ಆಗ್ರಾ: ಇಲ್ಲಿನ ಮಸೀದಿಯೊಂದರ ಮೇಲೆ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿದ ಬಿಜೆಪಿ ಮುಖಂಡನೊಬ್ಬರಿಗೆ ಈಗ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಘಟನೆಯಿಂದ ಅಲ್ಲಿ ವಿವಾದ ಸೃಷ್ಟಿಯಾಗಿದ್ದು, ಕಾಂಗ್ರೆಸ್ನ ಇಬ್ಬರು ನಾಯಕರು ಬೆದರಿಕೆ ಒಡ್ಡಿದ್ದಾರೆ. ಉತ್ತರ ಪ್ರದೇಶ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಶ್ಫಕ್ ಸೈಫಿ ಸ್ವಾತಂತ್ರ್ಯ ದಿನಾಚರಣೆಯಂದು ಮಸೀದಿಯ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದರು. ಇದರಿಂದ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಹೀಗೆ ಮಸೀದಿ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದರಿಂದ, ದೇವರು ಕೋಪಗೊಳ್ಳುತ್ತಾನೆ ಎಂದು ಹೇಳುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ನ ಸ್ಥಳೀಯ ಮುಖಂಡರಾದ ಹಾಜಿ ಜಮಿಲುದ್ದೀನ್ ಮತ್ತು ಸಹರ್ ಮುಫ್ತಿ ಎಂಬುವರು ಅಶ್ಫಕ್ಗೆ ಬೆದರಿಕೆಯನ್ನೂ ಹಾಕಿದ್ದಾರೆ.
ಅಶ್ಫಕ್ ಆಗ್ರಾದ ಜಾಮಾ ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದರು. ಹಾಗೇ ನಂತರ ರಾಷ್ಟ್ರಗೀತೆಯನ್ನೂ ಹಾಡಿದ್ದರು. ಆದರೆ ಇದನ್ನು ಮಸೀದಿ ಮೇಲೆ ಮಾಡಬಾರದಿತ್ತು. ನಿಷೇಧವಿದ್ದರೂ ರಾಷ್ಟ್ರಧ್ವಜ ಹಾರಿಸಿದ್ದು ದೇವರ ಕೋಪಕ್ಕೆ ಕಾರಣವಾಗುತ್ತದೆ ಎಂದು ಸ್ಥಳೀಯರೆಲ್ಲ ಹೇಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಜಮಿಲುದ್ದೀನ್, ಅಶ್ಫಕ್ ನಡೆ ಖಂಡನೀಯ. ಅದರಲ್ಲೂ ನಮ್ಮ ಧಾರ್ಮಿಕ ಸ್ಥಳವನ್ನೂ ರಾಜಕೀಯಗೊಳಿಸಲು ಅವರು ಪ್ರಯತ್ನಿಸಿದರೆ ಖಂಡಿತ ಉತ್ತರ ಪ್ರದೇಶದ ಇಡೀ ಮುಸ್ಲಿಂ ಸಮುದಾಯ ಅಶ್ಫಕ್ ಸೈಫಿ ವಿರುದ್ಧ ತಿರುಗಿಬೀಳಲಿದೆ ಎಂದು ಹೇಳಿದರು.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಉತ್ತರಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ನ ಮಾಜಿ ಮುಖ್ಯಸ್ಥ ವಾಸೀಮ್ ರಿಝ್ವಿ, ನಮ್ಮ ದೇಶದ ತ್ರಿವರ್ಣ ಧ್ವಜಕ್ಕೆ ಅದರ ನೆಲದಲ್ಲೇ ಹಾರಾಡಲು ಅವಕಾಶ ಕೊಡದ ಮೂಲಭೂತವಾದಿಗಳು ಮತ್ತು ಧರ್ಮಗುರುಗಳು ಈ ದೇಶವನ್ನು ಬಿಟ್ಟು ಹೊರಡುವುದು ಒಳಿತು ಎಂದಿದ್ದಾರೆ. ಹೋಗುವಾಗ ಅವರ ಮಸೀದಿಯನ್ನೂ ತೆಗೆದುಕೊಂಡು ಹೋಗಲಿ ಎಂದೂ ತಿರುಗೇಟು ನೀಡಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಲೆಯಲ್ಲಿ ಈ ಬಾರಿ ಆಜಾದಿ ಕಾ ಅಮೃತ ಮಹೋತ್ಸವ್ ಆಚರಣೆ ಮಾಡಲಾಗುತ್ತಿದೆ. ತನ್ನಿಮಿತ್ತ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ 100ನೇ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಆತ್ಮ ನಿರ್ಭರ ಭಾರತ ನಿರ್ಮಾಣವಾಗಿರಬೇಕು ಎಂದಿದ್ದಾರೆ.
ಇದನ್ನೂ ಓದಿ: ಸೈಫ್ ಅಲಿ ಖಾನ್ಗೆ 51ನೇ ಬರ್ತ್ಡೇ; 6 ತಿಂಗಳ ಮಗನ ಫೋಟೋ ವೈರಲ್
On This Day: 123 ವರ್ಷಗಳಲ್ಲಿ ಮೊದಲ ಬಾರಿಗೆ ವಿಶಿಷ್ಟ ರೀತಿಯಲ್ಲಿ ಕ್ರಿಕೆಟ್ ಆಡಲಾಯಿತು..!