Fact Check: 2024ರ ವೇಳೆಗೆ ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದಿದ್ದರೇ ಪ್ರಶಾಂತ್ ಕಿಶೋರ್?

| Updated By: ರಶ್ಮಿ ಕಲ್ಲಕಟ್ಟ

Updated on: Feb 09, 2022 | 3:51 PM

Prashant Kishor ಗುಜರಾತಿನಲ್ಲಿ ಬಿಜೆಪಿ ಕಾರ್ಯಕ್ಷಮತೆ ಕಳಪೆಯಾಗಿರುತ್ತದೆ ಎಂದು ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Fact Check: 2024ರ ವೇಳೆಗೆ ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದಿದ್ದರೇ ಪ್ರಶಾಂತ್ ಕಿಶೋರ್?
ಪ್ರಶಾಂತ್ ಕಿಶೋರ್
Follow us on

2024ರ ವೇಳೆಗೆ ಬಿಜೆಪಿ (BJP) ಎಲ್ಲಾ ರಾಜ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಸೋಲಲಿದ್ದು, ಗುಜರಾತ್‌ನಲ್ಲಿ ಮಾತ್ರ ಆಡಳಿತ ನಡೆಸಲಿದೆ. ಗುಜರಾತಿನಲ್ಲಿಯೂ ಅದರ ಕಾರ್ಯಕ್ಷಮತೆ ಕಳಪೆಯಾಗಿರುತ್ತದೆ ಎಂದು ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ (Prashant Kishor) ಹೇಳಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 2 ಲಕ್ಷ ಫಾಲೋವರ್​ಗಳಿರುವ Your Voice 19 ಸಾವಿರ ಫಾಲೋವರ್​​ಗಳಿರುವ Charcha chopal -चौपाल चर्चा ಮತ್ತು 60 ಸಾವಿರ ಫಾಲೋವರ್ ಗಳಿರುವ Article 19 ಎಂಬ ಫೇಸ್​​ಬುಕ್ ಪುಟದಲ್ಲಿ ಈ ಪೋಸ್ಟ್ ಶೇರ್ ಆಗಿದ್ದು 4000 ಕ್ಕಿಂತಲೂ ಹೆಚ್ಚು ಲೈಕ್ ಗಿಟ್ಟಿಸಿಕೊಂಡಿದೆ. ಅಂತೆಯೇ, 50,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ Rahul gandhi future of India ಎಂಬ ಗುಂಪು ಸೇರಿದಂತೆ ಹಲವಾರು ಇತರ ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.


ಫ್ಯಾಕ್ಟ್ ಚೆಕ್

ಪ್ರಶಾಂತ್ ಕಿಶೋರ್  ಹೇಳಿಕೆಯನ್ನು ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳು ವರದಿ ಮಾಡಿಲ್ಲ ಎಂಬುದನ್ನು ಓದುಗರು ಗಮನಿಸಬೇಕು. ವೈರಲ್ ಚಿತ್ರದಲ್ಲಿರುವ ಹಿನ್ನೆಲೆ ನೋಡಿದರೆ ಇದನ್ನು ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಸೂಚಿಸುತ್ತದೆ . ಇದನ್ನು ಸುಳಿವಿನಂತೆ ಬಳಸಿಕೊಂಡು ಆಲ್ಟ್ ನ್ಯೂಸ್ ಕೀವರ್ಡ್ ಸರ್ಚ್ ಮಾಡಿದಾಗ ಕಿಶೋರ್ ಅವರ ಚಿತ್ರವು 2021 ರ ಐಡಿಯಾ ಎಕ್ಸ್‌ಚೇಂಜ್ ಎಂಬ ಇಂಡಿಯನ್ ಎಕ್ಸ್‌ಪ್ರೆಸ್ (IE) ಕಾರ್ಯಕ್ರಮದ್ದು ಎಂದುತಿಳಿದು ಬಂದಿದೆ. ಎಕ್ಸ್‌ಪ್ರೆಸ್ ಗುಂಪಿನ ಹಲವಾರು ಪತ್ರಕರ್ತರು ಕಿಶೋರ್‌ಗೆ ಪ್ರಶ್ನೆಗಳನ್ನು ಕೇಳಿದರು.  ಸಂದರ್ಶನದ ಸಂಪೂರ್ಣ ಸುದ್ದಿ ಇಲ್ಲಿದೆ.  ಇದರ ಆಧಾರದ ಮೇಲೆ, ಈ ಸಮಾರಂಭದಲ್ಲಿ ಕಿಶೋರ್ ಈ ಹೇಳಿಕೆಯನ್ನು ನೀಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆಲ್ಟ್ ನ್ಯೂಸ್ ಕಿಶೋರ್ ಅವರೊಂದಿಗೆ ಮಾತನಾಡಿದ್ದು ವೈರಲ್ ಪೋಸ್ಟ್ ನಲ್ಲಿರುವ ಮಾತುಗಳು ಸುಳ್ಳು ಎಂದು ಅವರು ಖಚಿತಪಡಿಸಿದ್ದಾರೆ.

ಕಳೆದ ವರ್ಷ ತೆಗೆದ ಪ್ರಶಾಂತ್ ಕಿಶೋರ್ ಅವರ ಚಿತ್ರವನ್ನು ಗುಜರಾತ್ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Hijab Row: ಉಡುಪಿಯಲ್ಲಿ ತಲೆ ಎತ್ತಿದ್ದ ಹಿಜಾಬ್ ವಿವಾದ: ತಕ್ಷಣ ಉಪನಿರ್ದೇಶಕರಿಗೆ ಪ್ರಿನ್ಸಿಪಾಲ್ ಕಳಿಸಿದ್ದ ವಾಟ್ಸಾಪ್ ಸಂದೇಶ ಹೀಗಿದೆ