Sign In

By signing in or creating an account, you agree with Associated Broadcasting Company's Terms & Conditions and Privacy Policy.

Afzal Ansari: ಬಿಎಸ್‌ಪಿಯ ಅಫ್ಜಲ್ ಅನ್ಸಾರಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹ

ಕ್ರಿಮಿನಲ್ ಪ್ರಕರಣದಲ್ಲಿ ಬಿಎಸ್‌ಪಿಯ ಅಫ್ಜಲ್ ಅನ್ಸಾರಿ ದೋಷಿ ಎಂದು ಘೋಷಿಸಿದ ನ್ಯಾಯಾಲಯ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಸಂಸತ್ತಿನ ನಿಯಮಗಳ ಪ್ರಕಾರ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾದ ಯಾವುದೇ ಸದಸ್ಯರು ಲೋಕಸಭ ಸ್ಥಾನಕ್ಕೆ ಅನರ್ಹರಾಗುತ್ತಾರೆ

Afzal Ansari: ಬಿಎಸ್‌ಪಿಯ ಅಫ್ಜಲ್ ಅನ್ಸಾರಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹ
ಅಪ್ಜಲ್ ಅನ್ಸಾರಿ
Follow us
ರಶ್ಮಿ ಕಲ್ಲಕಟ್ಟ
|

Updated on:May 01, 2023 | 8:12 PM

ಬಹುಜನ ಸಮಾಜ ಪಕ್ಷ  (BSP) ಸಂಸದ ಅಫ್ಜಲ್ ಅನ್ಸಾರಿಯನ್ನು ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು  ಹೇಳಿ ಮತ್ತು 4 ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿದ ನಂತರ ಅವರನ್ನು ಈಗ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಗ್ಯಾಂಗ್ ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿಯ ಸಹೋದರನಾಗಿರುವ  ಸಂಸದ ಅಫ್ಜಲ್ ಅನ್ಸಾರಿ ಅವರನ್ನು 2007 ರ ಗ್ಯಾಂಗ್​​ಸ್ಟರ್ ಕಾಯ್ದೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಣೆ ಆದ ನಂತರ ಸೋಮವಾರ ಲೋಕಸಭೆಯಿಂದ ಅನರ್ಹಗೊಳಿಸಲಾಯಿತು. 2005ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ (BJP MLA Krishnanand Rai) ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್‌ಪಿ ನಾಯಕ ಅಫ್ಜಲ್ ಅನ್ಸಾರಿ (Afzal Ansari) ದೋಷಿ ಎಂದು ಘೋಷಿಸಿದ ಘಾಜಿಪುರ ನ್ಯಾಯಾಲಯ 4 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ವಿಧಿಸಿತ್ತು.  ಇದೇ ಪ್ರಕರಣದಲ್ಲಿ ಅವರ ಸಹೋದರ ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಸಂಸತ್ತಿನ ನಿಯಮಗಳ ಪ್ರಕಾರ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾದ ಯಾವುದೇ ಸದಸ್ಯರು ಲೋಕಸಭ ಸ್ಥಾನಕ್ಕೆ ಅನರ್ಹರಾಗುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ರ ಮಾನನಷ್ಟ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ, ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಅದೇ ನಿಯಮದ ಪ್ರಕಾರ ಇತ್ತೀಚೆಗೆ ತಮ್ಮ ಸಂಸದ ಸ್ಥಾನ ಕಳೆದುಕೊಂಡಿದ್ದರು.

ಅಫ್ಜಲ್ ಅನ್ಸಾರಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸುವ ಮುನ್ನ ಘಾಜಿಪುರ ನ್ಯಾಯಾಲಯ  ಗ್ಯಾಂಗ್​​ಸ್ಟರ್, ಮಾಫಿಯಾ ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ₹ 5 ಲಕ್ಷ ದಂಡ ವಿಧಿಸಿತ್ತು.

ಇದನ್ನೂ ಓದಿ: ರಾಜೀವ್ ಗಾಂಧಿ ಮೃತದೇಹದ ಒಂದು ಚೂರೂ ಸಿಗಲಿಲ್ಲ; ವಿವಾದಕ್ಕೀಡಾದ ಆಜಂ ಖಾನ್ ಹೇಳಿಕೆ

ಜನವರಿಯಲ್ಲಿ ಪೊಲೀಸರು ಮುಖ್ತಾರ್ ಅನ್ಸಾರಿ ವಿರುದ್ಧ 2001 ರ ಉಸ್ರಿ ಚಟ್ಟಿ ಗ್ಯಾಂಗ್​​ವಾರ್ ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣವನ್ನು ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 ರ ಅಡಿಯಲ್ಲಿ ಅನ್ಸಾರಿ ವಿರುದ್ಧ ಗಾಜಿಪುರದ ಮೊಹಮ್ಮದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನವರಿ 18 ರಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಮಾರ್ಚ್ 15 ರಂದು ಗಾಜಿಪುರ ಎಂಪಿ ಎಂಎಲ್​​ಎ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿತು. ಇದು ಅನ್ಸಾರಿಯನ್ನು ಬಂದಾದಲ್ಲಿನ ಉನ್ನತ ದರ್ಜೆಯ ಜೈಲಿನಲ್ಲಿ ಇರಿಸಲು ಅನುಮತಿ ನೀಡಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅನ್ಸಾರಿ ಮತ್ತು ಆತನ ಸಹಾಯಕ ಭೀಮ್ ಸಿಂಗ್‌ಗೆ ಘಾಜಿಪುರದ ಗ್ಯಾಂಗ್​​ಸ್ಟರ್ ನ್ಯಾಯಾಲಯವು ಕೊಲೆ ಮತ್ತು ಕೊಲೆ ಯತ್ನಕ್ಕೆ ಸಂಬಂಧಿಸಿದ ಐದು ಪ್ರಕರಣಗಳಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.

ಈ ಪ್ರಕರಣಗಳಲ್ಲಿ ಕಾನ್‌ಸ್ಟೆಬಲ್ ರಘುವಂಶ್ ಸಿಂಗ್ ಹತ್ಯೆ ಮತ್ತು ಘಾಜಿಪುರದ ಹೆಚ್ಚುವರಿ ಎಸ್‌ಪಿ ಮೇಲೆ ಕೊಲೆಗೈದ ಹಲ್ಲೆ ಪ್ರಕರಣಗಳು ಸೇರಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:40 pm, Mon, 1 May 23

ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ