ದೆಹಲಿ: : ಅಸ್ಸಾಂನ ಬಿಜೆಪಿ (BJP) ಶಾಸಕರೊಬ್ಬರನ್ನು ಪ್ರವಾಹ ರಕ್ಷಣಾ ಕಾರ್ಯಕರ್ತ ಬೆನ್ನ ಮೇಲೆಹೊತ್ತು ದೋಣಿ ಹತ್ತಿರ ತಲುಪಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video)ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಸ್ಸಾಂನ 27 ಜಿಲ್ಲೆಗಳಲ್ಲಿ 6.6 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ನಲುಗಿದ್ದು ಕನಿಷ್ಠ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ. ಇಂಥಾ ಸಂದರ್ಭದಲ್ಲಿ ಲುಮ್ಡಿಂಗ್ ವಿಧಾನಸಭೆಯ ಶಾಸಕ ಸಿಬು ಮಿಶ್ರಾ ಅವರ ಈ ನಡೆ ಸಂವೇದನೆ ರಹಿತವಾದುದು ಎಂದು ಜನರು ಟೀಕಿಸಿದ್ದಾರೆ. ಮಿಶ್ರಾ ಅವರು ಪ್ರವಾಹ ಪರಿಸ್ಥಿತಿ (Assam Flood) ಪರಿಶೀಲಿಸಲು ಹೊಜೈ ಜಿಲ್ಲೆಗೆ ಬಂದಿದ್ದರು. ಸ್ವಲ್ಪವೇ ದೂರದಲ್ಲಿರುವ ದೋಣಿ ಬಳಿ ಹೋಗಲು ಮೊಣಕಾಲು ಮುಳುಗುವಷ್ಟು ನೀರಲ್ಲಿ ರಕ್ಷಣಾ ಕಾರ್ಯಕರ್ತರೊಬ್ಬರು ಶಾಸಕರನ್ನು ಬೆನ್ನಮೇಲೆ ಹೊತ್ತು ಸಾಗುತ್ತಿರುವ ವಿಡಿಯೊವನ್ನು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಮುಂಗಾರು ಮುನ್ನ ಬಂದ ಭಾರೀ ಮಳೆಗೆ ಅಸ್ಸಾಂನಲ್ಲಿ ಪ್ರವಾಹವುಂಟಾಗಿದ್ದು48,000ಕ್ಕಿಂತಲೂ ಹೆಚ್ಚು ಜನರನ್ನು 248 ಸಂತ್ರಸ್ತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಹೊಜೈ ಮತ್ತು ಕ್ಯಾಚಾರ್ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿವೆ. ಪ್ರತಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ರಕ್ಷಣಾ ಕಾರ್ಯಗಳ ಭಾಗವಾಗಿ ಹೊಜೈ ಜಿಲ್ಲೆಯಲ್ಲಿ ಸಿಲುಕಿದ್ದ 2,000ಕ್ಕೂ ಹೆಚ್ಚು ಜನರನ್ನು ಸೇನೆ ರಕ್ಷಿಸಿದೆ.
#WATCH | Assam: BJP MLA from Lumding Assembly, Sibu Misra was seen taking a piggyback ride to a boat, on the back of a flood rescue worker yesterday, May 18th. He was in Hojai to review the flood situation in the area. pic.twitter.com/Rq0mJ8msxt
ಇದನ್ನೂ ಓದಿ— ANI (@ANI) May 19, 2022
ದಕ್ಷಿಣ ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯು ಇಂದು ಐದನೇ ದಿನವೂ ಸಂಪರ್ಕ ಕಡಿತಗೊಂಡಿದೆ. ಮಳೆಯಿಂದ ಉಂಟಾದ ಭೂಕುಸಿತಗಳಿಂದಾಗಿ ದಿಮಾ ಹಸಾವೊಗೆ ರಸ್ತೆ ಮತ್ತು ರೈಲು ಸಂಪರ್ಕಗಳನ್ನು ಕಡಿತಗೊಂಡಿದೆ.
ಭಾರೀ ಮಳೆಯ ನಂತರ ನೀರಿನ ಮಟ್ಟ ಹೆಚ್ಚಾದ ಕಾರಣ ವಿಶ್ವದ ಅತಿದೊಡ್ಡ ನದಿಗಳಲ್ಲಿ ಒಂದಾದ ಬ್ರಹ್ಮಪುತ್ರದ ಹಳ್ಳಿಗಳು ಜಲಾವೃತವಾಗಿವೆ. ಇದರಿಂದಾಗಿ ಭಾನುವಾರದಿಂದ ಬರಾಕ್ ಕಣಿವೆ ಮತ್ತು ತ್ರಿಪುರಾ, ಮಿಜೋರಾಂ ಮತ್ತು ಮಣಿಪುರದ ಪ್ರಮುಖ ಭಾಗಗಳಿಗೆ ರಸ್ತೆ ಮತ್ತು ರೈಲು ಸಂಪರ್ಕವನ್ನು ಕಡಿತಗೊಂಡಿದೆ.
ಮೃತರ ಕುಟುಂಬಗಳಿಗೆ ಅಸ್ಸಾಂ ಸರ್ಕಾರ ತಲಾ ₹ 4 ಲಕ್ಷ ಆರ್ಥಿಕ ನೆರವು ನೀಡಲಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ