ದೆಹಲಿ ಏಪ್ರಿಲ್ 01: ದೆಹಲಿ ನ್ಯಾಯಾಲಯವು ಸೋಮವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಜಾರಿ ನಿರ್ದೇಶನಾಲಯದ ಕಸ್ಟಡಿಯನ್ನು ವಿಸ್ತರಿಸಿದ ನಂತರ, ಅವರ ಪತ್ನಿ ಸುನೀತಾ ಕೇಜ್ರಿವಾಲ್ (Sunita Kejriwal) ಅವರು ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆ ಚುನಾವಣೆಯ (Lok Sabha elections) ಕಾರಣ ಎಎಪಿ ಮುಖ್ಯಸ್ಥರನ್ನು ಜೈಲಿನಲ್ಲಿಡಲು ಸರ್ಕಾರ ಬಯಸಿದ್ದು, ಈ ಸರ್ವಾಧಿಕಾರಕ್ಕೆ ದೇಶದ ಜನತೆ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಅವರನ್ನು ಜೈಲಿಗೆ ಏಕೆ ಕಳುಹಿಸಲಾಗಿದೆ? ಲೋಕಸಭೆ ಚುನಾವಣೆ ವೇಳೆ ಅವರನ್ನು ಜೈಲಿಗೆ ಹಾಕುವುದು ಒಂದೇ ಗುರಿ. ಈ ಸರ್ವಾಧಿಕಾರಕ್ಕೆ ದೇಶದ ಜನತೆ ಉತ್ತರ ನೀಡಲಿದ್ದಾರೆ,’’ ಎಂದು ವಿಚಾರಣೆ ಬಳಿಕ ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸುನೀತಾ ಕೇಜ್ರಿವಾಲ್ ಅವರನ್ನು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲು ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರೊಂದಿಗೆ ಹೋಲಿಸಿದ್ದಾರೆ. “ಅವರು ರಾಬ್ರಿ ದೇವಿಯಂಥಾಗಲು ಸಿದ್ಧತೆ ನಡೆಸಿದ್ದಾರೆ. ಕಳೆದ 7-10 ದಿನಗಳಲ್ಲಿ ನಾನು ಈಗಾಗಲೇ 3-4 ಬಾರಿ ‘ರಾಬ್ರಿ ದೇವಿ’ ಮುಂದೆ ಬರಲಿದ್ದಾರೆ ಎಂದು ಹೇಳಿದ್ದೇನೆ. ಅಂದರೆ ಸುನೀತಾ ಕೇಜ್ರಿವಾಲ್ ಈಗ ಮುಂದೆ ಬರುತ್ತಾರೆ ಎಂದು ಹೇಳುತ್ತೇನೆ ಎಂದು ಪುರಿ ಹೇಳಿದರು.
ಹರ್ದೀಪ್ ಸಿಂಗ್ ಪುರಿ ಅವರು ಅರವಿಂದ್ ಕೇಜ್ರಿವಾಲ್ ವಿರುದ್ಧ ವ್ಯಂಗ್ಯವಾಡಿದ್ದು, ಇಬ್ಬರು ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಜೈಲಿನಲ್ಲಿರುವ ಕಾರಣ ಅವರು ಈಗ ಕ್ಯಾಬಿನೆಟ್ ಸಭೆಗಳನ್ನು ನಡೆಸಬಹುದು ಎಂದು ಹೇಳಿದರು.
ಜೈಲಿನಲ್ಲಿ ಸರ್ಕಾರ ನಡೆಸಲು ಸಾಧ್ಯವೆ? ಈಗಾಗಲೇ ಮೂವರು ಸಚಿವರು ಜೈಲಿನಲ್ಲಿದ್ದಾರೆ, ಅವರಿಗೆ ಕೋರಂ ಇದೆ, ಅವರು ಜೈಲಿನಲ್ಲಿಯೇ ಕ್ಯಾಬಿನೆಟ್ ಸಭೆಗಳನ್ನು ನಡೆಸಬಹುದು ಎಂದಿದ್ದಾರೆ.
ಕೇಜ್ರಿವಾಲ್ ಜೈಲಿನಲ್ಲಿರಬೇಕು ಎಂದು ನ್ಯಾಯಾಲಯ ನಂಬುತ್ತದೆ ಎಂದು ಬಿಜೆಪಿ ನಾಯಕ ಬಾನ್ಸುರಿ ಸ್ವರಾಜ್ ಹೇಳಿದ್ದಾರೆ.
“ನಿನ್ನೆ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಬ್ಲಾಕ್‌ನ ರ‍್ಯಾಲಿಯಲ್ಲಿ ಭ್ರಷ್ಟಾಚಾರದ ಫ್ಲಾಪ್ ಶೋ ಅನ್ನು ನಾವೆಲ್ಲರೂ ನೋಡಿದ್ದೇವೆ. ಅವರು ನಿನ್ನೆ ಮಾಡಿದ್ದು ‘ರ‍್ಯಾಲಿ’ಯ ವ್ಯಾಖ್ಯಾನಕ್ಕೆ ಹೊಂದಿಕೆಯಾಗುವುದಿಲ್ಲ. ರ‍್ಯಾಲಿ ಎಂದರೆ ಬೃಹತ್ ಸಾರ್ವಜನಿಕ ಸಭೆ, ಆದರೆ, ನೀವು ವಿಡಿಯೊದಲ್ಲಿ ಖಾಲಿ ಕುರ್ಚಿಗಳನ್ನು ನೋಡುತ್ತೀರಿ. ಇದರರ್ಥ ಸಾರ್ವಜನಿಕರು ಅವರೊಂದಿಗೆ ಇಲ್ಲ”ಎಂದು ಅವರು ಹೇಳಿದರು.
ಲಾಲು ಪ್ರಸಾದ್ ಯಾದವ್ ಅರವಿಂದ್ ಕೇಜ್ರಿವಾಲ್ ಅವರ ಗುರುವಾಗಿದ್ದಾರೆ ಎಂದು ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಹೇಳಿದ್ದಾರೆ.
“ಅವರು ಬಲಿಪಶುವಿನಂತೆ ತೋರಿಸುತ್ತಾರೆ. ನ್ಯಾಯಾಲಯದ ಇಂದಿನ ತೀರ್ಪು ದೃಢ ಪುರಾವೆಗಳನ್ನು ಆಧರಿಸಿದೆ ಎಂದು ನಾನು ಒತ್ತಿಹೇಳಲು ಬಯಸುತ್ತೇನೆ, ಇದಕ್ಕಾಗಿ ನಾವು ಅಥವಾ ನೀವು ಅಥವಾ ಬೇರೆ ಯಾರೂ ಗೌಪ್ಯವಾಗಿರುವುದಿಲ್ಲ. ಆದ್ದರಿಂದ, ಬಂಧನ ವಿಸ್ತರಿಸಲು ನಿರ್ಧರಿಸಿದೆ. ಈ ನ್ಯಾಯಾಂಗ ಬಂಧನವು 15 ದಿನಗಳ ಕಾಲ, ಈಗ, ಇದು ಕೆಲವು ನೈತಿಕ ಮತ್ತು ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತುತ್ತದೆ. ಅಣ್ಣಾ ಹಜಾರೆ ಅರವಿಂದ ಕೇಜ್ರಿವಾಲ್ ಅವರ ‘ಗುರು’ ಆಗಿದ್ದರು. ಗುರುಗಳು ರಾಜಕೀಯಕ್ಕೆ ಸೇರುವುದಿಲ್ಲ ಎಂದು ಹೇಳಿದ್ದರು, ‘ಚೇಲಾ’ ರಾಜಕೀಯಕ್ಕೆ ಸೇರಿ ಸಿಎಂ ಕೂಡ ಆದರು.ಆದರೆ ನಿನ್ನೆ ಮತ್ತೊಂದು ರ್ಯಾಲಿಯಲ್ಲಿ ‘ಗುರು’ಬದಲಾಯಿಸಿದರು. ಈಗ ‘ಗುರು’ ಲಾಲು ಪ್ರಸಾದ್ ಯಾದವ್.ಲಾಲು ಯಾದವ್ ಜೈಲಿಗೆ ಹೋಗುವಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು ಆದರೆ ಅವರು (ಅರವಿಂದ್ ಕೇಜ್ರಿವಾಲ್) ಇನ್ನೂ ರಾಜೀನಾಮೆ ನೀಡಿಲ್ಲ ಎಂದಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಔಷಧಿಗಳು ಮತ್ತು ಪುಸ್ತಕಗಳನ್ನು ಕೊಂಡೊಯ್ಯಲು ಅನುಮತಿ ನೀಡುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ಜೈಲು ಕೈಪಿಡಿಯಂತೆ ವೈದ್ಯರು ಸೂಚಿಸಿದಂತೆ ಒಂದು ಟೇಬಲ್ ಮತ್ತು ಕುರ್ಚಿ, ಧಾರ್ಮಿಕ ಲಾಕೆಟ್ ಮತ್ತು ವಿಶೇಷ ಆಹಾರವನ್ನು ಒದಗಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿದೆ. ಅರವಿಂದ್ ಕೇಜ್ರಿವಾಲ್ ಅವರು ಭಗವದ್ಗೀತೆ, ರಾಮಾಯಣ ಮತ್ತು ಹೌ ಪ್ರೈಮ್ ಮಿನಿಸ್ಟರ್ ಡಿಸೈಡೆಡ್ ಎಂಬ ಶೀರ್ಷಿಕೆಯ ಪುಸ್ತಕ ಬೇಕು ಎಂದು ಕೇಳಿದ್ದಾರೆ.
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ತನಿಖೆಗೆ ‘ಸಹಕರಿಸುತ್ತಿಲ್ಲ’: ದೆಹಲಿ ನ್ಯಾಯಾಲಯಕ್ಕೆ ಇಡಿ ಹೇಳಿಕೆ
ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುವುದನ್ನು ತಡೆಯಲು ಅವರನ್ನು ಬಂಧಿಸಲಾಗಿದೆ ಎಂದು ಎಎಪಿ ಹೇಳಿಕೊಂಡಿದೆ. ಬಂಧನವಾದಾಗಿನಿಂದ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಸಂದೇಶಗಳನ್ನು ಓದುತ್ತಿದ್ದಾರೆ. ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಆದಾಗ್ಯೂ, ಕೇಜ್ರಿವಾಲ್ ಜೈಲಿನ ಒಳಗಿನಿಂದ ಹಲವಾರು ಆದೇಶಗಳನ್ನು ರವಾನಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ