Budget 2022: ಮುಕ್ತ ಮನಸಿನಿಂದ ಅರ್ಥಪೂರ್ಣ ಚರ್ಚೆ ನಡೆಸಿ; ಬಜೆಟ್​ ಅಧಿವೇಶನಕ್ಕೂ ಮುನ್ನ ಸಂಸದರಿಗೆ ಪ್ರಧಾನಿ ಮೋದಿ ಸಲಹೆ

| Updated By: Lakshmi Hegde

Updated on: Jan 31, 2022 | 12:07 PM

ಕೊವಿಡ್​ 19 ಮಧ್ಯೆಯೇ ಇಂದಿನಿಂದ ಬಜೆಟ್​ ಅಧಿವೇಶನ ಶುರುವಾಗಿದೆ. ಈಗಾಗಲೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೂ ಕೂಡ ಸದನಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇಂದು 2021-22ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಸ್ತುತ ಪಡಿಸಲಿರುವ ನಿರ್ಮಲಾ ಸೀತಾರಾಮನ್​, ನಾಳೆ (ಫೆ.1) 2022-23ನೇ ಸಾಲಿನ ಬಜೆಟ್​ ಮಂಡಿಸಲಿದ್ದಾರೆ.

Budget 2022: ಮುಕ್ತ ಮನಸಿನಿಂದ ಅರ್ಥಪೂರ್ಣ ಚರ್ಚೆ ನಡೆಸಿ; ಬಜೆಟ್​ ಅಧಿವೇಶನಕ್ಕೂ ಮುನ್ನ ಸಂಸದರಿಗೆ ಪ್ರಧಾನಿ ಮೋದಿ ಸಲಹೆ
ಪ್ರಧಾನಿ ಮೋದಿ
Follow us on

ಬಜೆಟ್​ ಅಧಿವೇಶನದಲ್ಲಿ (Budget Session 2022) ಮುಕ್ತ ಮನಸಿನಿಂದ ಮತ್ತು ಗುಣಮಟ್ಟದ ಚರ್ಚೆಗಳನ್ನು ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಲೋಕಸಭೆ ಹಾಗೂ ರಾಜ್ಯ ಸಭೆ ಸದಸ್ಯರಿಗೆ ಹೇಳಿದ್ದಾರೆ. ಇಂದಿನಿಂದ ಸಂಸತ್ತಿನ ಬಜೆಟ್​ ಅಧಿವೇಶನ ಶುರುವಾಗಲಿದ್ದು, ಅದಕ್ಕೂ ಪೂರ್ವ ಪ್ರಧಾನಿ ಮೋದಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಎಲ್ಲ ರಾಜಕೀಯ ಪಕ್ಷಗಳ, ಎಲ್ಲ ಸಂಸದರೂ ಮಕ್ತ ಮನಸಿನಿಂದ ಡಿಬೇಟ್​​ನಲ್ಲಿ ಪಾಲ್ಗೊಳ್ಳಿ.  ಆದರೆ ಮಾಡುವ ಚರ್ಚೆ ಮತ್ತು ಡಿಬೇಟ್​​ಗಳು ಅರ್ಥಪೂರ್ಣವಾಗಿರಲಿ. ಭಾರತವನ್ನು ಅಭಿವೃದ್ಧಿಯ ಹಾದಿಯಲ್ಲಿ ಇನ್ನಷ್ಟು ಮುನ್ನಡೆಸಲು ಪೂರಕವಾಗಿರಲಿ ಎಂದು ಹೇಳಿದರು.

ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಈ ಸೆಷನ್ಸ್​ಗೆ ಎಲ್ಲ ಸಂಸದರನ್ನೂ ನಾನು ಸ್ವಾಗತಿಸುತ್ತಿದ್ದೇನೆ. ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಹೇರಳ ಅವಕಾಶ ಇದೆ. ದೇಶದ ಆರ್ಥಿಕ ಬೆಳವಣಿಗೆ, ಯಶಸ್ವಿಯಾಗಿ ನಡೆಯುತ್ತಿರುವ ಕೊರೊನಾ ಲಸಿಕೆ ಅಭಿಯಾನಗಳ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಆತ್ಮವಿಶ್ವಾಸ ಹುಟ್ಟಿಸಲು ಈ ಅಧಿವೇಶ ಸಹಾಯಕವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು  ಕೆಲವೇ ದಿನಗಳಲ್ಲಿ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳು ಬಜೆಟ್​ ಅಧಿವೇಶನದ ಮೇಲೆ ಪ್ರಭಾವ ಬೀರುತ್ತದೆ ಎಂಬುದು ನನಗೆ ಗೊತ್ತು.ಆದರೆ ಚುನಾವಣೆಗಳು ತುಂಬ ನಡೆಯುತ್ತವೆ. ಆದರೆ ಬಜೆಟ್ ಅಧಿವೇಶನವೆಂಬುದು ವರ್ಷದಲ್ಲಿ ಒಂದು ಅವಧಿಗೆ ನಡೆಯುತ್ತದೆ ಮತ್ತು  ಇಡೀ ವರ್ಷಕ್ಕೆ ಒಂದು ನೀಲನಕ್ಷೆಯನ್ನು ತಯಾರಿಸಿಕೊಡುತ್ತದೆ. ಹಾಗಾಗಿ ಈ ಅಧಿವೇಶವನ್ನು ಯಾವ ಕಾರಣಕ್ಕೂ ವ್ಯರ್ಥ ಮಾಡದೆ, ಫಲಕಾರಿಯನ್ನಾಗಿ ಮಾಡಬೇಕು. ದೇಶದ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.  ಇದೇ ವೇಳೆ, ಕೊವಿಡ್ 19 ಏರಿಕೆಯಾಗುತ್ತಿರುವುದರ ಬಗ್ಗೆ ಮಾತನಾಡಿದ ಅವರು, ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದೂ ಸಲಹೆ ನೀಡಿದರು.

ಕೊವಿಡ್​ 19 ಮಧ್ಯೆಯೇ ಇಂದಿನಿಂದ ಬಜೆಟ್​ ಅಧಿವೇಶನ ಶುರುವಾಗಿದೆ. ಈಗಾಗಲೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೂ ಕೂಡ ಸದನಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇಂದು 2021-22ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಸ್ತುತ ಪಡಿಸಲಿರುವ ನಿರ್ಮಲಾ ಸೀತಾರಾಮನ್​, ನಾಳೆ (ಫೆ.1) 2022-23ನೇ ಸಾಲಿನ ಬಜೆಟ್​ ಮಂಡಿಸಲಿದ್ದಾರೆ. ಫೆ.11ರವರೆಗೆ  ಮೊದಲ ಅವಧಿಯ ಬಜೆಟ್​ ಅಧಿವೇಶನ ನಡೆಯಲಿದ್ದು, ಎರಡನೇ ಅವಧಿ ಅಧಿವೇಶನ ಮತ್ತೆ ಮಾರ್ಚ್​ 14ರಿಂದ ಪ್ರಾರಂಭಗೊಳ್ಳಲಿದೆ. ಕೊರೊನಾ ಇರುವ ಕಾರಣಕ್ಕೆ ರಾಜ್ಯಸಭೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಕಲಾಪ ನಡೆಯಲಿದ್ದು, ಲೋಕಸಭೆಯಲ್ಲಿ ಸಂಜೆ 4ರಿಂದ ರಾತ್ರಿ 9ರವರೆಗೆ ಕಲಾಪ ಇರಲಿದೆ.

ಇದನ್ನೂ ಓದಿ:  Union Budget 2022: ಇಂದಿನಿಂದ ಬಜೆಟ್​ ಅಧಿವೇಶನ ಪ್ರಾರಂಭ; ಆರ್ಥಿಕ ಸಮೀಕ್ಷೆ ಮಂಡಿಸಲಿರುವ ನಿರ್ಮಲಾ ಸೀತಾರಾಮನ್​