ಮಹಾರಾಷ್ಟ್ರದಲ್ಲಿ ದಹಿ ಹಂಡಿ ನಿಷೇಧ: ಉದ್ಧವ್ ಠಾಕ್ರೆ ತಾಲಿಬಾನ್​​ನಿಂದ ಆದೇಶ ಸ್ವೀಕರಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಬಿಜೆಪಿ

Dahi Handi: ಬಿಜೆಪಿ ಶಾಸಕರು ಮತ್ತು ಮಹಾರಾಷ್ಟ್ರ ವಿಧಾನಸಭೆಯ ಮುಖ್ಯ ವಿಪ್ ಆಶಿಶ್ ಶೆಲಾರ್ "ಈ ಸರ್ಕಾರ ತಾಲಿಬಾನ್‌ನಿಂದ ಆದೇಶಗಳನ್ನು ತೆಗೆದುಕೊಳ್ಳುತ್ತಿದೆಯೇ? ಮಹಾರಾಷ್ಟ್ರದಲ್ಲಿ ಹಿಂದೂ ಹಬ್ಬಗಳ ಮೇಲೆ ಎಲ್ಲ ನಿರ್ಬಂಧಗಳನ್ನು ಏಕೆ ಜಾರಿಗೊಳಿಸಲಾಗುತ್ತಿದೆ? ಎಂದು ಕೇಳಿದ್ದರು.

ಮಹಾರಾಷ್ಟ್ರದಲ್ಲಿ ದಹಿ ಹಂಡಿ ನಿಷೇಧ: ಉದ್ಧವ್ ಠಾಕ್ರೆ ತಾಲಿಬಾನ್​​ನಿಂದ ಆದೇಶ ಸ್ವೀಕರಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಬಿಜೆಪಿ
ದಹಿ ಹಂಡಿ (ಸಂಗ್ರಹ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 31, 2021 | 3:23 PM

ಮುಂಬೈ: ಮಹಾರಾಷ್ಟ್ರದಲ್ಲಿ ಶ್ರೀಕೃಷ್ಣ  ಜನ್ಮಾಷ್ಮಮಿ ಪ್ರಯುಕ್ತ ನಡೆಯುವ ದಹಿ ಹಂಡಿ (Dahi Handi) ನಿಷೇಧ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ರಾಜ್ಯದ ಹಿಂದೂ ಹಬ್ಬಗಳ ಮೇಲೆ ಉದ್ಧವ್ ಠಾಕ್ರೆ ಸರ್ಕಾರವು ವಿಧಿಸಿರುವ “ಆಯ್ದ” ನಿರ್ಬಂಧಗಳನ್ನು ಪ್ರಶ್ನಿಸಿದ್ದಾರೆ. ಮಂಗಳವಾರ, ಬಿಜೆಪಿಯ ರಾಮ್ ಕದಮ್ ಅವರು ಸರ್ಕಾರವು ಹಬ್ಬವನ್ನು ಆಚರಿಸಲು ಲಸಿಕೆ ಹಾಕಿದ ಗರಿಷ್ಠ ಐದು ವ್ಯಕ್ತಿಗಳು ಮತ್ತು ಕೊವಿಡ್ ಪ್ರೋಟೋಕಾಲ್‌ಗಳ ಅನುಸರಣೆಗೆ ಅವಕಾಶ ನೀಡಬೇಕು ಎಂದು ಹೇಳಿದರು. “(ಉದ್ಧವ್) ಠಾಕ್ರೆ ಸರ್ಕಾರವು ಪೊಲೀಸ್ ಬಲವನ್ನು ದುರುಪಯೋಗಪಡಿಸಿಕೊಂಡರೂ ನಾವು ದಹಿ ಹಂಡಿಯನ್ನು ಆಚರಿಸುತ್ತೇವೆ” ಎಂದು ಕದಮ್ ಹೇಳಿದ್ದಾರೆ.

ಸೋಮವಾರ ಬಿಜೆಪಿ ಶಾಸಕರು ಮತ್ತು ಮಹಾರಾಷ್ಟ್ರ ವಿಧಾನಸಭೆಯ ಮುಖ್ಯ ವಿಪ್ ಆಶಿಶ್ ಶೆಲಾರ್ “ಈ ಸರ್ಕಾರ ತಾಲಿಬಾನ್‌ನಿಂದ ಆದೇಶಗಳನ್ನು ತೆಗೆದುಕೊಳ್ಳುತ್ತಿದೆಯೇ? ಮಹಾರಾಷ್ಟ್ರದಲ್ಲಿ ಹಿಂದೂ ಹಬ್ಬಗಳ ಮೇಲೆ ಎಲ್ಲ ನಿರ್ಬಂಧಗಳನ್ನು ಏಕೆ ಜಾರಿಗೊಳಿಸಲಾಗುತ್ತಿದೆ? ಎಂದು ಕೇಳಿದ್ದರು.

ಶಿವಸೇನಾ ತನ್ನ “ಹಿಂದುತ್ವ” ದಲ್ಲಿ ರಾಜಿ ಮಾಡಿಕೊಳ್ಳುತ್ತಿದೆ ಎಂದು ಹೇಳಿದ ಅವರು ಬಾಂಬೆ ಹೈಕೋರ್ಟ್ ನ್ಯಾಯಾಲಯವು ದಹಿ ಹಂಡಿ ಆಚರಣೆಯ ಸಮಯದಲ್ಲಿ ಮಾನವ ಪಿರಮಿಡ್‌ಗಳ ಎತ್ತರವನ್ನು ನಿರ್ಬಂಧಿಸಿದಾಗ ಅದೇ ಪಕ್ಷವು ಗದ್ದಲವೆಬ್ಬಿಸಿತ್ತು ಎಂದಿದ್ದಾರೆ.

ಕೆಲವು ವರ್ಷಗಳ ಹಿಂದೆ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಿಗೆ ಪ್ರತಿಕ್ರಿಯಿಸಿದಾಗ, ಪಿರಮಿಡ್‌ನ ಎತ್ತರವನ್ನು ನಿರ್ಬಂಧಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದಾಗ ಶಿವಸೇನಾದ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.‘ಈಗ, ಭಾರತದಲ್ಲಿ ನಿರ್ಬಂಧಗಳನ್ನು ಹೇರಿದರೆ, ನಾವು ಪಾಕಿಸ್ತಾನಕ್ಕೆ ಹೋಗಿ ದಹಿ ಹಂಡಿ ಆಚರಿಸ ಬೇಕೇ ಎಂದಿತ್ತು ಶಿವಸೇನಾ.

ಇದೀಗ ಎಂಎನ್‌ಎಸ್ ಕೂಡ ಇದೇ ಕೂಗಿಗೆ ದನಿ ಸೇರಿಸಿದೆ. ಪಕ್ಷದ ಥಾಣೆ ಪಾಲ್ಘರ್ ಜಿಲ್ಲಾ ಅಧ್ಯಕ್ಷ ಅವಿನಾಶ್ ಜಾಧವ್ ಅವರು ತಮ್ಮ ದಹಿ ಹಂಡಿ ಯೋಜನೆಗಳೊಂದಿಗೆ ನಿಗದಿಯಂತೆ ಮುಂದುವರಿಯುವುದಾಗಿ ಹೇಳಿದರು. ಈ ಕಾರ್ಯಕ್ರಮಕ್ಕಾಗಿ ಈಗಾಗಲೇ 40 ಕ್ಕೂ ಹೆಚ್ಚು ಮಂಡಲಗಳು ನೋಂದಣಿ ಮಾಡಿಕೊಂಡಿವೆ ಎಂದು ಅವರು ಹೇಳಿದರು. “ಬಿಜೆಪಿ ಬೃಹತ್ ರ್ಯಾಲಿಗಳನ್ನು ನಡೆಸುತ್ತವೆ., ಶಿವಸೇನಾ ಪ್ರತಿಭಟನೆಗಳನ್ನು ನಡೆಸುತ್ತದೆ. ಹೀಗಿರುವಾಗ ನಮ್ಮ ಯುವಕರು ಏಕೆ ಜನ್ಮಾಷ್ಟಮಿಯನ್ನು ಆಚರಿಸಲು ಸಾಧ್ಯವಿಲ್ಲ?” ಎಂದು ಜಾಧವ್ ಕೇಳಿದ್ದಾರೆ.

ಮುಂಬೈನಾದ್ಯಂತ ಪೊಲೀಸ್ ಠಾಣೆಗಳು ನೋಟಿಸ್‌ಗಳನ್ನು ನೀಡುತ್ತಿವೆ ಮತ್ತು ಗೋವಿಂದ ಪಥಕ್‌ಗಳನ್ನು ಕರೆಸಿಕೊಳ್ಳುತ್ತಿವೆ. ದಹಿ ಹಂಡಿಯ ಮೇಲಿನ ನಿಷೇಧವನ್ನು ಧಿಕ್ಕರಿಸಿದರೆ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿವೆ. ಕೊವಿಡ್ ನಿರ್ಬಂಧಗಳ ಹೊರತಾಗಿಯೂ ಕೆಲವು ದಹಿ ಹಂಡಿ ಮಂಡಲಗಳು ಗೋಕುಲಾಷ್ಟಮಿಯಂದು ಮಾನವ ಪಿರಮಿಡ್‌ನೊಂದಿಗೆ ಮುಂದುವರಿಯುವುದಾಗಿ ಸೂಚಿಸಿದ ನಂತರ ಈ ಕ್ರಮವು ಬಂದಿದೆ.

ಮಹಾರಾಷ್ಟ್ರ ರಾಜಧಾನಿಯ ಹಲವು ಪೊಲೀಸ್ ಠಾಣೆಗಳು ಪೊಲೀಸರನ್ನು ಕಳುಹಿಸಿ ಕೊವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸದಂತೆ ಜನರಿಗೆ ಎಚ್ಚರಿಕೆ ನೀಡುತ್ತಿವೆ. ಬೈಕುಲ್ಲಾ ಪೊಲೀಸ್ ಠಾಣೆಯು ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಡವಾಡಿ ಗೋವಿಂದ ಪಾಠಕ್ ಅವರಿಗೆ ಸೂಚನೆಯನ್ನು ಕಳುಹಿಸಿದೆ. ಅಂತೆಯೇ ಜೋಗೇಶ್ವರಿ ಪೊಲೀಸರು ಕಾನೂನನ್ನು ಉಲ್ಲಂಘಿಸದಂತೆ ಜೈ ಜವಾನ್ ಮಂಡಲ್‌ಗೆ ಎಚ್ಚರಿಕೆ ನೀಡಿದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕೊವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನರು ತಮ್ಮ ಜೀವನೋಪಾಯಕ್ಕಾಗಿ ಇನ್ನೂ ಕಷ್ಟಪಡುತ್ತಿರುವುದರಿಂದ ನಾಗರಿಕರ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಮತ್ತು ಮಾನವೀಯತೆಯ ಆಧಾರದ ಮೇಲೆ ಹಬ್ಬಗಳನ್ನು ಸ್ವಲ್ಪ ಸಮಯದವರೆಗೆ ದೂರ ಇಟ್ಟುಕೊಳ್ಳಬೇಕೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ‘ಮಂಡಲ್’ಗಳಿಗೆ ಮನವಿ ಮಾಡಿದರು.

ಇದನ್ನೂ ಓದಿ:  ಯೋಗಿ ಆದಿತ್ಯನಾಥ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ; ದೂರು ದಾಖಲು

(Uddhav Thackeray Taking Orders from Taliban BJP Questions Dahi Handi Ban in Maharashtra)

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್