ಯೂಟ್ಯೂಬ್ ವಿಡಿಯೋ ನೋಡಿ ಕೂದಲು ನೇರ ಮಾಡಲು ಹೋಗಿ ದುರಂತ ಸಾವು ಕಂಡ ಬಾಲಕ !
ಈ ದುರಂತ ನಡೆದಿದ್ದು ಕೇರಳದ ತಿರುವನಂತಪುರಂ ಬಳಿಯ ವೆಂಗನೂರು ಎಂಬಲ್ಲಿ. ಸ್ಪಿರಿಟ್ ಹಾಗೂ ಬೆಂಕಿ ಉಪಯೋಗಿಸಿ ಕೂದಲನ್ನು ನೇರ ಮಾಡುವುದುನ್ನು ಯೂಟ್ಯೂಬ್ನಲ್ಲಿ ನೋಡಿದ್ದ ಬಾಲಕ ಶಿವನಾರಾಯಣ್, ತಾನೂ ಅದೇ ರೀತಿ ಮಾಡಲು ಮುಂದಾದ.
ತಿರುವನಂತಪುರಂ: ಸೋಷಿಯಲ್ ಮೀಡಿಯಾಗಳಲ್ಲಿ ತರಹೇವಾರಿ ವಿಡಿಯೋಗಳು ಹರಿದಾಡುತ್ತವೆ. ಅದರಲ್ಲಿ ಇತ್ತೀಚೆಗೆ ಸ್ಪಿರಿಟ್ ಹಾಗೂ ಬೆಂಕಿಯನ್ನು ಬಳಸಿ ಕೂದಲು ನೇರ ಮಾಡಿಕೊಳ್ಳುವ ( hair straightening) ವಿಡಿಯೋವೊಂದು ಯೂಟ್ಯೂಬ್, ಫೇಸ್ಬುಕ್ ಸೇರಿ ಹಲವು ಕಡೆಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ಅದನ್ನು ನೋಡಿದ 12 ವರ್ಷದ ಬಾಲಕನೊಬ್ಬ ಹಾಗೇ, ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ.
ಈ ದುರಂತ ನಡೆದಿದ್ದು ಕೇರಳದ ತಿರುವನಂತಪುರಂ ಬಳಿಯ ವೆಂಗನೂರು ಎಂಬಲ್ಲಿ. ಸ್ಪಿರಿಟ್ ಹಾಗೂ ಬೆಂಕಿ ಉಪಯೋಗಿಸಿ ಕೂದಲನ್ನು ನೇರ ಮಾಡುವುದುನ್ನು ಯೂಟ್ಯೂಬ್ನಲ್ಲಿ ನೋಡಿದ್ದ ಬಾಲಕ ಶಿವನಾರಾಯಣ್, ತಾನೂ ಅದೇ ರೀತಿ ಮಾಡಲು ಮುಂದಾದ. ಮನೆಯಲ್ಲಿ ಅಜ್ಜಿಯನ್ನು ಬಿಟ್ಟು ಇನ್ಯಾರೂ ಇಲ್ಲದ ವೇಳೆ ಬಾತ್ರೂಂಗೆ ಹೋದ ಈತ ಸ್ಪಿರಿಟ್ ಬದಲು ಕೂದಲಿಗೆ ಸೀಮೆ ಎಣ್ಣೆ ಲೇಪಿಸಿದ್ದ. ನಂತರ ಬೆಂಕಿ ಕಡ್ಡಿ ಗೀರಿದ್ದ. ಇದರಿಂದ ಒಮ್ಮೆಲೇ ಹೊತ್ತಿಕೊಂಡ ಬೆಂಕಿಯಿಂದ ಬಾಲಕ ತೀವ್ರವಾಗಿ ಗಾಯಗೊಂಡಿದ್ದ.
ಅದಾದ ಬಳಿಕ ನೆರೆಮನೆಯವರೆಲ್ಲ ಸೇರಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿಗೆ ಕರೆದುಕೊಂಡು ಹೋಗುವಷ್ಟರಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಏಳನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನ ಸಾವಿನ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಈತ ಸೋಷಿಯಲ್ ಮೀಡಿಯಾಗಳಿಗೆ ತುಂಬ ಅಡಿಕ್ಟ್ ಆಗಿದ್ದ ಎಂದು ಹೇಳಿದ್ದಾರೆ.
Health Tips: ತುಂಬ ಒತ್ತಡದಿಂದ ಬಳಲುತ್ತಿದ್ದೀರಾ.. ನಿದ್ದೆಯೂ ಬರುತ್ತಿಲ್ಲವಾ?- ಅಶ್ವಗಂಧ ಬಳಕೆ ಮಾಡಿ ನೋಡಿ..