ಅಪ್ಪ-ಅಮ್ಮ ಬೈದಿದ್ದಕ್ಕೆ ಮನೆಯಲ್ಲಿದ್ದ ಲಕ್ಷ ರೂ. ಕದ್ದು ಗೋವಾಗೆ ತೆರಳಿ ಪಾರ್ಟಿ ಮಾಡಿದ ಬಾಲಕ!

ಇದರಿಂದ ಸಿಟ್ಟಾದ ಬಾಲಕ ಗೋವಾಗೆ ತೆರಳಲು ನಿರ್ಧರಿಸಿದ್ದ. ಇದಕ್ಕಾಗಿ ಮನೆಯಲ್ಲಿ ಇಟ್ಟ ಒಂದೂವರೆ ಲಕ್ಷ ಹಣವನ್ನು ಕದ್ದಿದ್ದ. ನಂತರ ಆತ ಬಸ್​ ಏರಿ ಗೋವಾಗೆ ಹೋಗಿದ್ದ!

ಅಪ್ಪ-ಅಮ್ಮ ಬೈದಿದ್ದಕ್ಕೆ ಮನೆಯಲ್ಲಿದ್ದ ಲಕ್ಷ ರೂ. ಕದ್ದು ಗೋವಾಗೆ ತೆರಳಿ ಪಾರ್ಟಿ ಮಾಡಿದ ಬಾಲಕ!
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Dec 29, 2020 | 5:47 PM

ಮಕ್ಕಳು ಓದುವುದಿಲ್ಲ ಎನ್ನುವ ಕಾರಣಕ್ಕೆ ಪಾಲಕರು ಮಕ್ಕಳಿಗೆ ಬಯ್ಯೋದು ಸಾಮಾನ್ಯ. ಪಾಲಕರು ಬೈದಿದ್ದಕ್ಕೆ ಬಹುತೇಕ ಮಕ್ಕಳು ಅತ್ತು ಸುಮ್ಮನಾಗುತ್ತಾರೆ. ಆದರೆ, ಕೆಲವರು ಮನೆ ಬಿಟ್ಟು ಹೋದ ಉದಾಹರಣೆ ಕೂಡ ಇದೆ. ಗುಜರಾತ್​​ನ ಬಾಲಕ ಕೂಡ ಪಾಲಕರು ಬೈದಿದ್ದಕ್ಕೆ ಸಿಟ್ಟಾಗಿ ಮನೆ ಬಿಟ್ಟು ಹೋಗಿದ್ದಾನೆ! ಆದ್ರೆ ಜಾಣ ಬಾಲಕ ಮನೆ ಬಿಟ್ಟು ಹೋಗುವಾಗ ಮನೆಯಲ್ಲಿದ್ದ ಹಣವನ್ನು ದೋಚಿಕೊಂಡು ಗೋವಾಗೆ ಹೋಗಿದ್ದಾನೆ! ಅದೂ ಪಾರ್ಟಿ ಮಾಡಲು..

ಆ ಬಾಲಕನ ವಯಸ್ಸು ಕೇವಲ 14 ವರ್ಷ. ಆನ್​ಲೈನ್​ ಕ್ಲಾಸ್​ಗಳು ನಡೆಯುತ್ತಿದ್ದರಿಂದ 24 ಗಂಟೆ ಮನೆಯಲ್ಲೇ ಇರುತ್ತಿದ್ದ. ಹೀಗಾಗಿ, ಬೇಸರ ಬಂದಾಗ ಆಗಾಗ ಗೇಮ್​ ಆಡುತ್ತಿದ್ದ. ಇದರಿಂದ ಸಿಟ್ಟಾದ ಪಾಲಕರು ಸರಿಯಾಗಿ ಓದುವಂತೆ ಗದರಿಸುತ್ತಿದ್ದರು. ಈ ಪ್ರಕ್ರಿಯೆ ನಿತ್ಯವೂ ನಡೆದೇ ಇತ್ತು.

ಪಾಲಕರು ಪದೇಪದೇ ಬೈದಿದ್ದನ್ನು ಆತನಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಸಿಟ್ಟಾದ ಬಾಲಕ ಗೋವಾಗೆ ತೆರಳಲು ನಿರ್ಧರಿಸಿದ್ದ. ಇದಕ್ಕಾಗಿ ಮನೆಯ ಬೀರುವಿನಲ್ಲಿಟ್ಟಿದ್ದ ಒಂದೂವರೆ ಲಕ್ಷ ಹಣವನ್ನು ಕದ್ದಿದ್ದ. ಈತ ವಡೋದರಾದಿಂದ ರೈಲ್ವೆ ಮೂಲಕ ಗೋವಾಗೆ ತೆರಳಲು ಪ್ರಯತ್ನಿಸಿದ್ದ. ಆದರೆ, ಆಧಾರ್​ ಕಾರ್ಡ್​ ಇಲ್ಲದ ಕಾರಣ ಆತನಿಗೆ ರೈಲ್ವೆ ಟಿಕೆಟ್​ ಸಿಕ್ಕಿರಲಿಲ್ಲ. ಹೀಗಾಗಿ, ಬಸ್ ಮೂಲಕ ಪುಣೆಗೆ ಹೋಗಿದ್ದ. ಅಲ್ಲಿಂದ ಗೋವಾಗೆ ಪ್ರಯಾಣಿಸಿದ್ದ.

ಗೋವಾದಲ್ಲಿ ನೈಟ್​ ಕ್ಲಬ್​ಗಳಿಗೆ ತೆರಳಿ ಹಣವನ್ನು ಉಡಾಯಿಸಿದ್ದ. ಐಷಾರಾಮಿ ಹೋಟೆಲ್​ನಲ್ಲಿ ಬಾಲಕ ಉಳಿದುಕೊಂಡಿದ್ದ. ಇನ್ನೇನು ಹಣ ಖಾಲಿ ಆಗುತ್ತದೆ ಎನ್ನುವಾಗ ಬಾಲಕ ಮರಳಿ ಪುಣೆಗೆ ಬಂದಿದ್ದ. ಈತ ಒಬ್ಬಂಟಿಯಾಗಿ ತಿರುಗಾಡುವುದನ್ನು ಕಂಡ ಪೊಲೀಸರು ಅನುಮಾನಗೊಂಡು ಆತನನ್ನು ವಿಚಾರಿಸಿದ್ದರು. ಈ ವೇಳೆ ಬಾಲಕ ನಡೆದ ಘಟನೆ ವಿವರಿಸಿದ್ದಾನೆ. ನಂತರ ಪೊಲೀಸರು ಬಾಲಕನನ್ನು ಮರಳಿ ವಡೋದರಾಗೆ ಕಳುಹಿಸಿದ್ದಾರೆ.

ಎಟಿಎಂ ಸರ್ವಿಸ್ ನೆಪದಲ್ಲಿ ATMನಿಂದ ಹಣ ಎಗರಿಸುತ್ತಿದ್ದ ಖದೀಮ ಈಗ ಖಾಕಿ ಅತಿಥಿ

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ