BJP Campaign Song: 12 ಭಾಷೆಗಳಲ್ಲಿ ಚುನಾವಣಾ ಪ್ರಚಾರ ಗೀತೆಗಳನ್ನು ಬಿಡುಗಡೆ ಮಾಡಿದ ಬಿಜೆಪಿ

|

Updated on: Apr 10, 2024 | 11:29 AM

ಮುಂಬರುವ ಲೋಕಸಭೆ ಚುನಾವಣೆ(Lok Sabha Election)ಗೆ ಬಿಜೆಪಿ ಪಕ್ಷದ ಹೊಸ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದೆ. ‘ಸಪ್ನೆ ನಹೀ ಹಕೀಕತ್ ಬುನತೇ ಹೈ, ತಭೀ ತೋ ಸಬ್ ಮೋದಿ ಕೋ ಚುನ್ತೇ ಹೈ’ ಅಂದರೆ ಜನರು ನಂಬುವುದು ಕನಸುಗಳನ್ನಲ್ಲ, ವಾಸ್ತವವನ್ನು ಹೀಗಾಗಿಯೇ ಮೋದಿಯನ್ನು ಆಯ್ಕೆ ಮಾಡುತ್ತಾರೆ ಎನ್ನುವ ಅರ್ಥವುಳ್ಳ ಸಾಲುಗಳನ್ನು ರಚಿಸಲಾಗಿದೆ.

BJP Campaign Song: 12 ಭಾಷೆಗಳಲ್ಲಿ ಚುನಾವಣಾ ಪ್ರಚಾರ ಗೀತೆಗಳನ್ನು ಬಿಡುಗಡೆ ಮಾಡಿದ ಬಿಜೆಪಿ
ನರೇಂದ್ರ ಮೋದಿ
Follow us on

ಮುಂಬರುವ ಲೋಕಸಭೆ ಚುನಾವಣೆ(Lok Sabha Election)ಗೆ ಬಿಜೆಪಿ ಪಕ್ಷದ ಹೊಸ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದೆ. ಭಾರತ್ ಕಾ ಬೇಟಾ ಮೋದಿ ಚಲಾ ಭಾರತ್ ಕಾ ಮಾನ್ ಬಢಾನೆ ಕೋ ಎನ್ನುವ ಸಾಲುಗಳ ಅದ್ಭುತ ಗೀತೆಯನ್ನು ರಚಿಸಲಾಗಿದೆ. ಒಟ್ಟು 12 ಭಾಷೆಗಳಲ್ಲಿ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಲು ಭಾರತದ ಪುತ್ರ ಮೋದಿ ಹೊರಟಿದ್ದಾರೆ ಎನ್ನುವ ಅರ್ಥವನ್ನು ಇದು ನೀಡುತ್ತದೆ.

ಇದಕ್ಕೂ ಮುನ್ನ  ‘ಸಪ್ನೆ ನಹೀ ಹಕೀಕತ್ ಬುನತೇ ಹೈ, ತಭೀ ತೋ ಸಬ್ ಮೋದಿ ಕೋ ಚುನ್ತೇ ಹೈ’ ಅಂದರೆ ಜನರು ನಂಬುವುದು ಕನಸುಗಳನ್ನಲ್ಲ, ವಾಸ್ತವವನ್ನು ಹೀಗಾಗಿಯೇ ಮೋದಿಯನ್ನು ಆಯ್ಕೆ ಮಾಡುತ್ತಾರೆ ಎನ್ನುವ ಅರ್ಥವುಳ್ಳ ಸಾಲುಗಳನ್ನು ರಚಿಸಲಾಗಿತ್ತು.

ಈ ಗೀತೆ ಅಯೋಧ್ಯೆಯಲ್ಲಿ ರಾಮಮಂದಿರ, ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು, ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜವನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರ, ಮಹಿಳಾ ಶಕ್ತಿಯ ಪ್ರಚಾರವನ್ನು ಒಳಗೊಂಡಿದೆ.

ಬಿಜೆಪಿ ಸರ್ಕಾರದ ನೀತಿಗಳಿಂದಾಗಿ ಭ್ರಷ್ಟರು ಭಯದಿಂದ ನಡುಗುತ್ತಿದ್ದಾರೆ ಎಂದು ಗೀತೆಯಲ್ಲಿ ಹೇಳಲಾಗಿದೆ.
ಜನವರಿಯಲ್ಲಿ ಪಕ್ಷವು 2024ರ ಚುನಾವಣಾ ಪ್ರಚಾರವನ್ನು ಪ್ರಧಾನಿ ಮೋದಿಯವರಿಗೆ ಅರ್ಪಿಸಿದ ಹಾಡಿನ ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು.

ಡಿಸೆಂಬರ್​ನಲ್ಲಿ ಮೋದಿ ಮತ್ತೆ ಬರುತ್ತಾರೆ ಎಂಬ ವಿಡಿಯೋವನ್ನು ಪಕ್ಷ ಬಿಡುಗಡೆ ಮಾಡಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ ಯಶಸ್ವಿಯಾಗಿ ಲ್ಯಾಡಿಂಗ್​ ಆಗಿರುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ಇತ್ತೀಚಿನ ಸಾಧನೆಗಳನ್ನು ವಿಡಿಯೋ ತೋರಿಸುತ್ತದೆ.

ಮತ್ತಷ್ಟು ಓದಿ: ತಬೀ ತೋ ಸಬ್ ಮೋದಿ ಕೋ ಚುನ್ತೇ ಹೈ; ಲೋಕಸಭಾ ಚುನಾವಣಾ ಪ್ರಚಾರ ಗೀತೆ ಬಿಡುಗಡೆ ಮಾಡಿದ ಬಿಜೆಪಿ

 

ವಿಡಿಯೋ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 370 ಸ್ಥಾನಗಳನ್ನು ಗಳಿಸುವ ಗುರಿಯನ್ನು ಹೊಂದಿದ್ದು, ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) 400 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಗುರಿಯನ್ನು ಹೊಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ