ಕೊವಿಡ್ ಎರಡನೇ ಅಲೆ ನಡುವೆಯೇ ತೆಲಂಗಾಣದ ನಗರಸಭೆ ಚುನಾವಣೆಗಾಗಿ ಬಿಜೆಪಿ, ಟಿಆರ್ಎಸ್ ,ಕಾಂಗ್ರೆಸ್ ಪಕ್ಷದಿಂದ ಅಬ್ಬರದ ಪ್ರಚಾರ
Telangana Civic Polls: ತೆಲಂಗಾಣ ಸ್ಥಳೀಯ ಸಂಸ್ಥೆ ಚುನಾವಣೆಯ ಪ್ರಚಾರದ ಕೊನೆಯ ದಿನ ಬಿಜೆಪಿ ಮಾತ್ರವಲ್ಲ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಕಾಂಗ್ರೆಸ್ ಕೂಡಾ ಇದೇ ರೀತಿ ಜನರನ್ನು ಸೇರಿಸಿ ಕೊವಿಡ್ ನಿಯಮ ಉಲ್ಲಂಘಿದೆ.
ಹೈದರಾಬಾದ್: ಕೊವಿಡ್ ಎರಡನೇ ಅಲೆ ದೇಶದಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿರುವಾಗ ತೆಲಂಗಾಣ ಸ್ಥಳೀಯ ಸಂಸ್ಥೆ ಚುನಾವಣೆಯ ಪ್ರಚಾರದ ಕೊನೆಯ ದಿನ ಬಿಜೆಪಿ ಭರ್ಜರಿ ರ‍್ಯಾಲಿ ನಡೆಸಿದೆ. ತೆಲಂಗಾಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಂಗಳವಾರ ಪ್ರಚಾರ ಕೊನೆಗೊಂಡಿದ್ದು, ರ‍್ಯಾಲಿಯ ಫೋಟೊವನ್ನು ಬಿಜೆಪಿ ಟ್ವೀಟ್ ಮಾಡಿದೆ. ನೂರಾರು ಜನರನ್ನು ಸೇರಿಸುವ ಮೂಲಕ ಕೊವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಆ ಟ್ವೀಟ್ ಡಿಲೀಟ್ ಮಾಡಿದೆ. ಬಿಜೆಪಿ ಮಾತ್ರವಲ್ಲ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಕಾಂಗ್ರೆಸ್ ಕೂಡಾ ಇದೇ ರೀತಿ ಜನರನ್ನು ಸೇರಿಸಿ ಕೊವಿಡ್ ನಿಯಮ ಉಲ್ಲಂಘಿದೆ.
ಕಳೆದ ಡಿಸೆಂಬರ್ ನಲ್ಲಿ ದೇಶದ ಹಲವೆಡೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಮಿತ್ ಶಾ, ಜೆಪಿ ನಡ್ಡಾ,ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೊದಲಾದವರು ಬೃಹತ್ ರ‍್ಯಾಲಿಗಳನ್ನು ಆಯೋಜಿಸಿ ಪ್ರಚಾರ ಮಾಡಿದ್ದರು. ಈ ಬಾರಿ ಏಪ್ರಿಲ್ 30ಕ್ಕೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಬಿಜೆಪಿ ಅಬ್ಬರದ ಪ್ರಚಾರ ನಡೆಸಿದೆ.
Vote For BJP pic.twitter.com/SYqC2xFf3g
— BJP Telangana (@BJP4Telangana) April 26, 2021
ವಾರಂಗಲ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ನೇತೃತ್ವ ನೀಡಿದ್ದರು. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅವರು ವಾರಂಗಲ್ನಲ್ಲಿ ಬಿಜೆಪಿ ಧ್ವಜ ಮೇಲೆ ಹಾರಬೇಕು ಎಂದಿದ್ದರು.
ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರು ವಾರಂಗಲ್ ಮತ್ತು ಖಮ್ಮಂನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಯವರು ಆರೋಗ್ಯ ವ್ಯವಸ್ಥೆಯನ್ನು ನಿರ್ಲಕ್ಷಿಸಿದ್ದಾರೆ. ಆದರೆ ಪ್ರಧಾನಿ ಮೋದಿ ವಾರಂಗಲ್ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಆಕ್ಸಿಜನ್ ಸ್ಥಾವರ ಸ್ಥಾಪಿಸಿದ್ದಾರೆ ಎಂದಿದ್ದಾರೆ.
Amid rising COVID19 cases in Telangana, major political parties today held roadshows, door to door campaigns for the Greater Warangal Municipal Corporation elections scheduled to be held on April 30 pic.twitter.com/M3TOfRIcGv
— ANI (@ANI) April 27, 2021
ಆದಾಗ್ಯೂ, ತೆಲಂಗಾಣ ರಾಷ್ಟ್ರ ಸಮಿತಿ ಕೂಡಾ ಪ್ರಚಾರ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಅವರ ಪುತ್ರ ನಗರಾಡಳಿತ ಸಚಿವ ಕೆ.ಟಿ ರಾಮ ಅವರಿಗೆ ಕೊವಿಡ್ ದೃಢಪಟ್ಟಿದ್ದ ಕಾರಣ ಇತರ ಸಚಿವರು ಚುನಾವಣಾ ಪ್ರಚಾರ ನಡೆಸಿದ್ದರು.
ನಾಗಾರ್ಜುನ ಸಾಗರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕೆಸಿಆರ್ ಅವರಿಗೆ ಕೊವಿಡ್ ದೃಢಪಟ್ಟಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ 60 ರಾಜಕಾರಣಿಗಳಿಗೆ ಕೊವಿಡ್ ರೋಗ ತಗುಲಿತ್ತು.
ದೇಶದಲ್ಲಿ ಕೊವಿಡ್ ಎರಡನೇ ಅಲೆಗೆ ಚುನಾವಣಾ ಆಯೋಗವೇ ಏಕೈಕ ಜವಾಬ್ದಾರರು, ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಗುಡುಗಿದ್ದ ಬೆನ್ನಲ್ಲೇ ರಾಜಕೀಯ ಪಕ್ಷಗಳು ತೆಲಂಗಾಣದಲ್ಲಿ ಬೃಹತ್ ರ‍್ಯಾಲಿ ನಡೆಸಿ ಕೊವಿಡ್ ನಿಯಮಗಳನ್ನು ಗಾಳಿಗೆ ತೂರಿದೆ.
ಖಮ್ಮಮ್ ಮತ್ತು ವಾರಂಗಲ್ ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ ಅಚಂಪೇಟ್ , ಸಿದ್ದಿಪೇಟ್, ನಕ್ರೆ ಕಲ್ ,ಜಡ್ ಚೆರ್ಲ,ಕೊಥೂರ್ ನಗರಸಭೆಯಲ್ಲಿ ಏಪ್ರಿಲ್ 30ಕ್ಕೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಕೊವಿಡ್ 2ನೇ ಅಲೆಗೆ ಚುನಾವಣಾ ಆಯೋಗವೇ ಹೊಣೆ; ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್
(Huge rallies of TRS BJP Congress in Telangana for civic polls violated Covid appropriate norms )
Published On - 7:18 pm, Wed, 28 April 21