Budget 2021 | ಮತ್ತಷ್ಟು ದುಬಾರಿಯಾದ ಪೆಟ್ರೋಲ್, ಡೀಸೆಲ್ ಬೆಲೆ: ಕೃಷಿ ಮೂಲಸೌಕರ್ಯ ಸೆಸ್ ಮೂಲಕ ದರ ಏರಿಕೆ

| Updated By: ganapathi bhat

Updated on: Apr 06, 2022 | 8:25 PM

ಪೆಟ್ರೋಲ್ ದರ ಲೀಟರ್​ಗೆ 2.5 ರೂಪಾಯಿ ಏರಿಕೆಯಾಗಿದೆ. ಡೀಸೆಲ್ ದರ ಲೀಟರ್​ಗೆ 4 ರೂಪಾಯಿ ಏರಿಕೆಯಾಗಿದೆ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ಪೆಟ್ರೋಲ್, ಡೀಸೆಲ್ ದರ ಜಾರಿಯಾಗಲಿದೆ.

Budget 2021 | ಮತ್ತಷ್ಟು ದುಬಾರಿಯಾದ ಪೆಟ್ರೋಲ್, ಡೀಸೆಲ್ ಬೆಲೆ: ಕೃಷಿ ಮೂಲಸೌಕರ್ಯ ಸೆಸ್ ಮೂಲಕ ದರ ಏರಿಕೆ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ಪೆಟ್ರೋಲ್, ಡೀಸೆಲ್ ದರ ಜಾರಿಯಾಗಲಿದೆ. ಬಜೆಟ್ ಅಧಿವೇಶನದ ಬಳಿಕ ಜನಸಾಮಾನ್ಯರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯ ಬರೆ ಬಿದ್ದಂತಾಗಿದೆ. ಪೆಟ್ರೋಲ್ ದರ ಲೀಟರ್​ಗೆ 2.5 ರೂಪಾಯಿ ಏರಿಕೆಯಾಗಿದೆ. ಡೀಸೆಲ್ ದರ ಲೀಟರ್​ಗೆ 4 ರೂಪಾಯಿ ಏರಿಕೆಯಾಗಿದೆ. ಕೃಷಿ ಮೂಲಸೌಕರ್ಯ ಸೆಸ್ ಕಾರಣದಿಂದ ಇಂಧನ ದರ ಏರಿಕೆಯಾಗಿದೆ.

ಇಂಧನ ಹೊರತಾಗಿ, ಚಿನ್ನ, ಬೆಳ್ಳಿ, ಚಿನ್ನದ ಗಟ್ಟಿ ಮೇಲೆ ಕೂಡ ಶೇ 2.5ರಷ್ಟು ಕೃಷಿ ಸೆಸ್ ಹೇರಲಾಗಿದೆ. ಮದ್ಯದ ಮೇಲೆ ಶೇಕಡಾ 100ರಷ್ಟು ಕೃಷಿ ಸೆಸ್ ಹಾಕಲಾಗಿದೆ. ಕಚ್ಚಾ ಪಾಮ್‌ಆಯಿಲ್ ಮೇಲೆ ಶೇ 17.5ರಷ್ಟು ಕೃಷಿ ಸೆಸ್ ಹಾಗೂ ಸೋಯಾಬಿನ್ ಸೂರ್ಯಕಾಂತಿ ಎಣ್ಣೆ ಮೇಲೂ ಸೆಸ್ ಹಾಕಲಾಗಿದೆ. ಸೇಬು ಹಣ್ಣಿನ ಮೇಲೆ ಶೇಕಡಾ 35ರಷ್ಟು ಕೃಷಿ ಸೆಸ್. ಕಲ್ಲಿದ್ದಲು, ಲಿಗ್ನೈಟ್ ಮತ್ತು ಪೀಟ್‌ ಮೇಲೆ ಶೇ 1.5ರಷ್ಟು ಸೆಸ್. ಯೂರಿಯಾ ಸೇರಿ ಕೆಲ ರಸಗೊಬ್ಬರಗಳ ಮೇಲೂ ಸೆಸ್ ವಿಧಿಸಲಾಗಿದೆ.

ಬಟಾಣಿ ಮೇಲೆ ಶೇ 40ರಷ್ಟು, ಕಾಬುಲ್ ಕಡಲೆಯ ಮೇಲೆ ಶೇ 40ರಷ್ಟು, ಕಡಲೇ ಬೇಳೆ ಮೇಲೆ ಶೇ 50ರಷ್ಟು, ಬೇಳೆಕಾಳುಗಳ ಮೇಲೆ ಶೇ 20ರಷ್ಟು, ಹತ್ತಿಯ ಮೇಲೆ ಶೇ 5ರಷ್ಟು ಸೆಸ್ ವಿಧಿಸಲಾಗಿದೆ. ನಾಳೆಯಿಂದಲೇ ಕೃಷಿ ಮೂಲಸೌಕರ್ಯ ಸೆಸ್ ಜಾರಿಯಾಗಲಿದೆ.

ಪೆಟ್ರೋಲ್​ ಬಂಕ್​ಗಳಲ್ಲಿರಲಿ ಬೆಲೆ ವಿವರಿಸುವ ಫಲಕ
ಪೆಟ್ರೋಲ್​, ಡೀಸೆಲ್​ ಬೆಲೆ ಹೆಚ್ಚಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೂಪದ ಚರ್ಚೆಯೊಂದು ಶುರುವಾಗಿದೆ. ಒಮ್ಮೆ ಲೀಟರ್​ಗೆ 92.05 ಆದರೆ, ಅದರಲ್ಲಿ ಪೆಟ್ರೋಲ್ ಮೂಲ ಬೆಲೆ 30.50 ರೂ. ಕೇಂದ್ರ ಸರ್ಕಾರದ ತೆರಿಗೆ 16.50 ರೂ., ರಾಜ್ಯ ಸರ್ಕಾರದ ತೆರಿಗೆ 38.55 ರೂ. ಮತ್ತು ವಿತರಕರು ವಿಧಿಸುವ ಬೆಲೆ 6.50 ರೂ. ಇರುತ್ತದೆ. ಈ ಮಾಹಿತಿಯನ್ನು ಒಳಗೊಂಡ ಬೋರ್ಡ್​ನ್ನು ಪ್ರತಿ ಪೆಟ್ರೋಲ್​ ಪಂಪ್​ಗಳಲ್ಲೂ ಅಳವಡಿಸಬೇಕು. ಪೆಟ್ರೋಲ್​, ಡೀಸೆಲೆ ಬೆಲೆ ಏರಿಕೆ ಆಗುವುದು ಎಲ್ಲಿಂದ ಎಂದು ಆಗ, ಪ್ರತಿಯೊಬ್ಬ ನಾಗರಿಕನಿಗೂ ಅರ್ಥವಾಗುತ್ತದೆ ಎಂಬ ಬಗ್ಗೆ ಚರ್ಚೆ ಮಾಡಲಾಗುತ್ತಿದೆ.

Budget 2021 LIVE: ಆದಾಯ ತೆರಿಗೆ ನಿಯಮದಲ್ಲಿ ಬದಲಾವಣೆ ಇಲ್ಲ.. ಹಿರಿಯ ನಾಗರಿಕರಿಗೆ ಐಟಿ ರಿಟರ್ನ್​ ಸಲ್ಲಿಕೆ ವಿನಾಯ್ತಿ

Budget 2021: ಬಜೆಟ್​ ಮಂಡನೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಆರಂಭ

Budget 2021 LIVE: ಆದಾಯ ತೆರಿಗೆ ನಿಯಮದಲ್ಲಿ ಬದಲಾವಣೆ ಇಲ್ಲ.. ಹಿರಿಯ ನಾಗರಿಕರಿಗೆ ಐಟಿ ರಿಟರ್ನ್​ ಸಲ್ಲಿಕೆ ವಿನಾಯ್ತಿ

Published On - 1:41 pm, Mon, 1 February 21