Bomb Threat: ದೆಹಲಿಯ ರಾಮ್ಲಾಲ್ ಆನಂದ್ ಕಾಲೇಜಿಗೆ ಬಾಂಬ್ ಬೆದರಿಕೆ
ದೆಹಲಿ ವಿಶ್ವವಿದ್ಯಾಲಯದ ರಾಮ್ ಲಾಲ್ ಆನಂದ್ ಕಾಲೇಜಿಗೆ ಮಾರ್ಚ್ 7 ರಂದು ಬಾಂಬ್ ಬೆದರಿಕೆ ಕರೆ ಬಂದಿದೆ. ನೈಋತ್ಯ ಡಿಸಿಪಿ ರೋಹಿತ್ ಮೀನಾ ಅವರ ಪ್ರಕಾರ, ಸುಮಾರು 9:34 ಗಂಟೆಗೆ ಬೆದರಿಕೆ ಕರೆ ಬಂದಿದೆ. ಹುಡುಕಾಟ ಮತ್ತು ತಪಾಸಣೆ ನಡೆಸಲಾಗುತ್ತಿದೆ, ಆದಾಗ್ಯೂ, ಎಎನ್‌ಐ ವರದಿ ಮಾಡಿದಂತೆ ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಅವರು ಹೇಳಿದರು.
ದೆಹಲಿ ವಿಶ್ವವಿದ್ಯಾಲಯದ ರಾಮ್ಲಾಲ್ ಆನಂದ್ ಕಾಲೇಜಿಗೆ ಬಾಂಬ್ ಬೆದರಿಕೆ(Bomb Threat) ಕರೆ ಬಂದಿದೆ. ಬೆದರಿಕೆ ಕರೆ ಬಂದ ತಕ್ಷಣ ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಇಡೀ ಕಾಲೇಜಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ದಕ್ಷಿಣ ದೆಹಲಿಯ ರಾಮ್ ಲಾಲ್ ಆನಂದ್ ಕಾಲೇಜಿನ ಉದ್ಯೋಗಿಯೊಬ್ಬರಿಂದ ಬೆಳಗ್ಗೆ 9.34 ರ ಸುಮಾರಿಗೆ ವಾಟ್ಸಾಪ್‌ನಲ್ಲಿ ಕರೆ ಬಂದಿದ್ದು, ಅದರಲ್ಲಿ ಕಾಲೇಜಿಗೆ ಬಾಂಬ್ ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
ಬೆದರಿಕೆ ಬಂದ ನಂತರ ಕಾಲೇಜಿನಲ್ಲಿ ಕೋಲಾಹಲ ಉಂಟಾಯಿತು. ಈ ಬಗ್ಗೆ ಪ್ರಾಂಶುಪಾಲರು ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಬಳಿಕ ವಿದ್ಯಾರ್ಥಿಗಳನ್ನು ತರಾತುರಿಯಲ್ಲಿ ಮನೆಗೆ ಕಳುಹಿಸಿ ಇಡೀ ಕಾಲೇಜು ಆವರಣವನ್ನು ತೆರವು ಮಾಡಲಾಗಿದೆ. ಇದೇ ವೇಳೆ ಪೊಲೀಸರಿಗೂ ವಿಷಯ ತಿಳಿಸಿದ್ದು, ಬಳಿಕ ಪೊಲೀಸರು, ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಕಾಲೇಜಿಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
Bomb Threat: ತಮಿಳುನಾಡಿನ 2 ಶಾಲೆಗಳಿಗೆ ಬಾಂಬ್ ಬೆದರಿಕೆ ತಮಿಳುನಾಡಿನ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ(Bomb Threat) ಬಂದಿದ್ದು, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪೋಷಕರಲ್ಲಿ ಭೀತಿ ಮೂಡಿಸಿದೆ. ಶಾಲೆಗಳನ್ನು ಕೊಯಮತ್ತೂರಿನ PSBB ಮಿಲೇನಿಯಮ್ ಶಾಲೆ ಮತ್ತು ಕಾಂಚೀಪುರಂ ಜಿಲ್ಲೆಯ ಖಾಸಗಿ ಶಾಲೆ ಎಂದು ಗುರುತಿಸಲಾಗಿದೆ.
ಮತ್ತಷ್ಟು ಓದಿ: ಬಾಂಬ್ ಬೆದರಿಕೆ ಕರೆಗಳು ಬಂದರೆ ಭಯ ಪಡಬೇಡಿ, ಈ ಕೆಲಸವನ್ನು ಮೊದಲು ಮಾಡಿ
ಪಿಎಸ್‌ಬಿಬಿ ಮಿಲೇನಿಯಂ ಶಾಲೆಗೆ ಭಾನುವಾರ ರಾತ್ರಿ ಇಮೇಲ್ ಬಂದಿದ್ದರೆ, ಸೋಮವಾರ ಬೆಳಗ್ಗೆ ಶಾಲೆಗೆ ಕರೆ ಮಾಡಲಾಗಿದೆ. ಬೆದರಿಕೆ ಇ-ಮೇಲ್ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ನಂತರ ಸ್ಥಳದಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲದ ಕಾರಣ ಶಿಕ್ಷಕರು, ಪೋಷಕರು, ಮಕ್ಕಳು ನಿಟ್ಟುಸಿರುಬಿಟ್ಟಿದ್ದಾರೆ.
ಮತ್ತೊಂದು ಘಟನೆ ಚೆನ್ನೈನ 5 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಶಿಕ್ಷಕರು ಚೆನ್ನೈನ 5 ಖ್ಯಾತ ಖಾಸಗಿ ಶಾಲೆ(Private School)ಗಳಿಗೆ ಅಪರಿಚಿತ ವ್ಯಕ್ತಿಯೊಬ್ಬ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ(Bomb Threat)ಯ ಸಂದೇಶ ರವಾನಿಸಿದ್ದು ಆತಂಕ ಸೃಷ್ಟಿಸಿದೆ. ಗೋಪಾಲಪುರಂ, ಜೆಜೆ ನಗರ, ಆರ್‌ಎ ಪುರಂ, ಅಣ್ಣಾನಗರ, ಪರಿಮಳ ಶಾಲೆಗಳಿಗೆ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸ್ನಿಫರ್ ಡಾಗ್‌ಗಳ ಸಹಾಯದಿಂದ ಪರೀಕ್ಷೆ ನಡೆಸುತ್ತಿದೆ.
ಶಾಲಾ ಆಡಳಿತ ಮಂಡಳಿಯು ಸಂದೇಶ ಕಳುಹಿಸಿದ ನಂತರ ಪೋಷಕರು ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಈ ನಡುವೆ ಯಾರೂ ಭಯಪಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಇ-ಮೇಲ್ ಮೂಲಕ ಬೆದರಿಕೆ ಕಳುಹಿಸಿದವರ ಪತ್ತೆಗೆ ಕಾರ್ಯಾಚರಣೆ ನಡೆದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ