75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ಹಾಗೂ ಬಡ್ಡಿ ಮೇಲಿನ ತೆರಿಗೆಯಲ್ಲಿ ವಿನಾಯ್ತಿ ನಿಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಪಿಂಚಣಿ ಮತ್ತು ಬ್ಯಾಂಕ್ ಬಡ್ಡಿಯನ್ನೇ ಅವಲಂಬಿಸಿ ಜೀವನ ನಡೆಯುವ ಈ ವಯೋಮಾನದ ನಾಗರಿಕರು ಇನ್ನು ಮುಂದೆ ಐಟಿ ರಿಟರ್ನ್ಸ್ ಸಹ ಸಲ್ಲಿಸಬೇಕಿಲ್ಲ. ಈ ಕುರಿತು ಮತ್ತಷ್ಟು ವಿವರಗಳನ್ನು ಶೀಘ್ರ ನೀಡಲಾಗುವುದು ಎಂದು ಸಚಿವರು ಹೇಳಿದರು.
ಕಡಿಮೆ ದರದ ಮನೆಗಳಿಗೆ ತೆರಿಗೆ ವಿನಾಯ್ತಿ
ಎಲ್ಲರಿಗೂ ಮನೆ ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ. ಕೈಗೆಟುಕುವ ಬೆಲೆಯ ಮನೆಗಳನ್ನು ಸಾರ್ವಜನಿಕರಿಗೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಇಂಥ ಮನೆಗಳ ಖರೀದಿಗೆಂದು ಪಡೆದ ಸಾಲದ ಮೇಲೆ ಈಗಾಗಲೇ ಇರುವ ಸಬ್ಸಿಡಿ, ತೆರಿಗೆ ವಿನಾಯ್ತಿ ಮತ್ತು ಇತರ ಸೌಲಭ್ಯಗಳು ಇನ್ನೊಂದು ವರ್ಷದವರೆಗೆ ಮುಂದುವರಿಯಲಿದೆ ಎಂದು ಅವರು ಮಧ್ಯಮ ವರ್ಗಕ್ಕೆ ಶುಭ ಸುದ್ದಿ ನೀಡಿದರು.
ಇದನ್ನೂಓದಿ: Budget 2021 | ಸರ್ಕಾರ ರೈತಪರವಾಗಿದೆ ಎಂದು ಅಂಕಿಅಂಶ ಮುಂದಿಟ್ಟ ನಿರ್ಮಲಾ ಸೀತಾರಾಮನ್
ರಾಷ್ಟ್ರೀಯ ದೂರು ಪ್ರಾಧಿಕಾರ ಆರಂಭ
ತೆರಿಗೆ ಪಾವತಿದಾರರು ಸರಿಯಾದ ಮಾಹಿತಿ ನೀಡಿಲ್ಲ ಎಂಬ ಸಂದರ್ಭದಲ್ಲಿ ಕೇವಲ 3 ವರ್ಷಗಳಲ್ಲಿ ತೆರಿಗೆ ಸಲ್ಲಿಕೆ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಮರುಪರಿಶೀಲನೆ ಮಾಡಬಹುದು. ₹ 50 ಲಕ್ಷಕ್ಕಿಂತಲೂ ಹೆಚ್ಚಿನ ಆದಾಯ ಮರೆಮಾಚಲಾಗಿದೆ ಎನ್ನಿಸಿದರೆ ಮಾತ್ರ, ಪ್ರಧಾನ ಕಾರ್ಯದರ್ಶಿಯ ಅನುಮತಿಯೊಂದಿಗೆ 10 ವರ್ಷದ ಅವಧಿಯಲ್ಲಿ ಮರುಪರಿಶೀಲನೆ ಮತ್ತು ಕ್ರಮಕ್ಕೆ ಅವಕಾಶವಿರುತ್ತದೆ. ಆದಾಯ ತೆರಿಗೆಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ರಾಷ್ಟ್ರೀಯ ದೂರು ಪ್ರಾಧಿಕಾರ ಆರಂಭಿಸುತ್ತೇವೆ. ಇದು ಫೇಸ್ಲೆಸ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಬಜೆಟ್ನಲ್ಲಿ ಅವರು ತಿಳಿಸಿದರು.
ತಮಿಳಿನ ಪ್ರಾಚೀನ ಕವಿ ತಿರುವಳ್ಳೂರ್ ಕವಿತೆ ಓದಿದ ಅವರು, ಭಾರತದಲ್ಲಿ ವಿಶ್ವದಲ್ಲೇ ಅತ್ಯಂತ ಕಡಿಮೆ ಕಾರ್ಪೊರೇಟ್ ಟ್ಯಾಕ್ಸ್ ಇದ್ದು, ನೇರ ತೆರಿಗೆಯಲ್ಲಿ ಸಾಕಷ್ಟು ಅಮೂಲಾಗ್ರ ಬದಲಾವಣೆ ಮಾಡಲಾಗುವುದು. 2022ರಲ್ಲಿ 12 ಲಕ್ಷ ಕೋಟಿ ರೂ. ಸಾಲ ಪಡೆಯುವ ಗುರಿ ಹೊಂದಲಾಗಿದ್ದು, ವಿತ್ತೀಯ ಕೊರತೆ ಜಿಡಿಪಿಯ ಶೇ.3ರಷ್ಟು ಇರಬೇಕಿತ್ತು. ಆದರೆ ಆ ಗುರಿಯನ್ನು ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ. ಆರ್ಥಿಕ ವರ್ಷ 26 ವೇಳೆಗೆ ಹಣಕಾಸು ಕೊರತೆ ಶೇ 4.5ಕ್ಕಿಂತ ಕಡಿಮೆಯಾಗಲಿದೆ ಎಂದರು.
Budget 2021 LIVE: ಬೆಂಗಳೂರು ಮೆಟ್ರೊ 2ಎ, 2ಬಿ ಯೋಜನೆಯಡಿ 58.19 ಕಿಮೀ ವಿಸ್ತರಣೆಗೆ ಅನುದಾನ ಘೋಷಣೆ