ಕೊವಿಡ್ ಔಷಧಿಗಳನ್ನು ವಿತರಿಸಲು ಗೌತಮ್ ಗಂಭೀರ್ಗೆ ಪರವಾನಗಿ ಇದೆಯೇ?: ದೆಹಲಿ ಹೈಕೋರ್ಟ್
BJP MP Gautam Gambhir: ವೈದ್ಯರು ನಿರ್ದೇಶಿಸಿದ ಔಷಧಿಗಳಾಗಿವೆಯೇ ಅವು? ಅಷ್ಟೊಂದು ಪ್ರಮಾಣದಲ್ಲಿ ಔಷಧಿಗಳನ್ನು ಸಂಗ್ರಹಿಸುವುದಾದರೂ ಹೇಗೆ? ಇಷ್ಟೊಂದು ಔಷಧಿಗಳನ್ನಿರಿಸಲು ಅವರಲ್ಲಿ ಪರವಾನಗಿ ಇದೆಯೇ? ಇದಕ್ಕೇನು ಪರವಾನಗಿ ಬೇಕು ಎಂದಿಲ್ಲವೇ? ಎಂದು ನ್ಯಾಯಮೂರ್ತಿ ವಿಪಿನ್ ಸಂಗಿ ಮತ್ತು ರೇಖಾ ಪಲ್ಲಿ ಅವರ ವಿಭಾಗೀಯ ನ್ಯಾಯಪೀಠ ಪ್ರಶ್ನಿಸಿದೆ.
ದೆಹಲಿ: ದೆಹಲಿಯಲ್ಲಿ ದಿನೇ ದಿನೇ ಕೊವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇರುವಾಗ ಬಿಜೆಪಿ ಸಂಸದ ಗೌತಮ್ ಗಂಭೀರ್ ತಮ್ಮ ಸಂಸದೀಯ ಕ್ಷೇತ್ರವಾದ ಪೂರ್ವ ದೆಹಲಿಯಲ್ಲಿ ಕೊವಿಡ್ -19 ರೋಗಕ್ಕಿರುವ ಔಷಧಿಯನ್ನು ಉಚಿತವಾಗಿ ನೀಡಲಿದ್ದೇನೆ ಎಂದು ಹೇಳಿದ್ದಾರೆ. ಗಂಭೀರ್ ಅವರ ಈ ನಿರ್ಧಾರ ವಿವಾದವನ್ನುಂಟು ಮಾಡಿದ್ದು, ದೆಹಲಿ ಹೈಕೋರ್ಟ್ ಗಂಭೀರ್ ಅವರನ್ನು ಪ್ರಶ್ನಿಸಿದೆ.
ಇಷ್ಟೊಂದು ಜನರಿಗೆ ಉಚಿತವಾಗಿ ಔಷಧಿ ವಿತರಿಸುವುದಾದರೆ ಸಾಕಷ್ಟು ಪ್ರಮಾಣದಲ್ಲಿ ಔಷಧಿ ಸಂಗ್ರಹಿಸಬೇಕು. ಗೌತಮ್ ಗಂಭೀರ್ ಎಲ್ಲಿಂದ ಇಷ್ಟೊಂದು ಔಷಧಿ ತರುತ್ತಾರೆ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಪ್ರಶ್ನಿಸಿದೆ.
ವೈದ್ಯರು ನಿರ್ದೇಶಿಸಿದ ಔಷಧಿಗಳಾಗಿವೆಯೇ ಅವು? ಅಷ್ಟೊಂದು ಪ್ರಮಾಣದಲ್ಲಿ ಔಷಧಿಗಳನ್ನು ಸಂಗ್ರಹಿಸುವುದಾದರೂ ಹೇಗೆ? ಇಷ್ಟೊಂದು ಔಷಧಿಗಳನ್ನಿರಿಸಲು ಅವರಲ್ಲಿ ಪರವಾನಗಿ ಇದೆಯೇ? ಇದಕ್ಕೇನು ಪರವಾನಗಿ ಬೇಕು ಎಂದಿಲ್ಲವೇ? ಎಂದು ನ್ಯಾಯಮೂರ್ತಿ ವಿಪಿನ್ ಸಂಗಿ ಮತ್ತು ರೇಖಾ ಪಲ್ಲಿ ಅವರ ವಿಭಾಗೀಯ ನ್ಯಾಯಪೀಠ ಪ್ರಶ್ನಿಸಿದೆ.
ವರದಿಯ ನಂತರ ಇದು ನಿಲ್ಲುತ್ತದೆ ಎಂದುಕೊಂಡಿದ್ದೆವು. ಆದರೆ ಈಗಲೂ ಮುಂದುವರಿದಿದೆ ಎಂದು ನ್ಯಾಯಾಲಯ ಹೇಳಿದೆ. ದೆಹಲಿ ಸರ್ಕಾರವನ್ನು ಪ್ರತಿನಿಧಿಕರಿಸಿದ ಹಿರಿಯ ವಕೀಲ ರಾಹುಲ್ ಮೆಹ್ರಾ , ಇದು ತುಂಬಾ ಬೇಜವಾಬ್ದಾರಿತನದ ನಡೆ ಎಂದು ಹೇಳಿದ್ದಾರೆ.
ಚುನಾಯಿತ ಪ್ರತಿನಿಧಿಯು ಫೆಬಿಫ್ಲೂ (Fabiflu) ಔಷಧಿಯನ್ನು ವಿತರಿಸುತ್ತಿದ್ದಾರೆ ಎಂದು ಗೌತಮ್ ಗಂಭೀರ್ ಅವರ ಟ್ವೀಟ್ ಉಲ್ಲೇಖಿಸಿ ವಕೀಲ ರಾಕೇಶ್ ಮಲ್ಹೋತ್ರಾ ನ್ಯಾಯಾಲಯಕ್ಕೆ ಹೇಳಿದ್ದಾರೆ.
Want to reiterate that patients outside East Delhi can get ‘Fabiflu’ from GGF office – 22, Pusa Road b/w 10-4 for FREE
मैं दोबारा बताना चाहता हूँ की पूर्वी दिल्ली से दूर रहने वाले मरीज़ ‘फ़ैबीफ़्लू’ GGF कार्यालय 22, पूसा रोड से 10-4 के बीच मुफ़्त में ले सकते हैं!
— Gautam Gambhir (@GautamGambhir) April 27, 2021
ದೆಹಲಿಯಲ್ಲಿ ಕೊವಿಡ್ ಔಷಧಿಗೆ ಬರ ಇರುವಾಗ ಅವರಿಗೆ ಇದೆಲ್ಲ ಎಲ್ಲಿಂದ ಸಿಗುತ್ತದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ ಮಲ್ಹೋತ್ರಾ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದರೂ ಇತರ ಪ್ರದೇಶದ ಜನರಿಗೆ ಔಷಧಿ ಸಿಗದೆ ಪೂರ್ವ ದೆಹಲಿಯ ಜನರಿಗೆ ಮಾತ್ರ ಔಷಧಿ ಸಿಗುವುದಾದರೆ ಅದು ದೊಡ್ಡ ಸಮಸ್ಯೆ ಎಂದು ಮಲ್ಹೋತ್ರಾ ಹೇಳಿದ್ದಾರೆ.
(BJP MP Gautam Gambhir have holding a license to deal inCovid-19 drugs asks Delhi High Court)
Published On - 5:14 pm, Wed, 28 April 21