ಜಮ್ಮು-ಕಾಶ್ಮೀರದ ಕುಲಗಾಂವ್ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿ (BJP)ಯ ಮುಖಂಡರೊಬ್ಬರನ್ನು ಉಗ್ರರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಜಾವೇದ್ ಅಹ್ಮದ್ ದಾರ್ ಮೃತ ಬಿಜೆಪಿ ಮುಖಂಡ. ಇವರು ಹೋಮ್ಶಾಲಿಬಗ್ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿದ್ದರು. ಇಂದು ಕುಲಗಾಂವ್ನ ಬ್ರಜ್ಲೂ-ಜಾಗಿರ್ ಎಂಬಲ್ಲಿ ಉಗ್ರರಿಂದ ಗುಂಡಿನ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗುತ್ತಿರುವ ಎರಡನೇ ಬಿಜೆಪಿ ಮುಖಂಡ ಇವರಾಗಿದ್ದಾರೆ. ಜಾವೇದ್ ಅಹ್ಮದ್ ದಾರ್ ಹತ್ಯೆಯನ್ನು, ಕಾಶ್ಮೀರದ ಬಿಜೆಪಿಯ ಮಾಧ್ಯಮ ವಿಭಾಗದ ಮುಖ್ಯಸ್ಥರ ಮನ್ಜೂರ್ ಅಹ್ಮದ್ ಸೇರಿ ಹಲವು ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಆಗಸ್ಟ್ 9ರಂದು ಬಿಜೆಪಿ ನಾಯಕ ಗುಲಾಮ್ ರಸೂಲ್ ದಾರ್ ಮತ್ತು ಅವರ ಪತ್ನಿ ಜವಹಾರಾ ಬಾನೂ ಅವರನ್ನು ಮನೆಯಿಂದ ಎಳೆದುಕೊಂಡು ಬಂದು ಗುಂಡು ಹಾರಿಸಿದ್ದರು. ಈ ದುರ್ಘಟನೆ ಅನಂತ್ನಾಗ್ ಜಿಲ್ಲೆಯ ಲಾಲ್ಚೌಕ್ ಬಳಿ ನಡೆದಿತ್ತು. 65ವರ್ಷ ಗುಲಾಮ್ ದಾರ್, ಕುಲಗಾಂವ್ ಜಿಲ್ಲೆಯ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ: Multibagger 2021: 1.20 ಲಕ್ಷ ರೂಪಾಯಿ ಮೊತ್ತವು 5 ವರ್ಷದಲ್ಲಿ 62 ಲಕ್ಷ ರೂಪಾಯಿ ಆದ ಮಲ್ಟಿಬ್ಯಾಗರ್ ಇದು
‘542 ಸದಸ್ಯರ ಮುಂದೆ ಸಚಿವರ ಪರಿಚಯ ಮಾಡಲು ಕಾಂಗ್ರೆಸ್ ಬಿಡಲಿಲ್ಲ; ದೇಶದ 135 ಕೋಟಿ ಜನರ ಮುಂದೆ ನಾವು ಹೋಗುತ್ತೇವೆ’
Published On - 6:06 pm, Tue, 17 August 21