18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ಪಡೆಯಲು ನೋಂದಣಿ ಆರಂಭ; ಕ್ರ್ಯಾಷ್ ಆಯ್ತು ಕೊವಿನ್ ಪೋರ್ಟಲ್

CoWIN Crashed: ನೋಂದಣಿ ಪ್ರಕ್ರಿಯೆ ಇಂದು ಆರಂಭವಾಗಿದ್ದು , ಏಕಕಾಲದಲ್ಲಿ ಲಕ್ಷಾಂತರ ಜನರು ನೋಂದಣಿ ಮಾಡಿರುವುದರಿಂದ ಪ್ರಸ್ತುತ ಪೋರ್ಟಲ್ ಕ್ರ್ಯಾಷ್ ಆಗಿದೆ.

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ಪಡೆಯಲು ನೋಂದಣಿ ಆರಂಭ; ಕ್ರ್ಯಾಷ್ ಆಯ್ತು ಕೊವಿನ್ ಪೋರ್ಟಲ್
ಕೊವಿನ್ ಪೋರ್ಟಲ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 28, 2021 | 6:07 PM

ದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟವರು ಕೊವಿಡ್ ಲಸಿಕೆ ಪಡೆದುಕೊಳ್ಳಲು ಸರ್ಕಾರದ CoWIN ಪೋರ್ಟಲ್ ನಲ್ಲಿ ನೋಂದಣಿ ಮಾಡಬೇಕು. ನೋಂದಣಿ ಪ್ರಕ್ರಿಯೆ ಇಂದು ಆರಂಭವಾಗಿದ್ದು , ಏಕಕಾಲದಲ್ಲಿ ಲಕ್ಷಾಂತರ ಜನರು ನೋಂದಣಿ ಮಾಡಿರುವುದರಿಂದ ಪ್ರಸ್ತುತ ಪೋರ್ಟಲ್ ಕ್ರ್ಯಾಷ್ ಆಗಿದೆ. ಕೆಲವರು ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿದ್ದು, ಇನ್ನು ಕೆಲವರು ಪೋರ್ಟಲ್ ಕಾರ್ಯವೆಸಗುತ್ತಿಲ್ಲ ಎಂದು ಹೇಳಿದ್ದಾರೆ. ಬುಧವಾರ ಸಂಜೆ 4 ಗಂಟೆಗೆ ನೋಂದಣಿ ಆರಂಭವಾಗಿದ್ದು, ಆ ಹೊತ್ತಿಗೆ ಕಂಡು ಬಂದ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲಾಗಿತ್ತು.

ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊವಿಡ್ ಲಸಿಕೆ ನೀಡುವುದಾಗಿ ಸರ್ಕಾರ ಹೇಳಿದ್ದು, ಅದನ್ನು ಪಡೆಯಲು ನೋಂದಣಿ ಕಡ್ಡಾಯವಾಗಿದೆ. https://www.cowin.gov.in/home ಪೋರ್ಟಲ್ ಗೆ ಭೇಟಿ ನೀಡಿ register/sign ಕ್ಲಿಕ್ ಮಾಡಿ ನೋಂದಣಿ ಮಾಡಬೇಕಿದೆ. ಆದರೆ CoWIN server is facing issues. Please try later ಎಂಬ ಸಂದೇಶ ಕಾಣಿಸುತ್ತಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಆದಾಗ್ಯೂ,ಈ ಬಗ್ಗೆ ಟ್ವೀಟ್ ಮಾಡಿದ ಆರೋಗ್ಯ ಸೇತು App ಟ್ವಿಟರ್ ಹ್ಯಾಂಡಲ್,ಕೊವಿನ್ ಪೋರ್ಟಲ್ ಕಾರ್ಯವೆಸಗುತ್ತಿದೆ.4 ಗಂಟೆಗೆ ಸಣ್ಣ ಪ್ರಮಾಣದ ದೋಷ ಕಂಡುಬಂದಿತ್ತು. ಅದನ್ನು ಸರಿ ಪಡಿಸಲಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರು ನೋಂದಣಿ ಮಾಡಬಹುದು ಎಂದಿದೆ.

ಶನಿವಾರ ಕೊವಿಡ್ ಲಸಿಕೆ ವಿತರಣೆಯ ಮೂರನೇ ಹಂತ ಆರಂಭವಾಗಲಿದೆ.

ನೋಂದಣಿ ಮಾಡಲು ಹೀಗೆ ಮಾಡಿ

ಕೊವಿನ್ ಆ್ಯಪ್ ಹಾಗೂ ಆರೋಗ್ಯ ಸೇತು ಆ್ಯಪ್​ ಎರಡೂ ಕಡೆಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಇಂದು ಸಂಜೆಯಿಂದ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ. cowin.gov.in ವೆಬ್​​ಸೈಟ್ ಮೂಲಕ ಕೊವಿನ್​ ಪೋರ್ಟಲ್​​ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವ ವಿಧಾನ ಇಲ್ಲಿದೆ ನೋಡಿ..

1. ಮೊದಲು https://www.cowin.gov.in/home ವೆಬ್​ಸೈಟ್​ಗೆ ಹೋಗಿ.

2. ವೆಬ್​ಸೈಟ್​ನ ಬಲಭಾಗದಲ್ಲಿ ಮೇಲೆ ಸೈನ್​ ಇನ್​ ಯುವರ್​ಸೆಲ್ಫ್​ ಎಂದು ಇರುತ್ತದೆ. ಅಲ್ಲಿ ಕ್ಲಿಕ್​ ಮಾಡಿ ಮೊಬೈಲ್​ ನಂಬರ್ ಹಾಕಿ.

3.ನಂತರ ನಿಮಗೊಂದು ಒಟಿಪಿ ಬರುತ್ತದೆ. ಆ ಒಟಿಪಿ ಸಂಖ್ಯೆಯನ್ನು ನಮೂದಿಸಿದ ಕೂಡಲೇ ಪೇಜ್​​ವೊಂದು ತೆರೆಯಲ್ಪಡುತ್ತದೆ. ಅದರಲ್ಲಿ ನಿಮ್ಮ ಹೆಸರು, ವಯಸ್ಸು, ಲಿಂಗ, ನೀವಿರುವ ಪ್ರದೇಶ, ಸಂಪೂರ್ಣ ವಿಳಾಸ, ಪಿನ್​ ಕೋಡ್​ಗಳನ್ನು ನಮೂದಿಸಬೇಕು.

4. ಇಷ್ಟಾದ ಬಳಿಕ ಅಲ್ಲಿ ನಿಮ್ಮ ಪ್ರದೇಶದ ಸುತ್ತಮುತ್ತ ಇರುವ ಆಸ್ಪತ್ರೆಗಳ ಲಿಸ್ಟ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮಗೆ ಯಾವುದು ಸೂಕ್ತವೆನಿಸುತ್ತದೆಯೋ ಆ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲಿ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳ ಹೆಸರೂ ಬರಲಿದ್ದು, ಯಾವುದೇ ಆಸ್ಪತ್ರೆಯನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಂತರ ನಿಮ್ಮ ಮೊಬೈಲ್​ಗೆ ಮೆಸೇಜ್ ಬರಲಿದ್ದು, ಅದರಂತೆ ಹೋಗಿ ಲಸಿಕೆ ಪಡೆಯಬಹುದು.

ಇದನ್ನೂ ಓದಿ:  ಮೇ 1ರಿಂದ 3ನೇ ಹಂತದ ಲಸಿಕೆ ವಿತರಣೆ; ನೀವೂ 18 ವರ್ಷ ಮೇಲ್ಪಟ್ಟವರಾಗಿದ್ದರೆ ಇಂದಿನಿಂದಲೇ ನೋಂದಣಿ ಮಾಡಿಕೊಳ್ಳಿ.. ಇಲ್ಲಿದೆ ನೋಡಿ ವಿಧಾನ

Published On - 6:05 pm, Wed, 28 April 21