ನವದೆಹಲಿ: ತ್ರಿಪುರಾದಿಂದ ಮುಂಬರುವ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಿಪ್ಲಬ್ ದೇಬ್ (Biplab Deb) ಅವರನ್ನು ಘೋಷಿಸಲಾಗಿದೆ. ತ್ರಿಪುರಾದ (Tripura) ಮಾಜಿ ಸಿಎಂ ಬಿಪ್ಲಬ್ ದೇಬ್ ಅವರನ್ನು ಬಿಜೆಪಿಯ ಹರಿಯಾಣ ರಾಜ್ಯ ಉಸ್ತುವಾರಿಯನ್ನಾಗಿ ಮಾಡಿದ ಕೆಲವೇ ಗಂಟೆಗಳ ನಂತರ ಈ ಘೋಷಣೆ ಮಾಡಲಾಗಿದೆ. ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ದೇಬ್ ಅವರ ಜನಪ್ರಿಯತೆಯಿಂದ ಈಶಾನ್ಯ ರಾಜ್ಯದಲ್ಲಿ 2018ರಲ್ಲಿ ಭರ್ಜರಿ ಜಯ ಗಳಿಸಲಾಗಿತ್ತು. 2018ರ ಜಯ ತ್ರಿಪುರಾದಲ್ಲಿ ಎಡಪಕ್ಷಗಳ 25 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿ, ಬಿಜೆಪಿಯನ್ನು ಆಡಳಿತಕ್ಕೆ ತರಲು ಕಾರಣವಾಯಿತು.
2018ರ ಮಾರ್ಚ್ 9ರಂದು ತ್ರಿಪುರಾದ 10ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಬಿಪ್ಲಬ್ ದೇಬ್ ಈ ವರ್ಷ ಮೇ 14ರಂದು ತ್ರಿಪುರಾದ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರು. ನಂತರ ಅವರ ನಂತರ ಮಾಣಿಕ್ ಸಹಾ ಅವರು ಮೇ 15ರಂದು ತ್ರಿಪುರಾದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದನ್ನೂ ಓದಿ: Manik Saha: ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಮಾಣಿಕ್ ಸಾಹಾ ನೇಮಕ; ಶುಭ ಕೋರಿದ ಬಿಪ್ಲಬ್ ದೇಬ್
“ನನ್ನನ್ನು ತ್ರಿಪುರಾದಿಂದ ರಾಜ್ಯಸಭಾ ಸಂಸದರಾಗಿ ಬಿಜೆಪಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಜೆಪಿ ನಡ್ಡಾ, ಅಮಿತ್ ಶಾ ಅವರಿಗೆ ಕೃತಜ್ಞತೆಗಳು. ತ್ರಿಪುರಾ ಮತ್ತು ಇಲ್ಲಿನ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ” ಎಂದು ಬಿಪ್ಲಬ್ ದೇಬ್ ಟ್ವೀಟ್ ಮಾಡಿದ್ದಾರೆ.
Gratitude to PM Shri @narendramodi Ji,@BJP4India President Shri @JPNadda Ji & Home Minister Shri @AmitShah Ji for nominating me as a BJP candidate for Rajya Sabha MP from Tripura.
I am committed to work for the development and welfare of Tripura and it’s people. pic.twitter.com/7K4ZloW1Vt
— Biplab Kumar Deb (@BjpBiplab) September 9, 2022
ಮಾಣಿಕ್ ಸಹಾ ಅವರಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆಯ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ. ಈ ಚುನಾವಣೆಯು ಸೆಪ್ಟೆಂಬರ್ 22ರಂದು ನಡೆಯಲಿದೆ. ಮಾಣಿಕ್ ಸಹಾ ಈ ವರ್ಷದ ಏಪ್ರಿಲ್‌ನಲ್ಲಿ ಮೇಲ್ಮನೆಗೆ ಚುನಾಯಿತರಾಗಿದ್ದರು. ಅವರ ಅವಧಿಯು ಏಪ್ರಿಲ್ 2028ರವರೆಗೆ ಇರಲಿದೆ.