Breaking: 16 ಬಂಡಾಯ ಶಿವಸೇನೆ ಶಾಸಕರಿಗೆ ನೋಟಿಸ್ ಜಾರಿ ಮಾಡಿದ ಉಪ ಸ್ಪೀಕರ್

| Updated By: ರಶ್ಮಿ ಕಲ್ಲಕಟ್ಟ

Updated on: Jun 25, 2022 | 4:30 PM

16 ಬಂಡಾಯ ಶಿವಸೇನೆ ಶಾಸಕರಿಗೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ಅನರ್ಹತೆ ನೋಟಿಸ್ ಜಾರಿ ಮಾಡಿದ್ದಾರೆ.

Breaking: 16 ಬಂಡಾಯ ಶಿವಸೇನೆ ಶಾಸಕರಿಗೆ ನೋಟಿಸ್ ಜಾರಿ ಮಾಡಿದ ಉಪ ಸ್ಪೀಕರ್
ಏಕನಾಥ್ ಶಿಂಧೆ
Follow us on

ಪ್ರಸ್ತುತ ಅಸ್ಸಾಂನ (Assam) ಗುವಾಹಟಿಯಲ್ಲಿ ತಂಗಿರುವ ಏಕನಾಥ್ ಶಿಂಧೆ (Eknath Shinde) ಪಾಳಯದ 16 ಬಂಡಾಯ ಶಿವಸೇನೆ ಶಾಸಕರಿಗೆ ಮಹಾರಾಷ್ಟ್ರ (Maharashtra) ವಿಧಾನಸಭೆಯ ಉಪ ಸ್ಪೀಕರ್ ಅನರ್ಹತೆ ನೋಟಿಸ್ ಜಾರಿ ಮಾಡಿದ್ದಾರೆ.ಇನ್ನು, ಅನರ್ಹತೆ ನೋಟಿಸ್ ನೀಡಿರುವ ಎಲ್ಲಾ 16 ಶಾಸಕರು ಜೂನ್ 27 ರ ಸೋಮವಾರದೊಳಗೆ ತಮ್ಮ ಲಿಖಿತ ಉತ್ತರಗಳನ್ನು ಸಲ್ಲಿಸಬೇಕು. ಅವರನ್ನು ಅನರ್ಹಗೊಳಿಸಿದರೆ ಏಕನಾಥ್ ಶಿಂಧೆ ಅವರು ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ಈ ಮೂಲಕ ಬಂಡಾಯ ವಿಫಲಗೊಳ್ಳುತ್ತದೆ. ಉಪ ಸ್ಪೀಕರ್ ಅವರಲ್ಲಿ ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನಾ ಮನವಿ ಮಾಡಿದ್ದು, ಇದನ್ನು ಸವಾಲಾಗಿ ಸ್ವೀಕರಿಸುವುದಾಗಿ ಶಿಂಧೆ ಶುಕ್ರವಾರ ಪ್ರತಿಕ್ರಿಯಿಸಿದ್ದರು. ಇಬ್ಬರು ಪಕ್ಷೇತರ ಶಾಸಕರಾದ ಮಹೇಶ್ ಬಾಲ್ಡಿ ಮತ್ತು ವಿನೋದ್ ಅಗರ್ವಾಲ್ ಅವರು ಬಿಜೆಪಿಗೆ ಹತ್ತಿರವಾಗಿದ್ದಾರೆ. ತಮ್ಮ ವಿರುದ್ಧದ ಅವಿಶ್ವಾಸ ಗೊತ್ತುವಳಿ ಇನ್ನೂ ಬಾಕಿ ಉಳಿದಿದ್ದು, ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ನೆನಪಿಸುವ ನೋಟಿಸ್ ಸಲ್ಲಿಸಿದ್ದರು. ಅವರ ನೋಟಿಸ್ ಅನ್ನು ಇಂದು ವಜಾಗೊಳಿಸಲಾಗಿದೆ.

ಶಿಂಧೆ ಸೇರಿದಂತೆ 12 ಬಂಡಾಯ ಶಾಸಕರ ವಿರುದ್ಧ ಶಿವಸೇನೆ ಗುರುವಾರ ತಡರಾತ್ರಿ ಮೂಲ ನೋಟಿಸ್‌ ಸಲ್ಲಿಸಿದ್ದು, ಶುಕ್ರವಾರ ಮತ್ತೆ ನಾಲ್ಕು ಹೆಸರುಗಳನ್ನು ಸೇರಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಬಂಡಾಯ ಶಾಸಕರ ನಡುವಿನ ಜಗಳ ಶನಿವಾರ ಬೆಳಗ್ಗೆ ತೀವ್ರಗೊಂಡಿದ್ದು, ಸಂಜಯ್ ರಾವುತ್ ಅವರು ಎಚ್ಚರಿಕೆಯ ಟ್ವೀಟ್‌ಗಳನ್ನು ಮಾಡಿದ್ದಾರೆ.


ಮೊದಲಿಗೆ ಅವರು ರುಡ್ಯಾರ್ಡ್ ಕಿಪ್ಲಿಂಗ್ ಅವರ ಉಲ್ಲೇಖವನ್ನು ಉಲ್ಲೇಖಿಸಿ ‘ಹಣ, ಅಥವಾ ಸ್ಥಾನ ಅಥವಾ ಕೀರ್ತಿಗಾಗಿ ಅತಿಯಾದ ಕಾಳಜಿಯಿಂದ ಎಚ್ಚರವಹಿಸಿ’. ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ ಎಚ್ಚರಿಕೆಯ ದನಿ ಇದ್ದು ಸೈನಿಕರು ಇನ್ನೂ ಬೀದಿಗೆ ಬಂದಿಲ್ಲ. ಹಾಗೆ ಮಾಡಿದರೆ ಬೀದಿಗಳಿಗೆ ಬೆಂಕಿ ಬೀಳುತ್ತದೆ” ಎಂದಿದ್ದರು. ಇದಾದ ನಂತರ ಬಂಡಾಯ ಶಾಸಕರ ಕಚೇರಿ ಮೇಲೆ ದಾಳಿ ನಡೆದಿದೆ.

Published On - 3:54 pm, Sat, 25 June 22