ಸೋನಿಯಾ ಗಾಂಧಿ (Sonia Gandhi) ಅವರು ಆಸ್ಪತ್ರೆಯಿಂದ ಹೊರಬಂದ ಎರಡು ದಿನಗಳ ನಂತರ ವಿಚಾರಣೆಯನ್ನು ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ (ED) ಮನವಿ ಮಾಡಿದರು. ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದರು. ಇದೀಗ ಎರಡು ದಿನಗಳ ನಂತರ ವಿಚಾರಣೆಯನ್ನು ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ. ಕೊವಿಡ್ (Covid-19) ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾದ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯಲು ಕಟ್ಟುನಿಟ್ಟಾಗಿ ಸಲಹೆ ನೀಡಲಾಗಿರುವುದರಿಂದ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಅಲ್ಲಿ ಹಾಜರಾಗುವುದನ್ನು ಕೆಲವು ವಾರಗಳವರೆಗೆ ಮುಂದೂಡುವಂತೆ ಇಡಿಗೆ ಪತ್ರ ಬರೆದಿದ್ದಾರೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ
कांग्रेस अध्यक्ष श्रीमती सोनिया गांधी को कोरोना और फेफड़ों के संक्रमण के कारण अस्पताल में भर्ती होने के बाद डॉक्टरों द्वारा घर पर आराम करने की सख्त सलाह के दृष्टिगत
ಇದನ್ನೂ ಓದಿ
Viral Video: ಪ್ರತಿಭಟನೆ ವೇಳೆ ಪೊಲೀಸರ ಮುಖಕ್ಕೆ ಉಗುಳಿದ ಕಾಂಗ್ರೆಸ್ ನಾಯಕಿ; ನಿಮಗೆ ನಾಚಿಕೆಯೇ ಇಲ್ವಾ? ಎಂದ ಬಿಜೆಪಿ
ಈಡಿ ಮತ್ತು ಸರ್ಕಾರ ನೀಡುತ್ತಿರುವ ಕಿರುಕುಳ ತಾತ್ಕಾಲಿಕ, ಸತ್ಯಕ್ಕೆ ಜಯ ಸಿಗಲಿದೆ: ಡಿಕೆ ಶಿವಕುಮಾರ
ಅಮಿತ್ ಶಾ, ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪ್ರಯೋಗಿಸಿದ್ದ ಅಸ್ತ್ರವೇ ರಾಹುಲ್, ಸೋನಿಯಾ ಗಾಂಧಿಗೆ ತಿರುಗುಬಾಣವಾಯಿತೇ?
ಸರ್ ಗಂಗಾರಾಮ್ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್, ಜೂನ್ 23ಕ್ಕೆ ಇಡಿ ವಿಚಾರಣೆ
ಸೋನಿಯಾ ಗಾಂಧಿ ಕೊವಿಡ್ ಧನಾತ್ಮಕ ಪರೀಕ್ಷೆ ನಡೆಸಿದ್ದರು ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದ ಸೋನಿಯಾ ಗಾಂಧಿ ಎರಡು ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು. ಜೂನ್ 2 ರಂದು ಸೋನಿಯಾ ಗಾಂಧಿಗೆ ಕೊವಿಡ್ ದೃಢಪಟ್ಟಿದ್ದು ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯದಿಂದ (ED) ಹೆಚ್ಚಿನ ಸಮಯವನ್ನು ಕೋರಿದ್ದರು. ಅವರು ಜೂನ್ 8 ರಂದು ಏಜೆನ್ಸಿಯ ಮುಂದೆ ಹಾಜರಾಗಬೇಕಿತ್ತು. ಹೆಚ್ಚಿನ ಸಮಯಾವಕಾಶಕ್ಕಾಗಿ ಅವರ ಕೋರಿಕೆಗೆ ಸಂಸ್ಥೆ ಸಮ್ಮತಿಸಿತ್ತು.
ಜೂನ್ 12 ರಂದು ಉಸಿರಾಟದ ತೊಂದರೆಯಿಂದ ಸೋನಿಯಾ ಗಾಂಧಿ ಅವರನ್ನು ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 20ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿತ್ತು.