ಇಂದು (ಶುಕ್ರವಾರ) ಪಶ್ಚಿಮ ಅಂಧೇರಿಯಲ್ಲಿರುವ (Andheri West) ಲಿಂಕ್ ರೋಡ್ ನಲ್ಲಿ ಸ್ಟಾರ್ ಬಜಾರ್ ಪಕ್ಕ ಅಗ್ನಿ ಅವಘಡ (Massive Fire) ಸಂಭವಿಸಿದೆ. ಸಂಜೆ 4.30ರ ಹೊತ್ತಿಗೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು 10 ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿವೆ. 1000 ಸ್ಕ್ವೇರ್ ಫೀಟ್ ಪ್ರದೇಶದಲ್ಲಿ ದಟ್ಟಹೊಗೆಯೊಂದಿಗೆ ಬೆಂಕಿ ಉರಿದಿದ್ದು, ಇಲ್ಲಿಯವರೆಗೆ ಯಾವುದೇ ಸಾವು ನೋವು ವರದಿ ಆಗಿಲ್ಲ ಎಂದು ಮುಂಬೈ ಅಗ್ನಿಶಾಮಕ ದಳ ಹೇಳಿರುವುದಾಗಿ ಎಎನ್ಐ ಟ್ವೀಟ್ ಮಾಡಿದೆ.
A commercial building in Andheri West has caught fire and seems to be burning down to the ground. The roof has collapsed and little remains to be seen from my vantage point. This is next to Chitrakoot ground. #andherifire #mumbai pic.twitter.com/FO2hytlxnE
ಇದನ್ನೂ ಓದಿ— Anant Dwivedi (@anant_dwivedi) July 29, 2022
मुंबईच्या अंधेरी पश्चिमेत चित्रकूट सेटवर मोठी आग,
अग्निशमन दलाच्या 10 गाड्या घटनास्थळी रवाना#mumbaifire #Andheri pic.twitter.com/NrC8N8STEU— Suraj Masurkar (@SurajMasurkar9) July 29, 2022
ಸಂಜೆ 4.30ರ ಸುಮಾರಿಗೆ ಅಂಧೇರಿ ಕ್ರೀಡಾ ಸಂಕೀರ್ಣದ ಪಕ್ಕದಲ್ಲಿರುವ ಚಿತ್ರಕೂಟ ಮೈದಾನದಲ್ಲಿ ಅಳವಡಿಸಲಾಗಿದ್ದ ಫಿಲ್ಮ್ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಈ ಮೊದಲು, ಆ ಪ್ರದೇಶದ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದರು, ಆದರೆ ನಂತರ ಸಿನಿಮಾ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಖಚಿತಪಡಿಸಿದರು.
Published On - 4:58 pm, Fri, 29 July 22