ಬ್ರಾಹ್ಮಣರೇ ಕ್ಯಾಂಪಸ್ ಬಿಟ್ಟು ತೊಲಗಿ; ಜೆಎನ್​ಯು ಗೋಡೆಗಳಲ್ಲಿ ಬ್ರಾಹ್ಮಣ ವಿರೋಧಿ ಘೋಷಣೆ

| Updated By: ಸುಷ್ಮಾ ಚಕ್ರೆ

Updated on: Dec 02, 2022 | 9:28 AM

ಜೆಎನ್​ಯು ಗೋಡೆಗಳ ಮೇಲೆ "ಬ್ರಾಹ್ಮಣರೇ ಕ್ಯಾಂಪಸ್ ತೊರೆಯಿರಿ" ಮತ್ತು "ಬ್ರಾಹ್ಮಣರೇ ಭಾರತ್ ಛೋಡೋ", "ಬ್ರಾಹ್ಮಣರೇ ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ನಾವು ಬರುತ್ತಿದ್ದೇವೆ" ಎಂಬ ಘೋಷಣೆಗಳು ವಿವಾದಕ್ಕೆ ಕಾರಣವಾಗಿದೆ.

ಬ್ರಾಹ್ಮಣರೇ ಕ್ಯಾಂಪಸ್ ಬಿಟ್ಟು ತೊಲಗಿ; ಜೆಎನ್​ಯು ಗೋಡೆಗಳಲ್ಲಿ ಬ್ರಾಹ್ಮಣ ವಿರೋಧಿ ಘೋಷಣೆ
ಜೆಎನ್​ಯು ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಸ್ಲೋಗನ್​ಗಳು
Follow us on

ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರೂ (JNU) ಕ್ಯಾಂಪಸ್‌ನ ಹಲವಾರು ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಬ್ರಾಹ್ಮಣರೇ ಕ್ಯಾಂಪಸ್ ಬಿಟ್ಟು ತೊಲಗಿ (Brahmins leave the campus), ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ ಎಂದು ಜೆಎನ್​ಯು ಗೋಡೆಗಳ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಜೆಎನ್​ಯು ಕ್ಯಾಂಪಸ್‌ನಲ್ಲಿ ಬ್ರಾಹ್ಮಣರನ್ನು ಬೆದರಿಸುವ ಘೋಷಣೆಗಳನ್ನು ಬರೆದಿರುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ಜೆಎನ್​ಯು ಅಧಿಕಾರಿಗಳು ಈ ಘಟನೆಯನ್ನು ಖಂಡಿಸಿ ಹೇಳಿಕೆಯನ್ನು ನೀಡಿದ್ದಾರೆ. ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಜೆಎನ್​ಯುದ ಸ್ಕೂಲ್ ಆಫ್ ಇಂಟರ್‌ನ್ಯಾಶನಲ್ ಸ್ಟಡೀಸ್-II ಕಟ್ಟಡದ ಗೋಡೆಗಳ ಮೇಲೆ ಈ ಘೋಷಣೆಗಳು ಕಂಡುಬಂದಿವೆ. ನಳಿನ್ ಕುಮಾರ್ ಮೊಹಪಾತ್ರ, ರಾಜ್ ಯಾದವ್, ಪ್ರವೇಶ್ ಕುಮಾರ್ ಮತ್ತು ವಂದನಾ ಮಿಶ್ರಾ ಸೇರಿದಂತೆ ಹಲವಾರು ಬ್ರಾಹ್ಮಣ ಪ್ರಾಧ್ಯಾಪಕರ ಕೊಠಡಿಯ ಗೋಡೆಯ ಮೇಲೆ ‘ಗೋ ಬ್ಯಾಕ್ ಟು ಶಾಖಾ’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಜೆಎನ್​ಯು ಗುಂಪು ಘರ್ಷಣೆ: ಮಾಂಸಾಹಾರ ಪೂರೈಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ

ಘೋಷಣೆಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, Brahmins lives matter ಎಂಬ ಹ್ಯಾಷ್​ಟ್ಯಾಗ್ ಟ್ರೆಂಡಿಂಗ್ ಟ್ವಿಟ್ಟರ್​​ನಲ್ಲಿ ಪ್ರಾರಂಭವಾಗಿದೆ. ಈ ಘಟನೆಯ ಬಗ್ಗೆ ಜೆಎನ್​ಯು ಪ್ರತಿಕ್ರಿಯೆ ನೀಡಿದ್ದು, “ಎಸ್‌ಐಎಸ್, ಜೆಎನ್‌ಯುನಲ್ಲಿ ನಡೆದ ಈ ಘಟನೆಯನ್ನು ಉಪಕುಲಪತಿ ಪ್ರೊ. ಸಂತಿಶ್ರೀ ಡಿ ಪಂಡಿತ್ ಗಂಭೀರವಾಗಿ ಪರಿಗಣಿಸಿದ್ದಾರೆ. ಕ್ಯಾಂಪಸ್‌ನಲ್ಲಿ ಈ ಪ್ರವೃತ್ತಿಯನ್ನು ಆಡಳಿತವು ಖಂಡಿಸುತ್ತದೆ” ಎಂದು ಹೇಳಿಕೆ ನೀಡಿದೆ.

ಎಬಿವಿಪಿ ಕೂಡ ಈ ಘಟನೆಯನ್ನು ಖಂಡಿಸಿದ್ದು, ಎಡಪಕ್ಷಗಳು ವಿಧ್ವಂಸಕ ಕೃತ್ಯವೆಸಗಿವೆ ಎಂದು ಆರೋಪಿಸಿದೆ. “ಕಮ್ಯುನಿಸ್ಟ್ ಗೂಂಡಾಗಳು ಶೈಕ್ಷಣಿಕ ಜಾಗವನ್ನು ಧ್ವಂಸಗೊಳಿಸುವುದನ್ನು ಎಬಿವಿಪಿ ಖಂಡಿಸುತ್ತದೆ. ಕಮ್ಯುನಿಸ್ಟರು ಜೆಎನ್‌ಯುನ ಸ್ಕೂಲ್ ಆಫ್ ಇಂಟರ್​ನ್ಯಾಷನಲ್ ಸ್ಟಡೀಸ್- II ಕಟ್ಟಡದ ಗೋಡೆಗಳ ಮೇಲೆ ನಿಂದನೆಗಳನ್ನು ಬರೆದಿದ್ದಾರೆ” ಎಂದು ಎಬಿವಿಪಿ ಅಧ್ಯಕ್ಷ ರೋಹಿತ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಗಲಭೆ: ಈ ವ್ಯಕ್ತಿಯಿಂದ ಜೆಎನ್​ಯು ವಿದ್ಯಾರ್ಥಿಗೆ ಹೋಗಿತ್ತು ಒಂದು ಸೂಚನೆ..ಪೊಲೀಸರು ಬಿಚ್ಚಿಟ್ಟ ಸ್ಫೋಟಕ ಮಾಹಿತಿ

ಗುರುವಾರ ಸಂಜೆ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಆವರಣದ ಗೋಡೆಗಳ ಮೇಲೆ “ಬ್ರಾಹ್ಮಣರೇ ಕ್ಯಾಂಪಸ್ ತೊರೆಯಿರಿ” ಮತ್ತು “ಬ್ರಾಹ್ಮಣರೇ ಭಾರತ್ ಛೋಡೋ”, “ಬ್ರಾಹ್ಮಣರೇ ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ನಾವು ಬರುತ್ತಿದ್ದೇವೆ” ಎಂಬ ಘೋಷಣೆಗಳು ವಿವಾದಕ್ಕೆ ಕಾರಣವಾಗಿದ್ದು, ವಿಶ್ವವಿದ್ಯಾಲಯದ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ