ಲಿವ್-ಇನ್ ಸಂಬಂಧ(Live-in Relationship)ವನ್ನು ಕಾನೂನು ಬಾಹಿರ ಎಂದು ಘೋಷಿಸುವಂತೆ ಮಧ್ಯಪ್ರದೇಶದ ಬಿಜೆಪಿ ಸಂಸದ ಅಜಯ್ ಪ್ರತಾಪ್ ಸಿಂಗ್ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಲಿವ್-ಇನ್ ಸಂಬಂಧಗಳನ್ನು ನಿಷೇಧಿಸಲು ಕಾನೂನನ್ನು ಜಾರಿಗೆ ತರಲು ಮೋದಿ ಸರ್ಕಾರವನ್ನು ಒತ್ತಾಯಿಸಿದರು.
ಕೆಲವು ಘಟನೆಗಳನ್ನು ಉದಾಹರಣೆಯಾಗಿ ನೀಡಿದ ಸಂಸದರು ಮುಂಬೈನಲ್ಲಿ ಲಿವ್ ಇನ್ ಸಂಗಾತಿಯನ್ನು ಕೊಂಡು ಆಕೆಯ ದೇಹವನ್ನು ಪ್ರೆಶರ್ ಕುಕ್ಕರ್ನಲ್ಲಿ ಬೇಯಿಸಿ ನಾಯಿಗೆ ತಿನ್ನಿಸಲಾಗಿತ್ತು, ಇಂತಹ ಹಲವು ಘಟನೆಗಳು ಆಗಾಗ ಮುನ್ನೆಲೆಗೆ ಬರುತ್ತಿರುತ್ತದೆ.
#WATCH | “All over the world, 35% of murders of women are happening because of live-in relationships. In 1978, the court said that in India, live-in relationship is unethical but not illegal, in a way court recognised it and this led to an increase in live-in relationships, court… pic.twitter.com/sLbe8BdtLy
— ANI (@ANI) July 27, 2023
ಪ್ರಪಂಚಾದ್ಯಂತ ನಡೆಯುತ್ತಿರುವ ಮಹಿಳೆಯರ ಕೊಲೆಯಲ್ಲಿ ಶೇ. 35ರಷ್ಟು ಸಂಗಾತಿಯಿಂದಲೇ ನಡೆಯುತ್ತಿದೆ. ಕೆಲವೊಮ್ಮೆ ಪುರುಷರೂ ಕೂಡ ತೊಂದರೆಗೊಳಗಾಗಿದ್ದಾರೆ.
ಮತ್ತಷ್ಟು ಓದಿ: Crime News: ಲಿವ್ ಇನ್ ರಿಲೇಷನ್ ಶಿಪ್ನಲ್ಲಿದ್ದ ಪ್ರೇಮಿಗಳ ಗಲಾಟೆ ಕೊಲೆಯಲ್ಲಿ ಅಂತ್ಯ
ಭಾರತದಲ್ಲಿ ಮದುವೆ, ಕುಟುಂಬ ಎಂಬುದು ಸಾಂಸ್ಕೃತಿಕ ಪರಂಪರೆಯಾಗಿದೆ, ನಮ್ಮ ಧಾರ್ಮಿಕ ಗ್ರಂಥಗಳು, ಸಂಪ್ರದಾಯಗಳು ಮತ್ತು ತತ್ವಗಳು ಲಿವ್-ಇನ್ ಸಂಬಂಧದಲ್ಲಿರುವುದಿಲ್ಲ.
ಭಾರತೀಯ ಸಮಾಜವು ಅದನ್ನು ಅನೈತಿಕವೆಂದು ಪರಿಗಣಿಸುತ್ತದೆ ಆದರೆ ಇದು ಕಾನೂನುಬಾಹಿರವಲ್ಲ ಎಂದು ನ್ಯಾಯಾಲಯ ಹೇಳಿದೆ. ಇದು ಅನೈತಿಕವಾಗಿದ್ದರೆ, ಅದು ಕಾನೂನುಬಾಹಿರವಾಗಿರಬೇಕು ಎಂದು ನಾನು ನಂಬುತ್ತೇನೆ. ಸರಕಾರ ಇದನ್ನು ಮನಗಂಡು ಈ ಉಪಟಳಕ್ಕೆ ಕಡಿವಾಣ ಹಾಕಿ ಮಹಿಳೆಯರ ರಕ್ಷಣೆಗೆ ಕಾನೂನು ತರಬೇಕು ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ