West Bengal ಪಶ್ಚಿಮ ಬಂಗಾಳದಲ್ಲಿ ತನ್ಮಯ್ ಘೋಷ್ ನಂತರ ಟಿಎಂಸಿ ಸೇರಿದ ಬಿಜೆಪಿ ಶಾಸಕ ಬಿಸ್ವಜಿತ್ ದಾಸ್

| Updated By: ರಶ್ಮಿ ಕಲ್ಲಕಟ್ಟ

Updated on: Aug 31, 2021 | 3:52 PM

Biswajit Das: ಟಿಎಂಸಿಯಿಂದ ಎರಡು ಬಾರಿ ಶಾಸಕರಾಗಿದ್ದ ದಾಸ್ ಅವರು ಈ ಹಿಂದೆ ಬಿಜೆಪಿಗೆ ಸೇರಿದ್ದರು.ದಾಸ್ ಬೊಂಗಾವ್ (ಉತ್ತರ) ದ ಶಾಸಕರಾಗಿದ್ದರು. ಮುಕುಲ್ ರಾಯ್ ಬಿಜೆಪಿಗೆ ಸೇರಿದ ಬೆನ್ನಲ್ಲೇ ದಾಸ್ ಪಕ್ಷಾಂತರ ಮಾಡಿದ್ದು ಅವರ ಮತ್ತು ಶಾಂತನು ಠಾಕೂರ್ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದವು

West Bengal ಪಶ್ಚಿಮ ಬಂಗಾಳದಲ್ಲಿ ತನ್ಮಯ್ ಘೋಷ್ ನಂತರ ಟಿಎಂಸಿ ಸೇರಿದ ಬಿಜೆಪಿ ಶಾಸಕ ಬಿಸ್ವಜಿತ್ ದಾಸ್
ಬಿಸ್ವಜಿತ್ ದಾಸ್
Follow us on

ಕೊಲ್ಕತ್ತಾ: ಬಿಷ್ಣುಪುರದ ಶಾಸಕ ತನ್ಮಯ್ ಘೋಷ್ ಅವರು ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಬೆನ್ನಲ್ಲೇ  ಬಾಗ್ದಾದ ಮತ್ತೊಬ್ಬ ಬಿಜೆಪಿ ಶಾಸಕ ಬಿಸ್ವಜಿತ್ ದಾಸ್ (Biswajit Das) ಮಂಗಳವಾರ ಟಿಎಂಸಿಗೆ ಸೇರಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ದಾಸ್   ಬಿಜೆಪಿಯಲ್ಲಿ ಕೆಲಸ ಮಾಡುವುದು ತೃಪ್ತಿ ನೀಡಲಿಲ್ಲ ಮತ್ತು ಹಿತಕರವಾಗಿರಲಿಲ್ಲ ಎಂದು ಹೇಳಿದರು. “ನಾನು ತಪ್ಪು ಮಾಡಿದೆ ಮತ್ತು ಹಿಂತಿರುಗಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಟಿಎಂಸಿಯಿಂದ ಎರಡು ಬಾರಿ ಶಾಸಕರಾಗಿದ್ದ ದಾಸ್ ಅವರು ಈ ಹಿಂದೆ ಬಿಜೆಪಿಗೆ ಸೇರಿದ್ದರು.ದಾಸ್ ಬೊಂಗಾವ್ (ಉತ್ತರ) ದ ಶಾಸಕರಾಗಿದ್ದರು. ಮುಕುಲ್ ರಾಯ್ ಬಿಜೆಪಿಗೆ ಸೇರಿದ ಬೆನ್ನಲ್ಲೇ ದಾಸ್ ಪಕ್ಷಾಂತರ ಮಾಡಿದ್ದು ಅವರ ಮತ್ತು ಶಾಂತನು ಠಾಕೂರ್ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದವು. ಇದಲ್ಲದೆ ಅವರು ಬೊಂಗಾವ್ (ಉತ್ತರ) ಸ್ಥಾನದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಬಾಗ್ದಾದಿಂದ ಸ್ಪರ್ಧಿಸಲು ಕೇಳಲಾಯಿತು.

ಅಂದಿನಿಂದ ಅವರು ಅತೃಪ್ತರಾಗಿದ್ದರು, ಆದರೆ ರಾಯ್ ಮತ್ತು ಅರ್ಜುನ್ ಸಿಂಗ್ ಅವರನ್ನು ಅಸೆಂಬ್ಲಿ ಚುನಾವಣೆಗೆ ಮುನ್ನ ಟಿಎಂಸಿಗೆ ಹಿಂತಿರುಗಿಸದಂತೆ ತಡೆದರು. ಆದಾಗ್ಯೂ, ಫಲಿತಾಂಶಗಳ ನಂತರ, ರಾಯ್ ಟಿಎಂಸಿಗೆ ಹಿಂದಿರುಗಿದಾಗ ದಾಸ್ ಕೂಡಾ ಅವರನ್ನೇ ಅನುಸರಿಸಿದರು.

ಅಂದ ಹಾಗೆ ಪಕ್ಷಾಂತರವು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ಹೇಳಿದೆ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಈಗ 77 ರಿಂದ 72 ಕ್ಕೆ ಇಳಿದಿದೆ. ಬಿಜೆಪಿಯಿಂದ ಹೊರಹೋಗಲು ಹೆಚ್ಚಿನ ಶಾಸಕರು ಸರದಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಮತ್ತು ಸದ್ಯ ದಿನಜ್‌ಪುರ್ ಶಾಸಕರು ಕೂಡ ಟಿಎಂಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.

ಇದನ್ನೂ ಓದಿ: ತಮಿಳುನಾಡಿಗೆ 30.6 ಟಿಎಂಸಿ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಸೂಚನೆ, ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆದಿಲ್ಲ

ಇದನ್ನೂ ಓದಿ:  ಮುಕುಲ್ ರಾಯ್ ನಂತರ ತೃಣಮೂಲ ಕಾಂಗ್ರೆಸ್ ಸೇರಿದ ಬಿಜೆಪಿ ಶಾಸಕ ತನ್ಮಯ್ ಘೋಷ್

(BJP MLA from Bagda Biswajit Das Joins TMC Says he was made a mistake and wanted to come back)