ಭವಾನಿಪುರದಲ್ಲಿ ಸೆಕ್ಷನ್​ 144 ಜಾರಿಮಾಡಲು ಬಿಜೆಪಿ ನಿಯೋಗ ಆಗ್ರಹ; ಗಲಾಟೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ದೂರು

ಭವಾನಿಪುರ ಕ್ಷೇತ್ರದಲ್ಲಿ ಗಲಾಟೆ ನಡೆದ ಬೆನ್ನಲ್ಲೇ ಬಿಜೆಪಿ ನಿಯೋಗವೊಂದು ಕೋಲ್ಕತ್ತದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ಟಿಎಂಸಿ ವಿರುದ್ಧ ದೂರು ಸಲ್ಲಿಸಿದೆ.

ಭವಾನಿಪುರದಲ್ಲಿ ಸೆಕ್ಷನ್​ 144 ಜಾರಿಮಾಡಲು ಬಿಜೆಪಿ ನಿಯೋಗ ಆಗ್ರಹ; ಗಲಾಟೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ದೂರು
ನಿನ್ನೆ ಗಲಾಟೆ ನಡೆದ ಸಂದರ್ಭ (ಫೋಟೋ-ಎಎನ್​ಐ)
Follow us
TV9 Web
| Updated By: Lakshmi Hegde

Updated on:Sep 28, 2021 | 9:39 AM

ಯಾವುದೇ ಚುನಾವಣೆ, ಉಪಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ, ಹಲ್ಲೆ ಸರ್ವೇಸಾಮಾನ್ಯವೆಂಬಂತೆ ಆಗಿದೆ. ಹಾಗೇ, ಸೆಪ್ಟೆಂಬರ್​ 30ರಂದು  ಪಶ್ಚಿಮ ಬಂಗಾಳದ ಬಾಬನಿಪುರ ಸೇರಿ ಒಟ್ಟು 3 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ನಿನ್ನೆಯಿಂದಲೇ ಅಲ್ಲಿ ಗಲಾಟೆ ಶುರುವಾಗಿದೆ. ಸದ್ಯ ಉಪಾಚುನಾವಣೆಯಲ್ಲಿ ಮುಖ್ಯ ಕ್ಷೇತ್ರವಾಗಿರುವ ಭವಾನಿಪುರದಲ್ಲಿ ನಿನ್ನೆ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದ್ದು, ಮನೆಮನೆ ಪ್ರಚಾರ ನಡೆಸುತ್ತಿದ್ದ ಬಿಜೆಪಿ ನಾಯಕ ದಿಲೀಪ್​ ಘೋಷ್​ ಮೇಲೆ ಕೂಡ ಹಲ್ಲೆ ನಡೆದಿದೆ. ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ತಳ್ಳಾಟ ನಡೆಸಲಾಗಿದೆ. ತನ್ನ ಮೇಲೆ ಹಲ್ಲೆ ನಡೆಸಿದ್ದು ಟಿಎಂಸಿ ಕಾರ್ಯಕರ್ತರೇ ಎಂದು ದಿಲೀಪ್ ಘೋಷ್​ ಆರೋಪಿಸಿದ್ದಾರೆ. 

ಗಲಾಟೆ ನಡೆದ ಬೆನ್ನಲ್ಲೇ ಬಿಜೆಪಿ ನಿಯೋಗವೊಂದು ಕೋಲ್ಕತ್ತದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ, ಸೆಪ್ಟೆಂಬರ್​ 30, ಉಪಚುನಾವಣೆ ದಿನ ಬಾಬನಿಪುರ ಕ್ಷೇತ್ರದಲ್ಲಿ ಸೆಕ್ಷನ್​ 144 ಹೇರಬೇಕು ಎಂದು ಮನವಿ ಮಾಡಿದೆ. ಸ್ವಪನ್​ ದಾಸ್​​ಗುಪ್ತಾ ನೇತೃತ್ವದಲ್ಲಿ ಈ ನಿಯೋಗ ರಚನೆಯಾಗಿದ್ದು, ಶಿಶಿರ್​ ಬಜೋರಿಯಾ ಮತ್ತು ಪ್ರತಾಪ್​ ಬ್ಯಾನರ್ಜಿ ಕೂಡ ಇದ್ದರು. ಉಪಚುನಾವಣೆ ದಿನ ಸೆಕ್ಷನ್​ 144 ಹೇರಬೇಕು ಎಂಬ ಬೇಡಿಕೆಯೊಂದಿಗೆ, ಅಂದು ಬಾಬನಿಪುರದಲ್ಲಿ ಕೇಂದ್ರ ರಕ್ಷಣಾ ಪಡೆಗಳನ್ನು ನಿಯೋಜಿಸಬೇಕು. ಬೂತ್​​ನಲ್ಲೂ ಅವರೇ ಇರಬೇಕು. ಇಡೀ ಭವಾನಿಪುರ ಕ್ಷೇತ್ರದ ಭದ್ರತೆ ವಿಚಾರದಲ್ಲಿ ಕೋಲ್ಕತ್ತ ಪೊಲೀಸರು ದೂರವೇ ಇದ್ದು, ಕೇಂದ್ರ ತಂಡಕ್ಕೇ ಜವಾಬ್ದಾರಿ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

ಮಮತಾ ಬ್ಯಾನರ್ಜಿ ಕ್ಷೇತ್ರ ಭವಾನಿಪುರದಲ್ಲಿ ಟಿಎಂಸಿಯಿಂದ ಕಣಕ್ಕೆ ಇಳಿದಿರುವ ಮಮತಾ ಬ್ಯಾನರ್ಜಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ತುಂಬ ಇದೆ. ಒಂದೊಮ್ಮೆ ಸೋತರೆ ಅವರು ತಮ್ಮ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳುತ್ತಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೀದಿ ಆಪ್ತ ಸುವೇಂದು ಅಧಿಕಾರಿ ಬಿಜೆಪಿಗೆ ಹೋಗಿ, ನಂದಿಗ್ರಾಮದಿಂದ ಸ್ಪರ್ಧಿಸಿದ್ದರು. ಸುವೇಂದು ಅಧಿಕಾರಿ ಮೇಲೆ ಪ್ರತಿಕಾರ ತೆಗೆದುಕೊಳ್ಳಲು ಮಮತಾ ಬ್ಯಾನರ್ಜಿ ತಮ್ಮ ಸ್ವಕ್ಷೇತ್ರ ಬಾಬನೀಪುರ ಬಿಟ್ಟು ನಂದಿಗ್ರಾಮದಿಂದಲೇ ಕಣಕ್ಕೆ ಇಳಿದಿದ್ದರು. ಆದರೆ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದರು. ಅಷ್ಟಾದರೂ ಸಿಎಂ ಆಗಿರುವ ಅವರು ಭವಾನಿಪುರದಲ್ಲಿ ಗೆಲ್ಲಲೇಬೇಕು. ಇದು ಪ್ರಜಾಪ್ರಭುತ್ವದ ನಿಯಮ. ಈಗ ಮುಖ್ಯಮಂತ್ರಿ ಪಟ್ಟವನ್ನು ಉಳಿಸಿಕೊಳ್ಳಲೇಬೇಕು ಎಂಬ ಜಿದ್ದಿನಲ್ಲಿ ಮಮತಾ ಬ್ಯಾನರ್ಜಿ ಇದ್ದಾರೆ.

ಇತ್ತ ಬಿಜೆಪಿ ಹೇಗಾದರೂ ಸರಿ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಯವರನ್ನು ಸೋಲಿಸಬೇಕು ಎಂಬ ಹಠ ತೊಟ್ಟಿದೆ. ಇಲ್ಲೀಗ ಪ್ರಿಯಾಂಕಾ ತಿಬ್ರೇವಾಲ್​ ಎಂಬುವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ. ಈ ಪ್ರಿಯಾಂಕಾ ಅವರ ಮೇಲೆ ಕೂಡ ಹಲ್ಲೆ ನಡೆದಿದೆ. ಕೋಲ್ಕತ್ತ ದಕ್ಷಿಣ ಡಿಸಿಪಿಯೇ ಪ್ರಿಯಾಂಕಾರಿಗೆ ಕಿರುಕುಳ ನೀಡಿದ್ದಾರೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಅಷ್ಟೇ ಅಲ್ಲ, ಬಿಜೆಪಿ ರಾಜ್ಯ ಅಧ್ಯಕ್ಷ ಡಾ. ಸುಕಾಂತಾ ಮಜುಮ್​ದಾರ್​, ಜ್ಯೋತಿರ್ಮಯ್​ ಸಿಂಗ್​ ಮಹಾತೋ ಮತ್ತು ಅರ್ಜುನ್​ ಸಿಂಗ್​ರಿಗೂ ಹಿಂಸೆ ನೀಡಲಾಗಿದೆ ಎಂದು ಬಿಜೆಪಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ. ಉಪಚುನಾವಣೆಯನ್ನು ಹಿಂಸಾಚಾರ ಇಲ್ಲದೆ, ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದೆ.

ಇದನ್ನೂ ಓದಿ: World Rabies Day 2021: ರೇಬೀಸ್ ರೋಗದ ಕುರಿತಾಗಿ ನೀವು ತಿಳಿಯಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ

ಉಡುಪಿ: ಆದರ್ಶ ಗ್ರಾಮ ಎಂದು ಕರೆಸಿಕೊಂಡ ಕೆರಾಡಿಯಲ್ಲಿ ಕಾಡುತ್ತಿದೆ ಮೂಲಭೂತ ಸೌಕರ್ಯದ ಕೊರತೆ

Published On - 9:01 am, Tue, 28 September 21

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ