Budget 2021 | ಹಳೆಯ, ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕಲು ಹೊಸ ನೀತಿ ಘೋಷಿಸಿದ ನಿರ್ಮಲಾ ಸೀತಾರಾಮನ್
ಮಿತಿಮೀರುತ್ತಿರುವ ಮಾಲಿನ್ಯ ಮತ್ತು ಇಂಧನ ಬಳಕೆ ಕಡಿಮೆ ಮಾಡುವ ಸಲುವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸಲು, ಮೋಟಾರು ವಾಹನಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲು 2019ರ ಜುಲೈ 26ರಂದು ಸಾರಿಗೆ ಇಲಾಖೆ ಪ್ರಸ್ತಾಪ ಇಟ್ಟಿತ್ತು. ನಂತರ ಸ್ಕ್ರಾಪಿಂಗ್ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆಯೂ ಸಿಕ್ಕಿತ್ತು.
ದೆಹಲಿ: ಹಳೆಯದಾದ ಮತ್ತು ಮಾಲಿನ್ಯಕಾರಕ ವಾಹನಗಳ ಬಳಕೆ ತಡೆಯುವ ನಿಟ್ಟಿನಲ್ಲಿ ಇಂದು ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಹೊಸ ನೀತಿ ಘೋಷಿಸಿದ್ದು, ಇದನ್ನು ಮಾಲೀಕರು ಸ್ವಯಂಪ್ರೇರಿತರಾಗಿ ಅನುಷ್ಠಾನಕ್ಕೆ ತರಬೇಕಿದೆ.
ಈ ನೂತನ ಸ್ವಯಂಪ್ರೇರಿತ ಸ್ಕ್ರಾಪಿಂಗ್ ನಿಯಮದಂತೆ ಖಾಸಗಿ ವಾಹನಗಳನ್ನು 20 ವರ್ಷ ಹಳೆಯ ಖಾಸಗಿ ವಾಹನಗಳನ್ನು ಮತ್ತು 15ವರ್ಷಗಳ ಹಳೆಯ ವಾಣಿಜ್ಯ ಬಳಕೆ ವಾಹನಗಳನ್ನು ಸಂಪೂರ್ಣ ಪರಿಶೀಲನೆಗೆ ಒಡ್ಡಬೇಕು. ಅದರಲ್ಲಿ ಅವುಗಳ ಸಾಮರ್ಥ್ಯ ಕುಂದಿದ್ದು ಕಂಡುಬಂದರೆ ಸ್ವಯಂಪ್ರೇರಣೆಯಿಂದ ಮಾಲೀಕರು ಗುಜರಿಗೆ ಹಾಕಲೇಬೇಕಾಗುತ್ತದೆ. ವಾಹನಗಳ ಹೊಸ ಸ್ಕ್ರಾಪಿಂಗ್ ನೀತಿ ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸುತ್ತದೆ ಹಾಗೇ ದೇಶದ ಆಮದು ಶುಲ್ಕವನ್ನು ದೊಡ್ಡಮಟ್ಟದಲ್ಲಿ ಕಡಿತಗೊಳಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ವಲಯದಲ್ಲಿರುವ 15ವರ್ಷಗಳಿಗಿಂತ ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕುವ ನೀತಿಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು. 2022ರ ಏಪ್ರಿಲ್ 1ರಿಂದ ಅದು ಅಧಿಕೃತವಾಗಿ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಕಳೆದ ವಾರ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದರು.
ಮಿತಿಮೀರುತ್ತಿರುವ ಮಾಲಿನ್ಯ ಮತ್ತು ಇಂಧನ ಬಳಕೆ ಕಡಿಮೆ ಮಾಡುವ ಸಲುವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸಲು, ಮೋಟಾರು ವಾಹನಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲು 2019ರ ಜುಲೈ 26ರಂದು ಸಾರಿಗೆ ಇಲಾಖೆ ಪ್ರಸ್ತಾಪ ಇಟ್ಟಿತ್ತು. ನಂತರ ಸ್ಕ್ರಾಪಿಂಗ್ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆಯೂ ಸಿಕ್ಕಿತ್ತು.
Budget 2021 LIVE: ಬೆಂಗಳೂರು ಮೆಟ್ರೊ 2ಎ, 2ಬಿ ಯೋಜನೆಯಡಿ 58.19 ಕಿಮೀ ವಿಸ್ತರಣೆಗೆ ಅನುದಾನ ಘೋಷಣೆ