ಬಿಜೆಪಿಯ ಸುಬ್ರಹ್ಮಣಿಯನ್ ಸ್ವಾಮಿ ಸೇರಿ 19 ರಾಜ್ಯ ಸಭಾ ಸದಸ್ಯರಿಗೆ ಈ ಬಜೆಟ್​ ಅಧಿವೇಶನವೇ ಕೊನೇ ಅಧಿವೇಶನ

ರಾಜ್ಯಸಭೆಯಿಂದ ನಿವೃತ್ತರಾಗುವ ಕಾಂಗ್ರೆಸ್ ನಾಯಕರಲ್ಲಿ ಪ್ರಮುಖವಾಗಿ ಆನಂದ್​ ಶರ್ಮಾ ಸೇರಿದ್ದಾರೆ. ಇವರು ಹಿಮಾಚಲ ಪ್ರದೇಶದಿಂದ ಆಯ್ಕೆಯಾದ ರಾಜ್ಯಸಭಾ ಎಂಪಿ. ಎರಡು ದಿನಗಳ ಹಿಂದೆ ಇವರು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಮಾತನಾಡಿದ್ದರು.

ಬಿಜೆಪಿಯ ಸುಬ್ರಹ್ಮಣಿಯನ್ ಸ್ವಾಮಿ ಸೇರಿ 19 ರಾಜ್ಯ ಸಭಾ ಸದಸ್ಯರಿಗೆ ಈ ಬಜೆಟ್​ ಅಧಿವೇಶನವೇ ಕೊನೇ ಅಧಿವೇಶನ
ಸುಬ್ರಹ್ಮಣಿಯನ್ ಸ್ವಾಮಿ
Follow us
TV9 Web
| Updated By: Lakshmi Hegde

Updated on:Feb 09, 2022 | 10:40 AM

19 ರಾಜ್ಯ ಸಭಾ ಸದಸ್ಯರಿಗೆ ಇದೀಗ ನಡೆಯುತ್ತಿರುವ ಬಜೆಟ್​ ಅಧಿವೇಶನ(Budget Session)ವೇ ಕೊನೇ ಅಧಿವೇಶನ ಆಗಲಿದೆ. ಅಂದರೆ ಬಿಜೆಪಿಯ ಐವರು ಮತ್ತು ಕಾಂಗ್ರೆಸ್​ 6 ರಾಜ್ಯ ಸಭಾ ಸದಸ್ಯರು ಸೇರಿ ಒಟ್ಟು 19 ರಾಜ್ಯ ಸಭಾ ಎಂಪಿಗಳು 2022ರ ಏಪ್ರಿಲ್​​ನಲ್ಲಿ ನಿವೃತ್ತರಾಗಲಿದ್ದಾರೆ.  ಈ ಮೂಲಕ ಕಾಂಗ್ರೆಸ್​​ನಲ್ಲಿ ರಾಜ್ಯ ಸಭಾ ಸದಸ್ಯರ ಸಂಖ್ಯೆ 34ರಿಂದ 28ಕ್ಕೆ ಇಳಿಯಲಿದ್ದು, ಬಿಜೆಪಿ ಸದಸ್ಯರ ಸಂಖ್ಯೆ ಇದೀಗ 97 ಇರುವುದು ನಂತರ 92ಕ್ಕೆ ಇಳಿಕೆಯಾಗಲಿದೆ.

ರಾಜ್ಯಸಭೆಯಿಂದ ನಿವೃತ್ತರಾಗುವ ಕಾಂಗ್ರೆಸ್ ನಾಯಕರಲ್ಲಿ ಪ್ರಮುಖವಾಗಿ ಆನಂದ್​ ಶರ್ಮಾ ಸೇರಿದ್ದಾರೆ. ಇವರು ಹಿಮಾಚಲ ಪ್ರದೇಶದಿಂದ ಆಯ್ಕೆಯಾದ ರಾಜ್ಯಸಭಾ ಎಂಪಿ. ಎರಡು ದಿನಗಳ ಹಿಂದೆ ಇವರು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಮಾತನಾಡಿದ್ದರು. ಮೇಲ್ಮನೆಯಲ್ಲಿ ಇದು ತಮ್ಮ ಕೊನೇ ಅಧಿವೇಶನವಾಗಿದ್ದು, ಯಾವುದೇ ಅಡೆತಡೆಯಿಲ್ಲದೆ ಮಾತನಾಡಲು ಅವಕಾಶ  ನೀಡಿ ಎಂದು ಶರ್ಮಾ ಆಡಳಿತ ಪಕ್ಷದ ಸದಸ್ಯರನ್ನು ಮನವಿ ಮಾಡಿದ್ದರು. ಅಂದಹಾಗೇ, ಅವರ ರಾಜ್ಯಸಭೆ ಸದಸ್ಯ ಸ್ಥಾನದ ಅವಧಿ ಏಪ್ರಿಲ್​ 2ಕ್ಕೆ ಕೊನೆಗೊಳ್ಳಲಿದೆ.  ಇನ್ನು ಈ ಲಿಸ್ಟ್​​ನಲ್ಲಿ ಬಿಜೆಪಿಯ ಸುಬ್ರಹ್ಮಣಿಯನ್​ ಸ್ವಾಮಿ ಕೂಡ ಸೇರಿದ್ದಾರೆ. ಪದೇಪದೆ ತಮ್ಮ ಮಾತು, ಹೇಳಿಕೆ, ಮೋದಿ ಸರ್ಕಾರದ ವಿರುದ್ಧ ಟೀಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಲೇ ಇದ್ದ ಸುಬ್ರಹ್ಮಣಿಯನ್ ಸ್ವಾಮಿಯವರೂ ಕೂಡ ಏಪ್ರಿಲ್​​ನಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ.

ಕಾಂಗ್ರೆಸ್​ನಲ್ಲಿ ಆನಂದ್​ ಶರ್ಮಾರೊಂದಿಗೆ ಮಾಜಿ ರಕ್ಷಣಾ ಸಚಿವ ಎ.ಕೆ.ಅಂಥೋನಿ (ಕೇರಳ), ಪ್ರತಾಪ್​ ಸಿಂಗ್ ಬಾಜ್ವಾ (ಪಂಜಾಬ್​), ಶಮ್ಷೇರ್​ ಸಿಂಗ್ ಡುಲ್ಲೋ (ಪಂಜಾಬ್​) ರಿಪುನ್​ ಬೋರಾ (ಆಸ್ಸಾಂ) ಮತ್ತು ರನೀ ನಾರಹ್​ (ಆಸ್ಸಾಂ) ಕೂಡ ನಿವೃತ್ತರಾಗಲಿದ್ದಾರೆ. ಹಾಗೇ, ಇನ್ನೊಂದೆಡೆ ಬಿಜೆಪಿಯಿಂದ ನಾಮನಿರ್ದೇಶನಗೊಂಡಿದ್ದ ಸುಬ್ರಹ್ಮಣಿಯನ್ ಸ್ವಾಮಿಯವರ ಜತೆ, ಸುರೇಶ್​ ಗೋಪಿ, ರೂಪಾ ಗಂಗೂಲಿ, ಪತ್ರಕರ್ತರಾಗಿದ್ದ ಸ್ವಪನ್​ ದಾಸ್​ಗುಪ್ತಾ, ಶ್ವೈತ್​ ಮಲ್ಲಿಕ್​(ಪಂಜಾಬ್​) ನಿವೃತ್ತರಾಗಲಿದ್ದಾರೆ. ಹಾಗೂ ರಾಷ್ಟ್ರಪತಿಯವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ಬಾಕ್ಸರ್​ ಮೇರಿಕೋಂ, ಆರ್ಥಿಕ ಶಾಸ್ತ್ರಜ್ಞ ನರೇಂದ್ರ ಜಾದವ್​  ಅವಧಿಯೂ ಏಪ್ರಿಲ್​ 24ರಂದು ಮುಗಿಯಲಿದೆ.

ಹಾಗೇ, ನಾಗ್ಪುರ ಪೀಪಲ್ಸ್​ ಫ್ರಂಟ್​ ಪಕ್ಷದ ಏಕೈಕ ರಾಜ್ಯಸಭಾ ಸದಸ್ಯ ಕೆ.ಜಿ. ಕೆನ್ಯೆರವರಿಗೂ ಕೂಡ ಏಪ್ರಿಲ್​​ನಲ್ಲಿ ನಿವೃತ್ತಿಯಾಗಲಿದೆ. ಡಿಸೆಂಬರ್​ನಲ್ಲಿ ನಾಗಾಲ್ಯಾಂಡ್​​ನಲ್ಲಿ ಒಂದು ದುರಂತ ನಡೆದಿತ್ತು. ಭಾರತೀಯ ಸೇನೆ ಅಲ್ಲಿನ 14 ನಾಗರಿಕರನ್ನು, ಬಂಡುಕೋರರು ಎಂದು ಭಾವಿಸಿ ಹತ್ಯೆ ಮಾಡಿತ್ತು. ಆಗ ಕೆನ್ಯೆ ರಾಜ್ಯಸಭೆಯಲ್ಲಿ ಅದನ್ನು ತೀವ್ರವಾಗಿ ಖಂಡಿಸಿದ್ದರು. ನಾಗಾಲ್ಯಾಂಡ್​​ನಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆ ಕಾಯ್ದೆಯನ್ನು (ಸೇನೆಗೆ ನೀಡಲಾದ ವಿಶೇಷ ಅಧಿಕಾರ) ವಾಪಸ್ ಪಡೆಯುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ. ಅದರ ಪರಿಣಾಮವಾಗಿ ಇಂಥ ದುರ್ಘಟನೆಗಳು ನಡೆಯುತ್ತಿವೆ. ಮುಗ್ಧ ಜೀವಗಳನ್ನು ಕೊಲ್ಲಲು ಸೇನೆಗೆ ಲೈಸೆನ್ಸ್ ಕೊಟ್ಟಂತಾಗಿದೆ ಎಂದು ಆರೋಪಿಸಿದ್ದರು.

ಇನ್ನುಳಿದಂತೆ ಲೋಕತಾಂತ್ರಿಕ ಜನತಾ ದಳದ ಎಂ.ವಿ.ಶ್ರೇಯಮ್​​​ ಕುಮಾರ್​ (ಕೇರಳ), ಸುಖದೇವ್ ಸಿಂಗ್​ ಧಿಂಡ್ಸಾ, ನರೇಶ್​ ಗುರ್ಜಾಲ್​(ಶಿರೋಮಣಿ ಅಕಾಲಿ ದಳ-ಪಂಜಾಬ್​), ಕೇರಳದ ಕಮ್ಯೂನಿಸ್ಟ್ ಪಾರ್ಟಿಯ ಕೆ.ಸೋಮಪ್ರಸಾದ್​, ತ್ರಿಪುರದಿಂದ ಆಯ್ಕೆಯಾಗಿದ್ದ ಝರ್ನಾ ದಾಸ್​ ಬೈದ್ಯ ಕೂಡ ಏಪ್ರಿಲ್​​ನಲ್ಲಿ ರಿಟೈರ್​ ಆಗಲಿದ್ದಾರೆ. ಈ ಮೂಲಕ ಪಂಜಾಬ್​ ರಾಜ್ಯದಿಂದಲೇ ರಾಜ್ಯಸಭೆಗೆ 5 ಸದಸ್ಯರ ಸ್ಥಾನ ಖಾಲಿ ಇರಲಿದೆ.

ಇದನ್ನೂ ಓದಿ: ಹಿಜಾಬ್​ ಮುಖ್ಯ ಅಲ್ಲ; ಶಿಕ್ಷಣ ಎಲ್ಲದನ್ನ ಮೀರಿದೆ -ಗಾಯಕಿ ಸುಹಾನಾ ಸೈಯದ್

Published On - 9:31 am, Wed, 9 February 22