AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟ್ವಿಟರ್​ ಹಕ್ಕಿ’​​ಯನ್ನು ಎಣ್ಣೆಯಲ್ಲಿ ಫ್ರೈ ಮಾಡಿದ ರಾಹುಲ್​ ಗಾಂಧಿ ಬೆಂಬಲಿಗರು; ಇದು ಪ್ರತಿಭಟನೆಯಂತೆ !

ಟ್ವಿಟರ್​, ನೀನು ರಾಹುಲ್​ ಗಾಂಧಿಯವರ ಖಾತೆ ಲಾಕ್​ ಮಾಡುವ ಮೂಲಕ ದೊಡ್ಡ ಪ್ರಮಾದ ಮಾಡಿರುವೆ. ಅದರೊಂದಿಗೆ ನಮ್ಮ ಅಂದರೆ ಕಾಂಗ್ರೆಸ್ಸಿಗರ ಟ್ವೀಟ್​ಗಳನ್ನೂ ಪ್ರಮೋಟ್​ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

‘ಟ್ವಿಟರ್​ ಹಕ್ಕಿ'​​ಯನ್ನು ಎಣ್ಣೆಯಲ್ಲಿ ಫ್ರೈ ಮಾಡಿದ ರಾಹುಲ್​ ಗಾಂಧಿ ಬೆಂಬಲಿಗರು; ಇದು ಪ್ರತಿಭಟನೆಯಂತೆ !
ಟ್ವಿಟರ್ ಹಕ್ಕಿಯನ್ನು ಫ್ರೈ ಮಾಡಿ ಪ್ರತಿಭಟನೆ ನಡೆಸಿದ ರಾಹುಲ್​ ಗಾಂಧಿ ಬೆಂಬಲಿಗರು
TV9 Web
| Edited By: |

Updated on: Aug 17, 2021 | 5:27 PM

Share

ಇತ್ತೀಚೆಗೆ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ(Rahul Gandhi)ಯವರ ಟ್ವಿಟರ್ ಅಕೌಂಟ್ (Twitter Account)​ನ್ನು ತಾತ್ಕಾಲಿಕವಾಗಿ ಲಾಕ್​ ಮಾಡಲಾಗಿತ್ತು. ಟ್ವಿಟರ್​ನ ಈ ಕ್ರಮವನ್ನು ದೇಶಾದ್ಯಂತ ರಾಹುಲ್​ ಬೆಂಬಲಿಗರು ವಿರೋಧಿಸುತ್ತಿದ್ದಾರೆ. ಟ್ವಿಟರ್​ ಕೇಂದ್ರ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ (Central Government)ದ ಮಾತು ಕೇಳಿ ರಾಹುಲ್​ ಗಾಂಧಿಯವರ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಂಡಿದೆ ಎಂಬಿತ್ಯಾದಿ ಆರೋಪಗಳನ್ನೂ ಮಾಡಲಾಗಿದೆ. ಆದರೆ ಇದೆಲ್ಲಕ್ಕಿಂತ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದು ಆಂಧ್ರಪ್ರದೇಶದ ಕಾಂಗ್ರೆಸ್​ ಕಾರ್ಯಕರ್ತರು (Congress Workers) !

ರಾಹುಲ್​ ಗಾಂಧಿಯವರ ಖಾತೆಯನ್ನು ತಾತ್ಕಾಲಿಕವಾಗಿ ನಿಷೇಧ ಮಾಡಿದ್ದನ್ನು ವಿರೋಧಿಸಿ ಆಂಧ್ರಪ್ರದೇಶ ಕಾಂಗ್ರೆಸ್​ ಕಾರ್ಯಕರ್ತರು ಟ್ವಿಟರ್​ ಬರ್ಡ್​​ (ಟ್ವಿಟರ್​ ಸಂಸ್ಥೆಯ ಗುರುತಾದ ಚಿಕ್ಕ ಹಕ್ಕಿ)ನ್ನು ಫ್ರೈ ಮಾಡಿದ್ದಾರೆ. ಅಂದರೆ ಎಣ್ಣೆಯಲ್ಲಿ ಹಾಕಿ ಕರಿದಿದ್ದಾರೆ. ಅಂದರೆ ಅದೇನೋ ಹಿಟ್ಟಿನಲ್ಲಿ ಪುಟ್ಟ ಹಕ್ಕಿಯಾಕಾರ ಸೃಷ್ಟಿಸಿ, ಅದನ್ನು ಎಣ್ಣೆಯಲ್ಲಿ ಹಾಕಿ ಕರಿದಿದ್ದಾರೆ ಮತ್ತು ಟ್ವಿಟರ್​ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ.

‘ಟ್ವಿಟರ್​, ನೀನು ರಾಹುಲ್​ ಗಾಂಧಿಯವರ ಖಾತೆ ಲಾಕ್​ ಮಾಡುವ ಮೂಲಕ ದೊಡ್ಡ ಪ್ರಮಾದ ಮಾಡಿರುವೆ. ಅದರೊಂದಿಗೆ ನಮ್ಮ ಅಂದರೆ ಕಾಂಗ್ರೆಸ್ಸಿಗರ ಟ್ವೀಟ್​ಗಳನ್ನೂ ಪ್ರಮೋಟ್​ ಮಾಡುತ್ತಿಲ್ಲ. ಹಾಗಾಗಿ ನಾವು ಈ ಟ್ವಿಟರ್​ ಬರ್ಡ್​​ನ್ನು ಫ್ರೈ ಮಾಡುತ್ತಿದ್ದೇವೆ. ಹಾಗೇ ಈ ಬರ್ಡ್​​ ಫ್ರೈನ್ನು ಗುರುಗ್ರಾಮ ಮತ್ತು ದೆಹಲಿಯಲ್ಲಿರುವ ಟ್ವಿಟರ್​ನ ಪ್ರಧಾನ ಕಚೇರಿಗೆ ಕಳಿಸುತ್ತೇವೆ. ನಿಮ್ಮ ತಿನಿಸನ್ನು ನೀವು ಖಂಡಿತ ಎಂಜಾಯ್​ ಮಾಡುತ್ತೀರೆಂಬ ನಂಬಿಕೆ ಇದೆ ಎಂದು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ.

ಕಳೆದ ಕೆಲವು ದಿನಗಳ ಹಿಂದೆ ದೆಹಲಿ ಚಿತಾಗಾರವೊಂದರಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಆಗಿತ್ತು. ತಣ್ಣೀರು ತರಲು ಹೋಗಿದ್ದ 9 ವರ್ಷದ ಬಾಲಕಿ ಮೇಲೆ ಆ ಚಿತಾಗಾರದ ಅರ್ಚಕ ಮತ್ತು ಆತನ ಸಹಾಯಕರು ರೇಪ್​ ಮಾಡಿದ್ದರು. ಸಂತ್ರಸ್ತೆಯ ಪಾಲಕರಿಗೆ ಸಮಾಧಾನ ಹೇಳಲು ಹೋಗಿದ್ದ ರಾಹುಲ್​ ಗಾಂಧಿ, ಅವರ ಫೋಟೋಗಳನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಕಾನೂನು ಪ್ರಕಾರ ಇದು ತಪ್ಪು. ಅತ್ಯಾಚಾರ ಸಂತ್ರಸ್ತೆಯ ಪಾಲಕರ ಫೋಟೋ ಹಾಕಿದ್ದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಟ್ವಿಟರ್​ ಇಂಡಿಯಾಕ್ಕೆ ತಿಳಿಸಿತ್ತು. ಹಾಗೇ, ದೆಹಲಿ ಮೂಲದ ವಕೀಲರೊಬ್ಬರು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. ಅದಾದ ಬಳಿಕ ಟ್ವಿಟರ್​ ರಾಹುಲ್​ ಗಾಂಧಿಯವರ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್​ ಮಾಡಿತ್ತು.

ಇದನ್ನೂ ಓದಿ: ತಾಲಿಬಾನ್​ನಿಂದ ನಿರ್ವಹಿಸಲ್ಪಡುವ, ಉಗ್ರಸಂಘಟನೆಗೆ ಬೆಂಬಲ ಸೂಚಿಸುವ ಖಾತೆಗಳನ್ನು ನಿಷೇಧಿಸುವುದಾಗಿ ಫೇಸ್​ಬುಕ್​ ಘೋಷಣೆ

ಬೆಂಗಳೂರಿನ ಸಿಂಪಲ್ ಎನರ್ಜಿ ಕಂಪನಿಯೂ ತನ್ನ ಸಿಂಪಲ್ ವನ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?