ಪೊಲೀಸ್​ ವರ್ಗಾವಣೆಯಲ್ಲಿ ಮಹಾ ಕರ್ಮಕಾಂಡ: ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಗಂಭೀರ ಆರೋಪ

|

Updated on: Mar 23, 2021 | 12:39 PM

ಈ ಮಧ್ಯೆ ತಮ್ಮ ಮೇಲಿನ ಪ್ರತಿ ತಿಂಗಳ 100 ಕೋಟಿ ವಸೂಲಿ ಭ್ರಷ್ಟಾಚಾರ ಆರೋಪವನ್ನು ತಳ್ಳಿಹಾಕಿರುವ ಅನಿಲ್ ದೇಶ್​ಮುಖ್, ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ತಮ್ಮ ಮೇಲಿನ ಎಲ್ಲ ಆರೋಪಗಳೂ ಸತ್ಯಕ್ಕೆ ದೂರು ಎಂದು ಅವರು ಪ್ರತಿಪಾದಿಸಿದ್ದಾರೆ.

ಪೊಲೀಸ್​ ವರ್ಗಾವಣೆಯಲ್ಲಿ ಮಹಾ ಕರ್ಮಕಾಂಡ: ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಗಂಭೀರ ಆರೋಪ
ದೇವೇಂದ್ರ ಫಡ್ನವಿಸ್
Follow us on

ಮುಂಬೈ: ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆಯಲ್ಲಿ ಪರಮ ಭ್ರಷ್ಟಾಚಾರ ನಡೆಯುತ್ತಿದೆ. ಈ ಕುರಿತು ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಯನ್ನು ಭೇಟಿ ಮಾಡಿ 6.3 ಜಿಬಿ ಡಾಟಾ ಮತ್ತು ಕೆಲವು ದಾಖಲಾತಿಗಳನ್ನು ಸಲ್ಲಿಸುವುದಾಗಿ ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದರು.
ಇಂದು ಬೆಳಗ್ಗೆ (ಮಾರ್ಚ್ 23) ಪತ್ರಿಕಾಗೋಷ್ಠಿ ನಡೆಸಿದ ಅವರು, ಅಧಿಕೃತವಾಗಿ ಸಂಗ್ರಹಿಸಲಾಗುವ ವಿಐಪಿಗಳ ಚಲನವಲನ ಮಾಹಿತಿಯ ಪ್ರಕಾರ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಫೆಬ್ರವರಿ 17ರಂದು ಸಹ್ಯಾದ್ರಿ ಗೆಸ್ಟ್​ಹೌಸ್​ಗೆ ತೆರಳಿದ್ದರು. 24ಕ್ಕೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಎನ್​ಸಿಪಿ ವರಿಷ್ಠ ಶರದ್ ಪವಾರ್ ಹೇಳಿದಂತೆ ಫೆಬ್ರವರಿ 15ರಿಂದ 27ರವರೆಗೆ ಐಸೊಲೇಶನ್​ನಲ್ಲಿ ಇದ್ದಿರಲಿಲ್ಲ ಎಂದು ಅವರು ಆರೋಪಿಸಿದರು.

ಗೃಹ ಸಚಿವ ಅನಿಲ್ ದೇಶ್​ಮುಖ್ ಕೊರೊನಾ ಕ್ವಾರಂಟೈನ್ ಮತ್ತು ಐಸೊಲೇಶನ್ ಬಗ್ಗೆ ಎನ್​ಸಿಪಿ ವರಿಷ್ಠ ಶರದ್ ಪವಾರ್ ತಪ್ಪು ಮಾಹಿತಿ ನೀಡಿದ್ದಾರೆ.  ಫೆಬ್ರವರಿ 15ರಂದು ಅನಿಲ್ ದೇಶ್​ಮುಖ್ ಹೋಂ ಕ್ವಾರಂಟೈನ್​ನಲ್ಲಿ ಇರಲಿಲ್ಲ, ಖಾಸಗಿ ವಿಮಾನದಲ್ಲಿ ಮುಂಬಯಗೆ ಆಗಮಿಸಿದ್ದ ಅವರು ಅಂದು ಹಲವು ಅಧಿಕಾರಿಗಳನ್ನು ಭೇಟಿಯಾಗಿದ್ದರು. ಶರದ್ ಪವಾರ್ ಪ್ರಕರಣದ ಕುರಿತು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ನಾಯಕರೂ ಆಗಿರುವ ದೇವೇಂದ್ರ ಫಡ್ನವೀಸ್ ಆರೊಪಿಸಿದರು.

ಈ ಮಧ್ಯೆ ತಮ್ಮ ಮೇಲಿನ ಪ್ರತಿ ತಿಂಗಳ 100 ಕೋಟಿ ವಸೂಲಿ ಭ್ರಷ್ಟಾಚಾರ ಆರೋಪವನ್ನು ತಳ್ಳಿಹಾಕಿರುವ ಅನಿಲ್ ದೇಶ್​ಮುಖ್, ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ತಮ್ಮ ಮೇಲಿನ ಎಲ್ಲ ಆರೋಪಗಳೂ ಸತ್ಯಕ್ಕೆ ದೂರು ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ನಿನ್ನೆ ಮಹಾರಾಷ್ಟ್ರದಾದ್ಯಂತ ಫೆಬ್ರವರಿ 15ರಂದು ಅನಿಲ್ ದೇಶ್​ಮುಖ್ ಹೆಸರಿನಲ್ಲಿ ಇರುವ ಖಾಸಗಿ ವಿಮಾನ ಟಿಕೆಟ್ ಒಂದರ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ವಿಡಿಯೋದಲ್ಲಿ ಅನಿಲ್ ದೆಶ್​ಮುಖ್ ತಮ್ಮ ಕುರಿತು ಸುಳ್ಳು ಸುದ್ದಿಗಳು ಹಡಿದಾಡುತ್ತಿದ್ದು, ಅವುಗಳನ್ನು ನಂಬದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ’ಕೊರೊನಾ ಲಾಕ್​ಡೌನ್​​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳಲ್ಲಿ ನೈತಿಕ ಸ್ಥೈರ್ಯ ತುಂಬಲು ರಾಜ್ಯಾದ್ಯಂತ ಓಡಾಟ ನಡೆಸಿದ್ದೇನೆ.

ಅನಿಲ್ ದೇಶ್​ಮುಖ್

ಫೆಬ್ರವರಿ 5ರಂದು ನನಗೂ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಫೆಬ್ರವರಿ 15ರವರೆಗೆ ಕ್ವಾರಂಟೈನ್​ನಲ್ಲಿದ್ದೆ. ನಂತರ 16ರಿಂದ 27ರವರೆಗೆ ವೈದ್ಯರ ಸಲಹೆ ಮೇರೆಗೆ ಐಸೊಲೇಶನ್​ನಲ್ಲಿದ್ದೆ. ಈ ಅವಧಿಯಲ್ಲಿ ಕೇವಲ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜತೆ ಸಭೆ ನಡೆಸಿದ್ದೆ’ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಗೃಹ ಸಚಿವ ಅನಿಲ್ ದೇಶ್​ಮುಖ್ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸಲು ಸಚಿನ್ ವಾಜೆ ಮೇಲೆ ಒತ್ತಡ ಹೇರಿದ್ದರು; ಉದ್ಧವ್ ಠಾಕ್ರೆಗೆ ಪತ್ರ ಬರೆದ ಪರಮ್​ವೀರ್ ಸಿಂಗ್

ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ತನಿಖೆಯ ದಾರಿ ತಪ್ಪಿಸಲು ₹ 100 ಕೋಟಿ ಭ್ರಷ್ಟಾಚಾರದ ಆರೋಪ: ಶರದ್ ಪವಾರ್

Published On - 12:38 pm, Tue, 23 March 21