Bigamy: ಒಂದೇ ಮಂಟಪದಲ್ಲಿ ಇಬ್ಬರು ಯುವತಿಯರನ್ನು ಮದುವೆಯಾದ ವರ ಮಹಾಶಯ; ಮೂವರೂ ಪದವೀಧರರು!

ವರ ವೆಲಾಡಿ ಅರ್ಜುನ್​ ಅವರನ್ನೇ  ಮದುವೆಯಾಗುವುದಾಗಿ ಈ ಇಬ್ಬರೂ ಯುವತಿಯರು ಪಟ್ಟು ಹಿಡಿದಿದ್ದರು. ಇವರಿಬ್ಬರೂ ವರನಿಗೆ  ಸಂಬಂಧಿಗಳು.

Bigamy: ಒಂದೇ ಮಂಟಪದಲ್ಲಿ ಇಬ್ಬರು ಯುವತಿಯರನ್ನು ಮದುವೆಯಾದ ವರ ಮಹಾಶಯ; ಮೂವರೂ ಪದವೀಧರರು!
ಒಂದೇ ಮಂಟಪದಲ್ಲಿ ಇಬ್ಬರು ಯುವತಿಯರನ್ನು ಮದುವೆಯಾದ ವರ ಮಹಾಶಯ; ಮೂವರೂ ಪದವೀಧರರು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 18, 2021 | 2:36 PM

ಹೈದರಾಬಾದ್: ವರ ಮಹಾಶಯ ಒಂದೇ ಮಂಟಪದಲ್ಲಿ ಇಬ್ಬರು ಯುವತಿಯರನ್ನು ಮಂಗಳವಾರ (ಜೂನ್ 15) ಮದುವೆಯಾದ ಪ್ರಸಂಗ ತೆಲಂಗಾಣದ ಅದಿಲಾಬಾದ್​ ಜಿಲ್ಲಾ ಉಟ್ನೂರು ಮಂಡಲಂ ಮನ್ಸೂರ್​ನಲ್ಲಿ ನಡೆದಿದೆ.  ವರ ವೆಲಾಡಿ ಅರ್ಜುನ್​ ಅವರನ್ನೇ  ಮದುವೆಯಾಗುವುದಾಗಿ ಈ ಇಬ್ಬರೂ ಯುವತಿಯರು ಪಟ್ಟು ಹಿಡಿದಿದ್ದರು. ಇವರಿಬ್ಬರೂ  ಸಂಬಂಧಿಗಳು. ವರ ಪದವೀಧರನಾಗಿದ್ದು, ಇಬ್ಬರೂ ವಧುಗಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆಶ್ಚರ್ಯವೆಂದ್ರೆ  ಯುವತಿಯರಿಬ್ಬರೂ ಕಳೆದ 4 ವರ್ಷಗಳಿಂದ ಅರ್ಜುನನನ್ನು ಪ್ರೀತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಂಬಂಧದಲ್ಲಿ ಭಾವನಾಗುತ್ತಿದ್ದ ವೇಲಾಡಿ ಅರ್ಜುನನನ್ನು (Veladi Arjun) ಮದುವೆಯಾಗಲು ಕನಕ ಉಶಾರಾಣಿ (Kanaka Usharani) ಮತ್ತು ಅದಾ ಸುರೇಖಾ (Ada Surekha) ಇಬ್ಬರೂ ಯುವತಿಯ ಪಟ್ಟು ಹಿಡಿದಿದ್ದರು. ಇದಕ್ಕೆ ಸಮಾಜ ಮತ್ತು ಅವರ ಹಿರಿಯರ ವಿರೋಧ ಇತ್ತು. ಆದರೆ ಈಗ ಸಮಾಜದ ಹಿರಿಯರ ವಿರೋಧ ಲೆಕ್ಕಿಸದೇ ಯುವತಿಯರ ಕುಟುಂಬಸ್ಥರು ಮದುವೆಗೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಸಂಭ್ರಮದಿಂದ ಮದುವೆ ನಡೆದಿದೆ.  ಗಿರಿಜನ ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆದಿದೆ.

ಇತ್ತೀಚೆಗೆ ಕೋಲಾರದಲ್ಲಿಯೂ ಯುವಕನೊಬ್ಬ ಅಕ್ಕ-ತಂಗಿಯರನ್ನು ಮದುವೆಯಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಅಕ್ಕ-ತಂಗಿಯನ್ನು ಒಟ್ಟಿಗೆ ಮದುವೆಯಾದ ಪ್ರಕರಣಕ್ಕೆ ಹೊಸ ಟ್ವಿಸ್ಟ್​; ಪತಿ ಉಮಾಪತಿ ಅರೆಸ್ಟ್​, ಕಾರಣ ಏನು?

ಎರಡು ತಿಂಗಳ ಮಗುವನ್ನು ನೀರಿನಿ ಟ್ಯಾಂಕಿನಲ್ಲಿ ಮುಳುಗಿಸಿ ಹತ್ಯೆ: 2 ತಿಂಗಳ ಮಗುವನ್ನು ನೀರಿನಿ ಟ್ಯಾಂಕಿನಲ್ಲಿ ಮುಳುಗಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ತೆಲಂಗಾಣದ ರಂಗಾ ರೆಡ್ಡಿ ಜಿಲ್ಲಾ ಅಬ್ದುಲ್ಲಾ ಪುರಮೇಟ್​ ಮಂಡಲಂನ ಅನಾಜ್​ಪೂರ್​ನಲ್ಲಿ ಈ ಘಟನೆ ನಡೆದಿದೆ.

ಮಗುವಿನ ಸೋದರ ಮಾವ ರಾಜು, ಅತ್ತೆ ಶ್ವೇತಾಳಿಂದ ಈ ಹೇಯ ಕೃತ್ಯ ನಡೆದಿದೆ.  ಘಟನೆಯ ನಂತರ, ಮಗು ಆಕಸ್ಮಿಕವಾಗಿ ನೀರಿನ ಟ್ಯಾಂಕಿನಲ್ಲಿ ಬಿದ್ದು ಸಾವನ್ನಪ್ಪಿದೆ ಎಂದು ಇವರಿಬ್ಬರೂ ಕಥೆ ಕಟ್ಟಲು ಯತ್ನಿಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆಯ ನಂತರ ಅದು ಆಕಸ್ಮಿಕ ಸಾವಲ್ಲ, ಹತ್ಯೆ ಎಂದು ಪತ್ತೆಯಾಗಿದೆ. ಸೋದರಮಾವ ರಾಜು ಮತ್ತು ಅತ್ತೆ ಶ್ವೇತಾಳನ್ನು ಪೊಲೀಸರು ಬಂಧಿಸಿದ್ದಾರೆ.  ಸೋದರ ಮಾವ ರಾಜುಗೆ ಮಕ್ಕಳಿಲ್ಲದಿರುವುದು ಹಾಗೂ ಕೌಟುಂಬಿಕ ಕಲಹದಿಂದ ಹತ್ಯೆಗೈದಿರೋದಾಗಿ ಪೊಲೀಸರು ಅನುಮಾನಿಸಿದ್ದಾರೆ. ಅಬ್ದುಲ್ಲಾಪುರಮೇಟ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(bridegroom Veladi Arjun marries 2 brides Kanaka Usharani and Ada Surekha in Ghanpur in Utnoor mandal in Adilabad)

Published On - 2:32 pm, Fri, 18 June 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್