಿಲ್ಲ. ಬೆಂಗಾವಲು ಪಡೆಯ ವಾಹನಗಳ ಸಂಚಾರಕ್ಕೆ ಸಂಬಂಧಿಸಿದ ರೂಪುರೇಷೆಯನ್ನು ಎಸ್​ಪಿಜಿ ಮತ್ತು ಗುಪ್ತಚರ ಇಲಾಖೆ ಸಿದ್ಧಪಡಿಸುತ್ತವೆ. ಇದನ್ನು ಅನುಷ್ಠಾನಗೊಳಿಸುವ ಹೊಣೆ ರಾಜ್ಯ ಪೊಲೀಸ್ ಇಲಾಖೆಯದ್ದಾಗಿದೆ.

ಪ್ರಧಾನಿಗೆ ಹೊಸ ಮರ್ಸಿಡಸ್​ ಮೇಬ್ಯಾಕ್​​ ಕಾರು

ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಬಳಸಿದ್ದ ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್​​ಗಿಂತಲೂ ನವೀಕೃತಗೊಂಡಿರುವ, ಹೆಚ್ಚಿನ ಭದ್ರತಾ ವ್ಯವಸ್ಥೆ ಇರುವ ಮರ್ಸಿಡಸ್​ ಮೇಬ್ಯಾಕ್​​ S650 ಕಾರನ್ನು ಕಳೆದ ವರ್ಷ ಖರೀದಿಸಲಾಗಿತ್ತು. ಸುಮಾರು 12 ಕೋಟಿ ರೂ. ಬೆಲೆಬಾಳುವ ಈ ಕಾರು, ಅತ್ಯಂತ ಉನ್ನತ ಮಟ್ಟದ ರಕ್ಷಣಾ ವ್ಯವಸ್ಥೆ ಒಳಗೊಂಡಿದ್ದು, ಗುಂಡುಗಳ ದಾಳಿ, ಸ್ಫೋಟಗಳಂಥ ಘಟನೆ ನಡೆದಾಗ ಹೆಚ್ಚಿನ ಪ್ರತಿರೋಧಕ ಒಡ್ಡುವ ಗುಣ ಹೊಂದಿದೆ. ಪ್ರಧಾನಿ ಪ್ರಯಾಣಕ್ಕೆ ಯಾವ ಮಾದರಿಯ ಕಾರು ಬೇಕು ಎಂಬ ಬಗ್ಗೆಯೂ ಎಸ್​ಪಿಜಿಯೇ ನಿರ್ಧಾರ ಕೈಗೊಂಡು ಶಿಫಾರಸು ಮಾಡುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Thu, 12 January 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ