AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿ ಸುಂದರವಾಗಿಯೇ ಇದ್ದಾರೆ, ಆದರೂ ಸದ್ದಾಂ ಹುಸೇನ್ ರೀತಿ ಕಾಣುತ್ತಾರೆ; ಅಸ್ಸಾಂ ಸಿಎಂ ಮತ್ತೆ ಲೇವಡಿ

ರಾಹುಲ್ ಗಾಂಧಿ ಗಡ್ಡ ಬೋಳಿಸಿಕೊಂಡರೆ ಜವಾಹರಲಾಲ್ ನೆಹರು ಅವರಂತೆ ಕಾಣುತ್ತಾರೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮ ಹೇಳಿದ್ದಾರೆ.

ರಾಹುಲ್ ಗಾಂಧಿ ಸುಂದರವಾಗಿಯೇ ಇದ್ದಾರೆ, ಆದರೂ ಸದ್ದಾಂ ಹುಸೇನ್ ರೀತಿ ಕಾಣುತ್ತಾರೆ; ಅಸ್ಸಾಂ ಸಿಎಂ ಮತ್ತೆ ಲೇವಡಿ
ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮ
TV9 Web
| Edited By: |

Updated on: Dec 02, 2022 | 8:30 AM

Share

ನವದೆಹಲಿ: ರಾಹುಲ್ ಗಾಂಧಿ (Rahul Gandhi) ನೋಡಲು ಚೆನ್ನಾಗಿಯೇ ಕಾಣುತ್ತಾರೆ. ಆದರೆ, ಅವರು ಗಡ್ಡ ಬಿಟ್ಟಿರುವುದರಿಂದ ಥೇಟ್ ಸದ್ದಾಂ ಹುಸೇನ್ (Saddam Hussein) ರೀತಿಯೇ ಕಾಣುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕ ಹಿಮಾಂತ ಬಿಸ್ವ ಶರ್ಮ ಲೇವಡಿ ಮಾಡಿದ್ದಾರೆ. ಈ ಹಿಂದೆ ಕೂಡ ರಾಹುಲ್ ಗಾಂಧಿಯನ್ನು ಟೀಕಿಸಿದ್ದಕ್ಕೆ ಹಿಮಾಂತ ಬಿಸ್ವ ಶರ್ಮ (Himanta Biswa Sarma) ವಿವಾದಕ್ಕೀಡಾಗಿದ್ದರು. ಇದೀಗ ಮತ್ತೆ ಅದನ್ನೇ ಪುನರುಚ್ಛರಿಸಿರುವ ಅವರು, ರಾಹುಲ್ ಗಾಂಧಿ ಬಹಳ ಗ್ಲಾಮರಸ್ ವ್ಯಕ್ತಿ. ಆದರೆ, ಅವರು ಗಡ್ಡ ಬಿಟ್ಟಿರುವುದರಿಂದ ಸದ್ದಾಂ ಹುಸೇನ್ ರೀತಿ ಕಾಣುತ್ತಿದ್ದಾರೆ ಅಷ್ಟೆ ಎಂದು ತಮಾಷೆ ಮಾಡಿದ್ದಾರೆ.

ಈ ಹಿಂದೆ ರಾಹುಲ್ ಗಾಂಧಿ ಬಗ್ಗೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸಿಎಂ ಹಿಮಾಂತ ಬಿಸ್ವ ಶರ್ಮ, ರಾಹುಲ್ ಗಾಂಧಿ ಅವರ ಕಾರ್ಯಗಳ ಬಗ್ಗೆ ನಾನು ಪ್ರತಿಕ್ರಿಯಿಸಿಲ್ಲ. ಅವರ ಲುಕ್ ಹೇಗಿದೆ ಎಂದು ಮಾತ್ರ ಹೇಳಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮ ಗಡ್ಡ ಬಿಟ್ಟಿರುವ ರಾಹುಲ್ ಗಾಂಧಿ ಸೇಮ್ ಸದ್ದಾಂ ಹುಸೇನ್ ರೀತಿ ಕಾಣುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿ ಇದ್ದಾರೆ, ನನ್ನಲ್ಲಿ ಅಲ್ಲ: ಪತ್ರಕರ್ತರ ಪ್ರಶ್ನೆಗೆ ವಯನಾಡ್ ಸಂಸದರ ಉತ್ತರ

ರಾಹುಲ್ ಗಾಂಧಿ ಸುಂದರವಾಗಿ ಕಾಣುತ್ತಿದ್ದಾರೆ. ಅವರೊಬ್ಬ ಗ್ಲಾಮರಸ್ ವ್ಯಕ್ತಿ. ಆದರೆ, ಸದ್ಯಕ್ಕೆ ಅವರ ಫೋಟೋಗೂ, ಸದ್ದಾಂ ಹುಸೇನ್ ಫೋಟೋಗೂ ಹೋಲಿಕೆ ಮಾಡಿ ನೋಡಿದರೆ ನಾನು ಹೇಳುವುದು ಸತ್ಯವೆಂದು ನಿಮಗೇ ಗೊತ್ತಾಗುತ್ತದೆ. ನಾನು ರಾಹುಲ್ ಗಾಂಧಿಗೆ ಕೇವಲ ಸಲಹೆಯನ್ನಷ್ಟೇ ನೀಡಿದ್ದೇನೆ. ಅವರು ಗಡ್ಡ ಬೋಳಿಸಿಕೊಂಡರೆ ಜವಾಹರಲಾಲ್ ನೆಹರು ಅವರಂತೆ ಕಾಣುತ್ತಾರೆ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಸದ್ದಾಂ ಹುಸೇನ್​​ನಂತೆ ಕಾಣುತ್ತಿದ್ದಾರೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಳೆದ ತಿಂಗಳು, ಹಿಮಂತ ಬಿಸ್ವಾ ಶರ್ಮಾ ಅವರು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿಯವರ ಹೊಸ ಲುಕ್ ಅನ್ನು ಸದ್ದಾಂ ಹುಸೇನ್‌ಗೆ ಹೋಲಿಸಿದ್ದರು. ರಾಹುಲ್ ಗಾಂಧಿ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರು ಅಥವಾ ಮಹಾತ್ಮ ಗಾಂಧಿಯಂತೆ ಕಾಣಲು ಪ್ರಯತ್ನಿಸಿದರೆ ಅವರಿಗೇ ಒಳ್ಳೆಯದು. ಅದು ಬಿಟ್ಟು ಸದ್ದಾಂ ಹುಸೇನ್ ರೀತಿ ಗಡ್ಡ ಬಿಟ್ಟಿರುವುದೇಕೆ? ಎಂದು ಅವರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ