ಕಮಲ್ ಹಾಸನ್ ಜತೆ ಮತಗಟ್ಟೆಗೆ ಭೇಟಿ ನೀಡಿದ ಶ್ರುತಿ ಹಾಸನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬಿಜೆಪಿ ಒತ್ತಾಯ

Shruti Haasan: ಮತಗಟ್ಟೆಗೆ ಶ್ರುತಿ ಹಾಸನ್ ಭೇಟಿ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನಂದಕುಮಾರ್, ಬಿಜೆಪಿ ರಾಷ್ಟ್ರೀಯ ಮಹಿಳಾ ಘಟಕದ ನಾಯಕಿ ವನತಿ ಶ್ರೀನಿವಾಸನ್ ಜಿಲ್ಲಾ ಚುನಾವಣಾ ಅಧಿಕಾರಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕಮಲ್ ಹಾಸನ್ ಜತೆ ಮತಗಟ್ಟೆಗೆ ಭೇಟಿ ನೀಡಿದ ಶ್ರುತಿ ಹಾಸನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬಿಜೆಪಿ ಒತ್ತಾಯ
ಶ್ರುತಿ ಹಾಸನ್
Follow us
ರಶ್ಮಿ ಕಲ್ಲಕಟ್ಟ
|

Updated on: Apr 07, 2021 | 4:35 PM

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮಂಗಳವಾರ ಮತದಾನ ನಡೆಯುತ್ತಿರುವಾಗ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಮಕ್ಕಳ್ ನೀಧಿ ಮಯ್ಯಂ (MNM) ಸಂಸ್ಥಾಪಕ, ಅಭ್ಯರ್ಥಿ ಕಮಲ ಹಾಸನ್ ಜತೆ ಅವರ ಪುತ್ರಿ ಶ್ರುತಿ ಹಾಸನ್ ಭೇಟಿ ನೀಡಿದ್ದರು. ಇದನ್ನು ಖಂಡಿಸಿದ ತಮಿಳುನಾಡು ಬಿಜೆಪಿ ಘಟಕ ಶ್ರುತಿ ಹಾಸನ್ ಮತಗಟ್ಟೆಗೆ ಭೇಟಿ ನೀಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದೆ.

ಕಮಲ್ ಹಾಸನ್ ಅವರು ಚೆನ್ನೈನಲ್ಲಿ ಮತ ಹಾಕಿದ ನಂತರ ಪುತ್ರಿಯರಾದ ಶ್ರುತಿ ಹಾಸನ್ ಮತ್ತು ಅಕ್ಷರ ಜತೆ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬಂದಿದ್ದರು. ಅಲ್ಲಿ ಮತಗಟ್ಟೆಗಳಿಗೂ ಕಮಲ್ ಭೇಟಿ ನೀಟಿ ನೀಡಿದ್ದರು. ಆ ವೇಳೆ ಶ್ರುತಿ ಹಾಸನ್ ಮತಗಟ್ಟೆಗೆ ಭೇಟಿ ನೀಡಿದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಮತಗಟ್ಟೆಗೆ ಶ್ರುತಿ ಹಾಸನ್ ಭೇಟಿ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಂದಕುಮಾರ್, ಬಿಜೆಪಿ ರಾಷ್ಟ್ರೀಯ ಮಹಿಳಾ ಘಟಕದ ನಾಯಕಿ ವನತಿ ಶ್ರೀನಿವಾಸನ್ ಜಿಲ್ಲಾ ಚುನಾವಣಾ ಅಧಿಕಾರಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮತಗಟ್ಟೆ ಏಜೆಂಟ್ ಅಲ್ಲದೆ ಬೇರೆ ಯಾರೂ ಮತಗಟ್ಟೆಯೊಳಗೆ ಪ್ರವೇಶಿಸುವಂತಿಲ್ಲ ಎಂಬ ನಿಯಮ ಇದೆ. ಆದರೆ ಶ್ರುತಿ ಆ ನಿಯಮ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

ಮತಗಟ್ಟೆಗೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಮಲ್, ಕೆಲವೊಂದು ರಾಜಕೀಯ ಪಕ್ಷಗಳು ಮತದಾರರಿಗೆ ಹಣ ಹಂಚಿವೆ ಎಂದು ಆರೋಪಿಸಿದ್ದರು. ಕೆಲವೊಂದು ಮತಗಟ್ಟೆಗಳಲ್ಲಿ ಸಮಸ್ಯೆಯಾಗಿದೆ. ಆದರೆ ನಮ್ಮ ಪ್ರಧಾನ ದೂರು ಏನೆಂದರೆ ನಿನ್ನೆ ರಾತ್ರಿಯಿಂದ ರಾಜಕೀಯ ಪಕ್ಷಗಳು ಜನರಿಗೆ ಹಣ ಹಂಚಿವೆ. ಅವರು ತುಂಬಾ ಮೋಸದಿಂದ ಮತ್ತು ತ್ವರಿತ ಗತಿಯಲ್ಲಿ ಮಾಡಿದ್ದಾರೆ ಎಂದು ಕಮಲ್ ದೂರಿದ್ದಾರೆ.

ನಾವು ಕೆಲವರನ್ನು ಹಿಡಿದಿದ್ದೇವೆ, ಸಾಕ್ಷ್ಯಗಳು ಇವೆ. ಚುನಾವಣಾ ಆಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಎನ್​ಡಿ​ಟಿವಿ ಜತೆ ಮಾತನಾಡಿದ ಕಮಲ್ ಹೇಳಿದ್ದಾರೆ. ಈ ಕೃತ್ಯವನ್ನು ಖಂಡಿಸಿ ನಾನು ಪ್ರತಿಭಟನೆ ನಡೆಸುವುದಾಗಲೀ, ಮತದಾನ ಪ್ರಕ್ರಿಯೆಗೆ ತಡೆಯೊಡ್ಡುವುದಾಗಲೀ ಮಾಡುವುದಿಲ್ಲ. ನಾನು ಇಲ್ಲಿ ದೂರು ನೀಡಲು ಬಂದಿದ್ದೇನೆ ಎಂದಿದ್ದಾರೆ ಕಮಲ್.

ಚುನಾವಣಾ ಫಲಿತಾಂಶದ ಬಗ್ಗೆ ನಾನು ಧನಾತ್ಮಕವಾಗಿ ಚಿಂತಿಸುತ್ತಿದ್ದೇನೆ. ನಾನು ಕಮಲ್ ಹಾಸನ್ ಜತೆಗೆ ಬಂದಿದ್ದೇನೆ. ನಾನು ಅವರ ಮಗಳು, ಹಾಗಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ಎಲ್ಲವೂ ಸರಿಹೋಗಲಿ ಎಂದು ಆಶಿಸುತ್ತೇನೆ ಎಂದು ಶ್ರುತಿ ಹಾಸನ್ ಪ್ರತಿಕ್ರಿಯಿಸಿದ್ದಾರೆ.

ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಕ್ಕಳ್ ನೀಧಿ ಮಯ್ಯಂ ಪಕ್ಷದಿಂದ ಕಮಲ್ ಹಾಸನ್ ಸ್ಪರ್ಧಿಸುತ್ತಿದ್ದು ಬಿಜೆಪಿಯ ವನತಿ ಶ್ರೀನಿವಾಸನ್, ಕಾಂಗ್ರೆಸ್ ಪಕ್ಷದ ಮಯೂರ ಎಸ್. ಜಯಕುಮಾರ್ ಕಣದಲ್ಲಿದ್ದಾರೆ.

ಡಿಎಂಕೆ ಹಣ ವಿತರಿಸುತ್ತಿರುವುದನ್ನು ನೋಡಿದ್ದೇವೆ : ಖುಷ್ಬೂ ಸುಂದರ್ ಡಿಎಂಕೆ ಕಾರ್ಯಕರ್ತರು ಮತದಾರರರಿಗೆ ಹಣ ವಿತರಿಸುತ್ತಿರುವುದನ್ನು ನಾವು ನೋಡಿದ್ದೇವೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಾವು ದೂರು ನೀಡಿದ್ದೇವೆ. ಅಡ್ಡದಾರಿ ಮೂಲಕ ಡಿಎಂಕೆ ಗೆಲ್ಲಲು ಪ್ರಯತ್ನಿಸುತ್ತಿದೆ ಎಂದು ಥೌಸಂಡ್ ಲೈಟ್ಸ್ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ಹೇಳಿದ್ದಾರೆ.

ಇದನ್ನೂ ಓದಿ:   Tamil Nadu Elections 2021: ತಮಿಳುನಾಡಿನಲ್ಲಿ ಚುನಾವಣೆಗೆ ಮುನ್ನ ಹಣ ಹಂಚಲಾಗಿತ್ತು: ಕಮಲ್ ಹಾಸನ್ ಆರೋಪ

Tamil Nadu Election 2021: ‘ನಾನು ರಾಜಕೀಯಕ್ಕಾಗಿ ಸಿನಿಮಾವನ್ನು ಸಂಪೂರ್ಣವಾಗಿ ಬಿಡಲೂ ಸಿದ್ಧನಿದ್ದೇನೆ..‘- ಕಮಲ್​ ಹಾಸನ್​

(BJP filed a Complaint against Kamal Haasan daughter Shruti Haasan for Trespassing into Polling booth)

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್