ಮದುವೆಯ ಬಳಿಕ ಬಯಲಾಯ್ತು ಹುಡುಗನ ಪ್ರೇಮಕಥೆ; ಮದುಮಗನ ಕೆನ್ನೆಗೆ ಬಾರಿಸಿಯೇ ಬಿಟ್ಟಳು ವಧು

ವರ ಈ ಹಿಂದೆ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಷಯವೊಂದು ಬೆಳಕಿಗೆ ಬಂದಿದೆ. ಹಾಗಾಗಿ ವಧು, ವರನಿಗೆ ಕಪಾಳಮೋಕ್ಷ ಮಾಡಿ ತನ್ನ ಹೆತ್ತವರ ಬಳಿ ಹಿಂತಿರುಗಿದ್ದಾಳೆ ಎಂಬ ಕಾರಣ ವರದಿಯಾಗಿದೆ.

ಮದುವೆಯ ಬಳಿಕ ಬಯಲಾಯ್ತು ಹುಡುಗನ ಪ್ರೇಮಕಥೆ; ಮದುಮಗನ ಕೆನ್ನೆಗೆ  ಬಾರಿಸಿಯೇ ಬಿಟ್ಟಳು ವಧು
ಪ್ರಾತಿನಿಧಿಕ
Edited By:

Updated on: Jun 24, 2021 | 1:01 PM

ಉತ್ತರ ಪ್ರದೇಶದಲ್ಲಿ ನಡೆದ ವಿಚಿತ್ರ ಪ್ರಕರಣವೊಂದು ಜನರು ದಿಗ್ಭ್ರಮೆಗೊಳಗಾಗುವಂತೆ ಮಾಡಿದೆ. ಈಗತಾನೇ ಮದುವೆಯಾಗಿ ಮನೆಗೆ ಪ್ರವೇಶಿಸುತ್ತಿರುವ ವಧು, ವರನಿಗೆ ಕಪಾಳಮೋಕ್ಷ ಮಾಡಿ ತನ್ನ ಹೆತ್ತ ಮನೆಗೆ ಹಿಂತಿರುಗಿದ ಘಟನೆ ನಡೆದಿದೆ. ವಿಷಯ ಪೋಷಕರಿಗೆ ಗೊತ್ತಾಗುತ್ತಿದ್ದಂದತೆಯೇ ಪೊಲೀಸರಿಗೆ ನಡೆದ ಘಟನೆಯ ಕುರಿತಾಗಿ ತಿಳಿಸಲಾಗಿದೆ. ಪೊಲೀಸರು ಈ ಕುರಿತಂತೆ ಸಮಾಲೋಚನೆ ನಡೆಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ.

ಪೊಲೀಸರ ಪ್ರಕಾರ ಘಟನೆ ಜೌನ್​ಪುರ ಲಾವಯಾನ್​​ ಗ್ರಾಮದಲ್ಲಿ ನಡೆದಿದೆ. ನವ ಜೋಡಿಗಳನ್ನು ಸ್ವಾಗತಿಸಲು ಸಕಲ ಸಿದ್ಧತೆಗಳು ನಡೆದಿದ್ದವು. ಪ್ರಾಥಮಿಕ ತನಿಖೆಯ ಪ್ರಕಾರ, ವರ ಈ ಹಿಂದೆ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಷಯವೊಂದು ಬೆಳಕಿಗೆ ಬಂದಿದೆ. ಹಾಗಾಗಿ ವಧು, ವರನಿಗೆ ಕಪಾಳಮೋಕ್ಷ ಮಾಡಿ ತನ್ನ ಹೆತ್ತವರ ಬಳಿ ಹಿಂತಿರುಗಿದ್ದಾಳೆ ಎಂಬ ಕಾರಣ ವರದಿಯಾಗಿದೆ.

ವರನ ಮೆರೆವಣಿಗೆ ವಧುವಿನ ಮನೆಗೆ ತಲುಪಿದಾಗ ಯಾವುದೇ ವಿಷಯ ತಿಳಿದಿರಲಿಲ್ಲ. ಮರುದಿನ ವಧುವನ್ನು ವರನ ಮನೆಗೆ ಸ್ವಾಗತಿಸುವ ನಿಟ್ಟಿನಲ್ಲಿ ನವ ಜೋಡಿಗಳನ್ನು ವರನ ಮನೆಗೆ ಕರೆದೊಯ್ಯುವ ವೇಳೆ ಕಪಾಳಮೋಕ್ಷ ಮಾಡಿದ್ದಾಳೆ. ಜತೆಗೆ ತನ್ನ ಹೆತ್ತವರ ಬಳಿ ಓಡಿ ಹೋಗಿದ್ದಾಳೆ.

ಈ ಹಿಂದೆ ಕೂಡಾ ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿತ್ತು. ಕೋಪಗೊಂಡ ವರನು ತನ್ನ ಹೆಂಡತಿಗೆ ಕಪಾಳಮೋಕ್ಷ ಮಾಡಿದ್ದನು. ವಧುವಿನ ಸಂಬಂಧಿಕರು ವರ, ಕಪಾಳಮೋಕ್ಷ ಮಾಡಿರುವುದನ್ನು ವಿರೋಧಿಸಿದ್ದರು. ಘಟನೆಯಿಂದ ವರ ಮತ್ತು ವಧುವಿನ ಕುಟುಂಬಸ್ಥರ ನಡುವೆ ಜಗಳ ಏರ್ಪಟ್ಟಿತ್ತು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೂಲಂಕುಶ ಪರಿಶೀಲನೆ ನಡೆಸಿದ್ದರು. ಇದೇ ತೆರೆನಾದ ಘಟನೆಯೊಂದು ಇದೀಗ ನಡೆದಿದೆ.

ಇದನ್ನೂ ಓದಿ:

Viral video: ವಿವಾಹವಾಗುವ ಉತ್ಸಾಹದಲ್ಲಿ ಮದುಮಗ! ಬರಿಗಾಲಿನಲ್ಲಿಯೇ ರಸ್ತೆಯಲ್ಲಿ ಸಕತ್​ ಡಾನ್ಸ್

Viral Video: ಮದುವೆ ಮಂಟಪದಲ್ಲೇ ಸಿಟ್ಟಿಗೆದ್ದ ಹುಡುಗಿ; ಮದುಮಗನ ಮುಖಕ್ಕೆ ಸ್ವೀಟ್ ಎಸೆದು ಆಕ್ರೋಶ! ವಿಡಿಯೋ ವೈರಲ್