Budget 2021 | ಆರೋಗ್ಯ ಕ್ಷೇತ್ರಕ್ಕೆ 2.23 ಲಕ್ಷ ಕೋಟಿ ರೂ. ಮೀಸಲು; ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್ ಯೋಜನೆಗೆ 64,180 ಕೋಟಿ ರೂ.
ಕೊವಿಡ್-19 ಲಸಿಕೆಗಳು ಆತ್ಮನಿರ್ಭರದ ಸಂಕೇತವಾಗಿವೆ. ಇದಕ್ಕೆ 35 ಸಾವಿರ ಕೋಟಿ ರೂ. ನೀಡಲಾಗಿದೆ. 9 ಬಯೋಸೇಫ್ಟಿ ಲ್ಯಾಬ್ಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2021-22ನೇ ಸಾಲಿನ ಬಜೆಟ್ನಲ್ಲಿ ಪ್ರಥಮವಾಗಿ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್ ಯೋಜನೆಯನ್ನು ಉಲ್ಲೇಖಿಸಿದರು. ದೇಶದ ಆರೋಗ್ಯ ಕ್ಷೇತ್ರವನ್ನು ಸುಸ್ಥಿರ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಈ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್ ಯೋಜನೆ ಪ್ರಾರಂಭಿಸಿದ್ದು, ಇದಕ್ಕಾಗಿ ಮುಂದಿನ ಆರುವರ್ಷಗಳನ್ನು ಗಮನದಲ್ಲಿಟ್ಟುಕೊಂಡು 64,180 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಬಜೆಟ್ 2021 ಆರು ಸ್ತಂಭಗಳ ಮೇಲೆ ನಿಂತಿದೆ.. ಅವುಗಳೆಂದರೆ ಆರೋಗ್ಯ ಮತ್ತು ಯೋಗಕ್ಷೇಮ, ಭೌತಿಕ ಮತ್ತು ಆರ್ಥಿಕ ಬಂಡವಾಳ, ಮೂಲಸೌಕರ್ಯ, ಮಹಾತ್ವಾಕಾಂಕ್ಷಿ ಭಾರತ ನಿರ್ಮಾಣಕ್ಕಾಗಿ ಅಂತರ್ಗತ ಅಭಿವೃದ್ಧಿ, ಮಾನವ ಸಂಪನ್ಮೂಲವನ್ನು ಪುನರುಜ್ಜೀವನಗೊಳಿಸುವುದು, ನಾವೀನ್ಯತೆ ಮತ್ತು ಸಂಶೋಧನೆ-ಅಭಿವೃದ್ಧಿ, ಕನಿಷ್ಠ ಸರ್ಕಾರ-ಗರಿಷ್ಠ ಆಡಳಿತ ಎಂದು ನಿರ್ಮಲಾ ಸೀತಾರಾಮನ್ ತಿಳಸಿದರು.
ಕೊವಿಡ್ 19 ಲಸಿಕೆಗೆ 35 ಸಾವಿರ ಕೋಟಿ ಕೊವಿಡ್-19 ಲಸಿಕೆಗಳು ಆತ್ಮನಿರ್ಭರದ ಸಂಕೇತವಾಗಿವೆ. ಇದಕ್ಕೆ 35 ಸಾವಿರ ಕೋಟಿ ರೂ. ನೀಡಲಾಗಿದೆ. 9 ಬಯೋಸೇಫ್ಟಿ ಲ್ಯಾಬ್ಗಳನ್ನು ಸ್ಥಾಪನೆ ಮಾಡಲಾಗಿದೆ. ಹಾಗೇ ನಗರ ಸ್ವಚ್ಛ ಭಾರತ್ ಯೋಜನೆಗೆ ಮುಂಬರುವ ಐದು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು 1,41,670 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಒಟ್ಟಾರೆ 2.23 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
Budget 2021 LIVE: ಬೆಂಗಳೂರು ಮೆಟ್ರೊ 2ಎ, 2ಬಿ ಯೋಜನೆಯಡಿ 58.19 ಕಿಮೀ ವಿಸ್ತರಣೆಗೆ ಅನುದಾನ ಘೋಷಣೆ
Published On - 11:52 am, Mon, 1 February 21