ಅಪಘಾತ ಸಂಭವಿಸಿ 9 ದಿನಗಳ ಬಳಿಕ ನದಿಯಲ್ಲಿ ತಮಿಳುನಾಡು ಮಾಜಿ ಮೇಯರ್ ಪುತ್ರನ ಶವ ಪತ್ತೆ

ತಮಿಳು ಚಲನಚಿತ್ರ ನಿರ್ದೇಶಕ ಮತ್ತು ಚೆನ್ನೈನ ಮಾಜಿ ಮೇಯರ್ ಪುತ್ರ ವೆಟ್ರಿ ದುರೈಸಾಮಿ ಅವರು ಶಿಮ್ಲಾದಿಂದ ಸ್ಪಿತಿಗೆ ಪ್ರಯಾಣಿಸುತ್ತಿದ್ದ ಕಾರು ನದಿಯಲ್ಲಿ ಬಿದ್ದ ಒಂಬತ್ತು ದಿನಗಳ ನಂತರ ಮೃತದೇಹ ಪತ್ತೆಯಾಗಿದೆ. ಶಿಮ್ಲಾದಿಂದ ಸ್ಪಿತಿಗೆ ಪ್ರಯಾಣಿಸುತ್ತಿದ್ದಾಗ ಫೆಬ್ರವರಿ 4 ರಂದು ಅವರ ವಾಹನ ಅಪಘಾತಕ್ಕೀಡಾಗಿತ್ತು.

ಅಪಘಾತ ಸಂಭವಿಸಿ 9 ದಿನಗಳ ಬಳಿಕ ನದಿಯಲ್ಲಿ ತಮಿಳುನಾಡು ಮಾಜಿ ಮೇಯರ್ ಪುತ್ರನ ಶವ ಪತ್ತೆ
Image Credit source: India Today

Updated on: Feb 13, 2024 | 8:37 AM

ಅಪಘಾತ ಸಂಭವಿಸಿ 9 ದಿನಗಳ ಬಳಿಕ ತಮಿಳುನಾಡು ಮಾಜಿ ಮೇಯರ್ ಸೈದೈ ದುರೈಸಾಮಿ(Saidai Duraisamy) ಅವರ ಪುತ್ರನ ಶವ ನದಿಯಲ್ಲಿ ಪತ್ತೆಯಾಗಿದೆ. ಕಳೆದ 9 ದಿನಗಳ ಹಿಂದೆ ಹಿಮಾಚಲ ಪ್ರದೇಶದಲ್ಲಿ ಅಪಘಾತವೊಂದು ಸಂಭವಿಸಿತ್ತು. ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಿನ್ನೌರ್ ಜಿಲ್ಲೆಯಲ್ಲಿ ನದಿಗೆ ಉರುಳಿತ್ತು. ವೆಟ್ರಿ ದುರೈಸಾಮಿ ಅವರು ಶಿಮ್ಲಾದಿಂದ ವಾಪಸಾಗುತ್ತಿದ್ದಾಗ ಫೆಬ್ರವರಿ 4 ರಂದು ಅಪಘಾತ ಸಂಭವಿಸಿತ್ತು.

ಸಹ-ಪ್ರಯಾಣಿಕ ಗೋಪಿನಾಥ್ ಅವರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಕಾರು ಚಾಲಕ ತೇಂಜಿನ್ ಶವವಾಗಿ ಪತ್ತೆಯಾಗಿದ್ದಾರೆ. ಆದರೆ, 45 ವರ್ಷದ ವೆಟ್ರಿ ಎಲ್ಲಿದ್ದಾರೆ ಎಂಬುದು ತಿಳಿದುಬಂದಿರಲಿಲ್ಲ. ಭಾನುವಾರ (ಫೆಬ್ರವರಿ 4) ಈ ಘಟನೆ ನಡೆದಿದ್ದು, ವೆಟ್ರಿ ದುರೈಸಾಮಿ (45) ಅವರು ತಮ್ಮ ಸಹ ಪ್ರಯಾಣಿಕ ಗೋಪಿನಾಥ್ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಘಟನೆಯ ವೇಳೆ ಹಿಮಾಚಲ ಪ್ರದೇಶದ ಟಬೋ ನಿವಾಸಿ ತೆಂಜಿನ್ ಎಂಬಾತ ವಾಹನ ಚಲಾಯಿಸುತ್ತಿದ್ದರು. ದುರೈಸ್ವಾಮಿ ಮತ್ತು ಗೋಪಿನಾಥ್ ಸ್ಪಿತಿ ಕಣಿವೆಯಿಂದ ಹಿಂತಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಬಿದ್ದಿದೆ.
ಹಿಮಾಚಲ ಪೊಲೀಸರಿಂದ ಪಡೆದ ಮಾಹಿತಿಯ ಪ್ರಕಾರ, ಇನ್ನೋವಾ ಕಾರು HP01AA-1111 NH-05 ನಲ್ಲಿ ಕಶಾಂಗ್ ಡ್ರೈನ್ ಬಳಿ ಸಟ್ಲೆಜ್ ನದಿಗೆ ಪಲ್ಟಿಯಾಗಿದೆ.

ಮತ್ತಷ್ಟು ಓದಿ: ಹಿಮಾಚಲದಲ್ಲಿ ನಿಯಂತ್ರಣ ತಪ್ಪಿ ನದಿಗೆ ಹಾರಿದ ಕಾರು, ಚೆನ್ನೈನ ಮಾಜಿ ಮೇಯರ್ ಪುತ್ರ ನಾಪತ್ತೆ

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಿರುಪುರ ಮೂಲದ ಗೋಪಿನಾಥ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ಮೇಯರ್ ದುರೈಸಾಮಿ ಅವರ ಪುತ್ರ ವೆಟ್ರಿ ನಾಪತ್ತೆಯಾಗಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಸೈದೈ ದುರೈಸಾಮಿ ಅವರು ತಮ್ಮ ಕುಟುಂಬದೊಂದಿಗೆ ಹಿಮಾಚಲಕ್ಕೆ ತೆರಳಿದ್ದಾರೆ.

ವೆಟ್ರಿ ದುರೈಸಾಮಿ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ದೇಶಕ. ಕಾರಿನ ಚಾಲಕನನ್ನು ಹಿಮಾಚಲ ಪ್ರದೇಶದ ಥಾಬೋ ಜಿಲ್ಲೆಯ ಲಾಹೌಲ್-ಸ್ಪಿಟಿ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us