AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರಿಗಳು ದತ್ತಾಂಶ ಆಧರಿತ ಆಡಳಿತ ಮತ್ತು ಕೃತಕ ಬುದ್ಧಿಮತ್ತೆ ಕಲಿಯಬೇಕು: ಪ್ರಧಾನಿ ಮೋದಿ

ಭಾರತದ ವಿವಿಧ ಜಿಲ್ಲೆಗಳಲ್ಲಿ ನಿಯೋಜನೆ ಆಗಲಿರುವ ಹೊಸ ನಾಗರಿಕ ಸೇವಕರಲ್ಲಿ ಮೋದಿ, ನೀವು ಯಾಕೆ ನಾಗರಿಕ ಸೇವೆಗೆ ಸೇರಿದ್ದು ಮತ್ತು ಏನನ್ನು ಸಾಧಿಸಲು ಆಶಿಸಿದ್ದೀರಿ ಎಂಬುದರ ಕುರಿತು ಸುದೀರ್ಘ ಪ್ರಬಂಧವನ್ನು ಬರೆಯಲು ಹೇಳಿದರು.

ಅಧಿಕಾರಿಗಳು  ದತ್ತಾಂಶ ಆಧರಿತ ಆಡಳಿತ ಮತ್ತು ಕೃತಕ ಬುದ್ಧಿಮತ್ತೆ ಕಲಿಯಬೇಕು: ಪ್ರಧಾನಿ ಮೋದಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Mar 17, 2022 | 7:04 PM

Share

ಉತ್ತರಾಖಂಡದ ಮಸ್ಸೂರಿಯಲ್ಲಿರುವ (Mussoorie) ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನ ( Lal Bahadur Shastri National Academy of Administration )ಕಾಮನ್ ಫೌಂಡೇಶನ್ ಕೋರ್ಸ್‌ನ ಸಮಾರೋಪ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧಿಕಾರಿಗಳು ದತ್ತಾಂಶ ಆಧರಿತ ಆಡಳಿತ ಮತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ಕಲಿಯಬೇಕು ಎಂದಿದ್ದಾರೆ. “ನಾನು ಅಕಾಡೆಮಿಯ ನಿರ್ದೇಶಕರನ್ನು ವಿನಂತಿಸುತ್ತೇನೆ. ನಾಗರಿಕ ಸೇವಕರು ಕಲಿಯಬಹುದಾದ ಕೃತಕ ಬುದ್ಧಿಮತ್ತೆಯ ಮೇಲೆ ಲ್ಯಾಬ್ ಇರಲಿ. ಅಲ್ಲದೆ, ಭವಿಷ್ಯದಲ್ಲಿ ದತ್ತಾಂಶ ದೊಡ್ಡ ಶಕ್ತಿಯಾಗಲಿದೆ. ಇದು ಈಗಾಗಲೇ ಆಗಿದೆ. ನಾವು ಡೇಟಾ ಆಧರಿತ ಆಡಳಿತದ ಬಗ್ಗೆ ಎಲ್ಲವನ್ನೂ ಕಲಿಯಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ನಾವು ಎಲ್ಲಿಗೆ ಹೋದರೂ ಅವುಗಳನ್ನು ಕಾರ್ಯಗತಗೊಳಿಸಬೇಕು ”ಎಂದು ಮೋದಿ ಹೇಳಿದ್ದಾರೆ. ಸ್ವಾತಂತ್ರ್ಯದ 75 ನೇ ವರ್ಷದ ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಪ್ರಸ್ತುತ ಬ್ಯಾಚ್ ಸೇರ್ಪಡೆಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಮೋದಿ ಹೇಳಿದರು. ಭಾರತವು ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವಾಗ ನಮ್ಮಲ್ಲಿ ಅನೇಕರು ಇರುವುದಿಲ್ಲ. ಆದರೆ ನೀವೆಲ್ಲರೂ ಇರುತ್ತೀರಿ. ಹಾಗಾಗಿ ಮುಂದಿನ 25 ವರ್ಷಗಳಲ್ಲಿ ದೇಶವು ಯಾವುದೇ ಅಭಿವೃದ್ಧಿ ಸಾಧಿಸಿದರೂ ಅದರಲ್ಲಿ ನಿಮ್ಮ ಬ್ಯಾಚ್ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದರು.

ಭಾರತದ ವಿವಿಧ ಜಿಲ್ಲೆಗಳಲ್ಲಿ ನಿಯೋಜನೆ ಆಗಲಿರುವ ಹೊಸ ನಾಗರಿಕ ಸೇವಕರಲ್ಲಿ ಮೋದಿ, ನೀವು ಯಾಕೆ ನಾಗರಿಕ ಸೇವೆಗೆ ಸೇರಿದ್ದು ಮತ್ತು ಏನನ್ನು ಸಾಧಿಸಲು ಆಶಿಸಿದ್ದೀರಿ ಎಂಬುದರ ಕುರಿತು ಸುದೀರ್ಘ ಪ್ರಬಂಧವನ್ನು ಬರೆಯಲು ಹೇಳಿದರು. “ಆ ದೀರ್ಘ ಪ್ರಬಂಧಗಳು ಕ್ಲೌಡ್​ನಲ್ಲಿ ಸೇವ್ ಮಾಡಿಡಿ. 25 ವರ್ಷಗಳ ನಂತರ ನೀವು ಈ ಸ್ಥಳಕ್ಕೆ ಹಿಂತಿರುಗಿದಾಗ, ನೀವು ನಿಮ್ಮ ಕನಸಿನ ಹಾದಿಯಲ್ಲಿದ್ದೀರಾ ಅಥವಾ ನೀವು ದಿಕ್ಕು ತಪ್ಪಿಸಿದ್ದೀರಾ ಎಂಬುದನ್ನು ಪರಿಶೀಲಿಸಲು ಈ ಪ್ರಬಂಧಗಳು ಒಂದು ಮಾರ್ಗವಾಗಲಿ ಎಂದು ಅವರು ಹೇಳಿದರು.

ಸೇವಾ ಮನೋಭಾವ ಕಡಿಮೆಯಾದರೆ ಮತ್ತು ಆಡಳಿತದ ಮನೋಭಾವನೆ ಬಂದರೆ ವ್ಯವಸ್ಥೆ ಮತ್ತು ವ್ಯಕ್ತಿ ಎರಡೂ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಪ್ರಧಾನಿ ಹೇಳಿದರು. “ಅದು ವ್ಯವಸ್ಥೆಯಾಗಿರಲಿ ಅಥವಾ ವ್ಯಕ್ತಿಯಾಗಿರಲಿ, ನಷ್ಟವು ಅನಿವಾರ್ಯವಾಗಿದೆ” ಎಂದು ಅವರು ಹೇಳಿದರು.

ಯುವ ನಾಗರಿಕ ಸೇವಕರು ತಮ್ಮನ್ನು ತಾವು ನಿರಂತರವಾಗಿ ಸವಾಲುಗಳನ್ನೆದುರಿಸಿ, ಆರಾಮ ವಲಯಗಳಿಗೆ ಎಂದಿಗೂ ಪ್ರವೇಶಿಸಬೇಡಿ ಎಂದು ಪ್ರಧಾನಮಂತ್ರಿ ಹೇಳಿದರು.  ನಾಗರಿಕ ಸೇವಕರು ಕಡತಗಳಲ್ಲಿ ಬರುವ ಸಂಖ್ಯೆಗಳು ಕೇವಲ ಸಂಖ್ಯೆಗಳಲ್ಲ ಎಂಬುದನ್ನು ನೆನಪಿನಲ್ಲಿಡಬೇಕು ಎಂದರು. “ಆ ಪ್ರತಿಯೊಂದು ಸಂಖ್ಯೆಗಳು ಕನಸುಗಳು ಮತ್ತು ಆಕಾಂಕ್ಷೆಗಳು ಮತ್ತು ಸವಾಲುಗಳನ್ನು ಹೊಂದಿರುವ ಜೀವನ. ಆದ್ದರಿಂದ ನೀವು ಪ್ರತಿಯೊಂದು ಜೀವನಕ್ಕಾಗಿ ಕೆಲಸ ಮಾಡಬೇಕು, ”ಎಂದು ಅವರು ಹೇಳಿದರು.

ಬಡವರಿಗೆ ಪಕ್ಕಾ ಮನೆಗಳನ್ನು ಒದಗಿಸುವುದು ಮತ್ತು ವಿವಿಧ ಯೋಜನೆಗಳ ಮೂಲಕ ಅನಿಲ ಸಂಪರ್ಕ, ವಿದ್ಯುತ್ ಮತ್ತು ಇತರರನ್ನು ಒದಗಿಸುವಂತಹ ಸವಾಲಿನ ಕಾರ್ಯಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ ಎಂದು ಮೋದಿ ಹೇಳಿದರು. “ನೀವು ಎಲ್ಲಿಗೆ ಹೋದರೂ, ಈ ರೀತಿಯ ಕೆಲವು ಸವಾಲಿನ ಸಮಸ್ಯೆಗಳನ್ನು ತೆಗೆದುಕೊಳ್ಳಿ ಮತ್ತು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ. ಆಗ ಜಿಲ್ಲೆಯ ಜನತೆ ನಿಮ್ಮನ್ನು ಸದಾ ಸ್ಮರಿಸುತ್ತಾರೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ:  ನಿಮ್ಮಲ್ಲಿ ಯಾರಾದರೂ ಲಂಚ ಕೇಳಿದರೆ ಇಲ್ಲ ಎಂದು ಹೇಳಬೇಡಿ, ಸಂಭಾಷಣೆ ರೆಕಾರ್ಡ್ ಮಾಡಿ  ಕಳಿಸಿ: ಕೇಜ್ರಿವಾಲ್

ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ