ಕೊವಿಡ್ ಲಸಿಕೆ ಪಡೆಯಲು ಪ್ರೋತ್ಸಾಹಿಸಬೇಕು, ಮೂರನೇ ಅಲೆ ಎದುರಿಸಲು ಸಿದ್ಧರಾಗಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಸೋನಿಯಾ ಗಾಂಧಿ ವಿನಂತಿ

Sonia Gandhi: ಲಸಿಕೆ ಹಿಂಜರಿಕೆಯನ್ನು ಸ್ಪಷ್ಟವಾಗಿ ಕಂಡುಬರುವಲ್ಲೆಲ್ಲಾ ಪಕ್ಷ ಅದನ್ನು ಪರಿಹರಿಸಬೇಕು ಮತ್ತು ನೋಂದಣಿಗೆ ಉತ್ತೇಜನ ನೀಡಬೇಕು, ಜೊತೆಗೆ ಲಸಿಕೆ ವ್ಯರ್ಥವಾಗುವುದನ್ನು ಕಡಿಮೆಗೊಳಿಸಬೇಕು ಎಂದು ಸೋನಿಯಾ ಗಾಂಧಿ ಹೇಳಿದರು.

ಕೊವಿಡ್ ಲಸಿಕೆ ಪಡೆಯಲು ಪ್ರೋತ್ಸಾಹಿಸಬೇಕು, ಮೂರನೇ ಅಲೆ ಎದುರಿಸಲು ಸಿದ್ಧರಾಗಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಸೋನಿಯಾ ಗಾಂಧಿ ವಿನಂತಿ
ಸೋನಿಯಾ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 24, 2021 | 2:18 PM

ದೆಹಲಿ: ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ರಾಜ್ಯಗಳ ಉಸ್ತುವಾರಿಗಳೊಂದಿಗಿನ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಪಕ್ಷವು “ಸಂಪೂರ್ಣ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಖಾತ್ರಿಪಡಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು” ಎಂದು ಹೇಳಿದ್ದಾರೆ. ವ್ಯಾಕ್ಸಿನೇಷನ್ ದೈನಂದಿನ ದರದಲ್ಲಿ ಕಳವಳ ವ್ಯಕ್ತಪಡಿಸಿದ ಅವರು, ವರ್ಷದ ಅಂತ್ಯದ ವೇಳೆಗೆ ಶೇಕಡಾ 75 ರಷ್ಟು ಜನಸಂಖ್ಯೆಗೆ ಲಸಿಕೆ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇದು ಕಡ್ಡಾಯವಾಗಿದೆ ಎಂದು ಹೇಳಿದರು. “ನಿಸ್ಸಂದೇಹವಾಗಿ, ಇದು ಸಂಪೂರ್ಣವಾಗಿ ಲಸಿಕೆ ಪೂರೈಕೆಯ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ಪಕ್ಷದ ಒತ್ತಾಯದ ಮೇರೆಗೆ ಅಂತಿಮವಾಗಿ ಇದರ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕೇಂದ್ರ ಸರ್ಕಾರದ ಮೇಲೆ ನಾವು ಒತ್ತಡ ಹೇರುತ್ತಲೇ ಇರಬೇಕು, ”ಎಂದು ಅವರು ಹೇಳಿದರು.

ಲಸಿಕೆ ಹಿಂಜರಿಕೆಯನ್ನು ಸ್ಪಷ್ಟವಾಗಿ ಕಂಡುಬರುವಲ್ಲೆಲ್ಲಾ ಪಕ್ಷ ಅದನ್ನು ಪರಿಹರಿಸಬೇಕು ಮತ್ತು ನೋಂದಣಿಗೆ ಉತ್ತೇಜನ ನೀಡಬೇಕು, ಜೊತೆಗೆ ಲಸಿಕೆ ವ್ಯರ್ಥವಾಗುವುದನ್ನು ಕಡಿಮೆಗೊಳಿಸಬೇಕು ಎಂದು ಸೋನಿಯಾ ಗಾಂಧಿ ಹೇಳಿದರು.

ದೇಶದಲ್ಲಿ ಮೂರನೇ ಅಲೆ ಕೊರೊನಾವೈರಸ್ ಸೋಂಕಿನ ಬೆದರಿಕೆಯ ಬಗ್ಗೆಯೂ ಅವರು ಗಮನ ಸೆಳೆದರು, ಅದು ಇಂದಿನಿಂದ ಕೆಲವು ತಿಂಗಳುಗಳಲ್ಲಿ ಅದು ಬರಲಿದೆ. ಕೆಲವು ತಜ್ಞರು ಮಕ್ಕಳನ್ನು ಇದು ಬಾಧಿಸಲಿದೆ ಎಂದು ಹೇಳಿದ್ದು “ಈ ವಿಪತ್ತನ್ನು ತಪ್ಪಿಸಲು ಪೂರ್ವಭಾವಿ ಕ್ರಮಗಳನ್ನು ಪಕ್ಷ ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿದರು.

“ಈ ಅಲೆ ಅಪ್ಪಳಿಸುವ ಮುನ್ನ ತಯಾರಾಗಲು ನಾವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಅವರು ಹೇಳಿದರು. ಎರಡನೇ ಅಲೆ ಆಘಾತಕಾರಿ ಅನುಭವದಿಂದ ನಾವು ಕಲಿಯಬೇಕು. ನಾವು ಅದನ್ನು ಮತ್ತೆ ಅನುಭವಿಸಬಾರದು.

ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಡುಗಡೆ ಮಾಡಿದ ಸಾಂಕ್ರಾಮಿಕ ರೋಗದ ಕೇಂದ್ರದ “ದುರುಪಯೋಗ” ದ ಶ್ವೇತಪತ್ರವನ್ನು ಉಲ್ಲೇಖಿಸಿ, ಅದನ್ನು “ವ್ಯಾಪಕವಾಗಿ ಪ್ರಸಾರ ಮಾಡಬೇಕು” ಎಂದು ಸೋನಿಯಾ ಹೇಳಿದರು.

ಇದನ್ನೂ ಓದಿ:  Coronavirus cases in India: ದೇಶದಲ್ಲಿ 54,336 ಹೊಸ ಕೊವಿಡ್ ಪ್ರಕರಣ ಪತ್ತೆ, 1321 ಮಂದಿ ಸಾವು