AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲಿಬಾನ್​ನಿಂದ ನಿರ್ವಹಿಸಲ್ಪಡುವ, ಉಗ್ರಸಂಘಟನೆಗೆ ಬೆಂಬಲ ಸೂಚಿಸುವ ಖಾತೆಗಳನ್ನು ನಿಷೇಧಿಸುವುದಾಗಿ ಫೇಸ್​ಬುಕ್​ ಘೋಷಣೆ

ನಾವೀಗ ನಮ್ಮ ಅಪಾಯಕಾರಿ ಸಂಸ್ಥೆ ನೀತಿಗಳಡಿ ತಾಲಿಬಾನ್​ನ್ನು ನಿಷೇಧಿಸುತ್ತಿದ್ದೇವೆ. ಅಂದರೆ, ತಾಲಿಬಾನ್​ ಮತ್ತು ಆ ಸಂಘಟನೆ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಫೇಸ್​ಬುಕ್​ ಖಾತೆಗಳನ್ನು ತೆಗೆದುಹಾಕುತ್ತೇವೆ ಎಂದು ಫೇಸ್​​ಬುಕ್​ ಹೇಳಿಕೊಂಡಿದೆ.

ತಾಲಿಬಾನ್​ನಿಂದ ನಿರ್ವಹಿಸಲ್ಪಡುವ, ಉಗ್ರಸಂಘಟನೆಗೆ ಬೆಂಬಲ ಸೂಚಿಸುವ ಖಾತೆಗಳನ್ನು ನಿಷೇಧಿಸುವುದಾಗಿ ಫೇಸ್​ಬುಕ್​ ಘೋಷಣೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 17, 2021 | 4:59 PM

Share

ಕಾಬೂಲ್​: ತಾಲಿಬಾನ್ (Taliban)​ಗೆ ಬೆಂಬಲ ಸೂಚಿಸಿ ಯಾವುದೇ ಪೋಸ್ಟ್​​ಗಳನ್ನು ಹಾಕುವುದನ್ನು ನಿಷೇಧಿಸುವುದಾಗಿ ಫೇಸ್​ಬುಕ್ (Facebook)​ ಹೇಳಿಕೊಂಡಿದೆ. ತಾಲಿಬಾನ್​ ಒಂದು ಉಗ್ರಸಂಘಟನೆಯಾಗಿದ್ದು, ಅದನ್ನು ನಾವು ನಿಷೇಧಿಸುತ್ತೇವೆ. ಹಾಗೇ, ತಾಲಿಬಾನ್​ಗೆ ಬೆಂಬಲ ಸೂಚಿಸಿ ಪೋಸ್ಟ್​​ಗಳನ್ನು ಹಾಕುವವರನ್ನು, ಬರಹಗಳನ್ನು ಬರೆಯುವವರನ್ನೂ ನಿಷೇಧಿಸುತ್ತೇವೆ ಎಂದು ಫೇಸ್​ಬುಕ್​ ಹೇಳಿಕೊಂಡಿದೆ. ಇನ್ನು ಅಫ್ಘಾನ್​​ನಲ್ಲಿ ತಜ್ಞರ ತಂಡವೊಂದು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ತಾಲಿಬಾನ್​ ಉಗ್ರಗುಂಪಿಗೆ ಸಂಬಂಧಪಟ್ಟ ಬರಹಗಳು, ಪೋಸ್ಟ್​ಗಳನ್ನು ಫೇಸ್​​ಬುಕ್​​ನಿಂದ ತೆಗೆದುಹಾಕಲೆಂದೇ ಆ ತಂಡವನ್ನು ನೇಮಕ ಮಾಡಲಾಗಿದೆ ಎಂದೂ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್​ಬುಕ್​ ಹೇಳಿಕೊಂಡಿದೆ.

ಕಳೆದ ಹಲವು ವರ್ಷಗಳಿಂದಲೂ ತಾಲಿಬಾನ್​ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸಂದೇಶವನ್ನು ರವಾನಿಸುತ್ತಿದೆ. ಆದರೆ ಯುಎಸ್​ ಕಾನೂನಿನಡಿ ತಾಲಿಬಾನ್​​ನ್ನು ಉಗ್ರರ ಸಂಘಟನೆ ಎಂದೇ ಪರಿಗಣಿಸಲಾಗಿದೆ. ನಾವೀಗ ನಮ್ಮ ಅಪಾಯಕಾರಿ ಸಂಸ್ಥೆ ನೀತಿಗಳಡಿ ತಾಲಿಬಾನ್​ನ್ನು ನಿಷೇಧಿಸುತ್ತಿದ್ದೇವೆ. ಅಂದರೆ, ತಾಲಿಬಾನ್​ ಮತ್ತು ಆ ಸಂಘಟನೆ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಫೇಸ್​ಬುಕ್​ ಖಾತೆಗಳನ್ನು ತೆಗೆದುಹಾಕುತ್ತೇವೆ. ಇನ್ನು ತಾಲಿಬಾನ್​​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುವವರ, ಬೆಂಬಲ ಸೂಚಿಸುವವರ ಹಾಗೂ ಅದಕ್ಕೆ ಪ್ರಾತಿನಿಧ್ಯ ನೀಡುವವರ ಖಾತೆಗಳನ್ನೂ ನಿಷೇಧಿಸುತ್ತೇವೆ ಎಂದು ಫೇಸ್​​ಬುಕ್​ ವಕ್ತಾರರೊಬ್ಬರು ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ಹೇಳಿದ್ದಾರೆ.

ಇದರರ್ಥ ನಾವು ತಾಲಿಬಾನ್ ಅಥವಾ ಅವರ ಪರವಾಗಿ ನಿರ್ವಹಿಸುವ ಖಾತೆಗಳನ್ನು ತೆಗೆದುಹಾಕುತ್ತೇವೆ ಮತ್ತು ಅವರ ಪ್ರಶಂಸೆ, ಬೆಂಬಲ ಮತ್ತು ಪ್ರಾತಿನಿಧ್ಯವನ್ನು ನಿಷೇಧಿಸುತ್ತೇವೆ ಎಂದು ಫೇಸ್ಬುಕ್ ವಕ್ತಾರರು ಹೇಳಿದ್ದಾರೆ. ಇದೀಗ ಅಫ್ಘಾನ್​​ನಲ್ಲಿ ಫೇಸ್​ಬುಕ್​ ಸಂಸ್ಥೆಯಿಂದ ನೇಮಕ ಮಾಡಲಾದ ತಂಡದಲ್ಲಿ, ಸ್ಥಳೀಯ ಭಾಷಿಕರು, ಸ್ಥಳೀಯ ಸನ್ನಿವೇಶದ ಅರಿವು ಇರುವವರೇ ಇದ್ದಾರೆ ಎಂದೂ ಅವರು ತಿಳಿಸಿದ್ದಾರೆ. ನಮ್ಮ ಈ ನಿಷೇಧ ನೀತಿ ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಂನಲ್ಲೂ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಿದೆ. ಹಾಗೇ, ನಾವೂ ಕೂಡ ಹಿಂಸಾಚಾರವನ್ನು ಉತ್ತೇಜಿಸುವುದಿಲ್ಲ ಎಂದು ಟ್ವಿಟರ್​ ಹೇಳಿಕೊಂಡಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಘಟನೆಗಳಿಗೆ ಮಾನವೀಯತೆಯಿಂದ ನಾವು ಪ್ರತಿಕ್ರಿಯಿಸಬೇಕಿದೆ: ಹೆಚ್​ಡಿ ದೇವೇಗೌಡ ಟ್ವೀಟ್

ಕೆಲಸಕ್ಕೆ ಹಿಂದಿರುಗುವಂತೆ ಅಫ್ಘಾನ್​ ಸರ್ಕಾರಿ ನೌಕರರಿಗೆ ಕರೆಕೊಟ್ಟ ತಾಲಿಬಾನ್​ ಉಗ್ರರು; ಮಹಿಳೆಯರಿಗೂ ಆಹ್ವಾನ

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?