ಹತ್ತು ನೇಣು ಹಗ್ಗಗಳಿಗೆ ಆರ್ಡರ್! ನಿರ್ಭಯಾ ಪಾತಕಿಗಳಿಗೆ ಶುರುವಾಗಿದೆ ಪ್ರಾಣ ಭಯ
ದೆಹಲಿ: ಕಳೆದ ವಾರ ಹೈದರಾಬಾದಿನಲ್ಲಿ ದಿಶಾ ರೇಪ್ ಅಂಡ್ ಮರ್ಡರ್ ಹತ್ಯೆ ಪ್ರಕರಣದಲ್ಲಿ ನಾಲ್ವವರು ಆರೋಪಿಗಳಿಗೆ ಗಲ್ಲು ಶಿಕ್ಷೆಗಿಂತಲೂ ಭೀಕರವಾದ ಶಿಕ್ಷೆಯಾಗುತ್ತಿದ್ದಂತೆ ಮೊದಲು ಸಂತಸಗೊಂಡಿದ್ದು ನಿರ್ಭಯಾ ಹೆತ್ತವರು. ತಮ್ಮ ಮಗಳು ನಿರ್ದಯವಾಗಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಅಸುನೀಗಿದ್ದರೂ ಅದಕ್ಕೆ ಕಾರಣೀಭೂತರಾದ ಭೂತಗಳಿಗೆ ಇದುವರೆಗೂ ಯಾವುದೇ ಶಿಕ್ಷೆಯಾಗಿರಲಿಲ್ಲ. ಆದ್ರೆ ಹೈದರಾಬಾದ್ ಎನ್ಕೌಂಟರ್ ಘಟನೆ ನಡೆಯುತ್ತಿದ್ದಂತೆ ಮತ್ತು ನಿರ್ಭಯಾ ಕೇಸ್ ಅಪರಾಧಿ ವಿನಯಾ ಶರ್ಮಾ ತಾನು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ವಾಪಸ್ ಪಡೆಯುತ್ತಿದ್ದಂತೆ ಇನ್ನಾದರೂ ದುರುಳರಿಗೆ ಶಿಕ್ಷೆಯಾದೀತು ಎಂದು ನಿರ್ಭಯಾ ಹೆತ್ತವರು […]
ದೆಹಲಿ: ಕಳೆದ ವಾರ ಹೈದರಾಬಾದಿನಲ್ಲಿ ದಿಶಾ ರೇಪ್ ಅಂಡ್ ಮರ್ಡರ್ ಹತ್ಯೆ ಪ್ರಕರಣದಲ್ಲಿ ನಾಲ್ವವರು ಆರೋಪಿಗಳಿಗೆ ಗಲ್ಲು ಶಿಕ್ಷೆಗಿಂತಲೂ ಭೀಕರವಾದ ಶಿಕ್ಷೆಯಾಗುತ್ತಿದ್ದಂತೆ ಮೊದಲು ಸಂತಸಗೊಂಡಿದ್ದು ನಿರ್ಭಯಾ ಹೆತ್ತವರು. ತಮ್ಮ ಮಗಳು ನಿರ್ದಯವಾಗಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಅಸುನೀಗಿದ್ದರೂ ಅದಕ್ಕೆ ಕಾರಣೀಭೂತರಾದ ಭೂತಗಳಿಗೆ ಇದುವರೆಗೂ ಯಾವುದೇ ಶಿಕ್ಷೆಯಾಗಿರಲಿಲ್ಲ.
ಆದ್ರೆ ಹೈದರಾಬಾದ್ ಎನ್ಕೌಂಟರ್ ಘಟನೆ ನಡೆಯುತ್ತಿದ್ದಂತೆ ಮತ್ತು ನಿರ್ಭಯಾ ಕೇಸ್ ಅಪರಾಧಿ ವಿನಯಾ ಶರ್ಮಾ ತಾನು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ವಾಪಸ್ ಪಡೆಯುತ್ತಿದ್ದಂತೆ ಇನ್ನಾದರೂ ದುರುಳರಿಗೆ ಶಿಕ್ಷೆಯಾದೀತು ಎಂದು ನಿರ್ಭಯಾ ಹೆತ್ತವರು ಸಮಾಧಾನದ ನಿಟ್ಟುಸಿರುಬಿಟ್ಟಿದ್ದರು. ಅದಕ್ಕೆ ತಕ್ಕತೆ ಇದೀಗ ಹತ್ತು ನೇಣಿಗೇರಿಸುವ ಹಗ್ಗಗಳನ್ನು ಸಿದ್ದವಾಗಿಟ್ಟಕೊಳ್ಳಿ ಎಂಬ ಸೂಚನೆ ಬಿಹಾರದ ಬಕ್ಸರ್ ಜಿಲ್ಲೆಯ ಜೈಲಿಗೆ ರವಾನೆಯಾಗಿದೆ.
ಈ ವಾರಾಂತ್ಯದೊಳಗೆ ನೇಣು ಹಗ್ಗಗಳನ್ನ ರೆಡಿಯಾಗಿಟ್ಟುಕೊಳ್ಳಲು ಸೂಚಿಸಲಾಗಿದೆ. ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಲು ಈ ಹಗ್ಗಗಳನ್ನು ರೆಡಿ ಮಾಡುತ್ತಿರಬಹುದು ಎಂದು ತಿಳಿದುಬಂದಿದೆ. ನೇಣು ಕುಣಿಕೆಗಳನ್ನ ಬಿಹಾರದಿಂದ ದೆಹಲಿಗೆ ಕಳಿಸುವಂತೆ ಸೂಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
1930ರಿಂದಲೂ ಬಿಹಾರದ ಬಕ್ಸರ್ ಜಿಲ್ಲೆಯ ಜೈಲಿನಲ್ಲಿರುವ ಕೈದಿಗಳು ನೇಣು ಹಗ್ಗಗಳನ್ನ ತಯಾರಿಸುತ್ತಿದ್ದಾರೆ. ಗಂಗಾ ನದಿಯ ತಟದಲ್ಲಿರುವ ಈ ಜೈಲು ನೇಣು ಹಗ್ಗಗಳನ್ನ ತಯಾರಿಸುವುದಕ್ಕೆ ಖ್ಯಾತಿ ಪಡೆದಿದೆ. ಮನಿಲಾ ಹಗ್ಗದಿಂದ ಈ ವಿಶೇಷ ಹಗ್ಗಗಳನ್ನ ತಯಾರಿಸಲಾಗುತ್ತದೆ. ಸಂಸತ್ ಭವನದ ಮೇಲಿನ ದಾಳಿಯ ರೂವಾರಿ ಅಫಜಲ್ ಗುರುಗೆ ನೇಣು ಹಾಕಿದ್ದು ಇಲ್ಲಿನ ವಿಶೇಷ ನೇಣು ಹಗ್ಗದಿಂದಲೇ ಎಂಬುದು ಗಮನಾರ್ಹ.
ಆಗ ಜೈಲಿನಲ್ಲಿದ್ದ ಕೈದಿಗಳು ಇನ್ನೂ ಇದೇ ಜೈಲಿದ್ದಾರೆ. ಆ ಕೈದಿಗಳು ನೇಣು ಹಗ್ಗ ತಯಾರಿಸುವದರಲ್ಲಿ ಪರಿಣತಿ ಸಾಧಿಸಿದ್ದಾರೆ. ಮೂರ್ನಾಲ್ಕು ಕೈದಿಗಳು ಸೇರಿ, ಒಂದು ವಾರದಲ್ಲಿ ಈ ಕುಣಿಕೆ ಹಗ್ಗಗಳನ್ನು ತಯಾರಿಸಬಲ್ಲರು. ಅಫಜಲ್ ಗುರುಗೆ ಹಾಕಿದ ನೇಣು ಹಗ್ಗಕ್ಕೆ ಸುಮಾರು 2 ಸಾವಿರ ರೂಪಾಯಿ ತಗುಲಿತ್ತು. ಆದರೀಗ ಬೆಲೆಗಳು ಹೆಚ್ಚಾಗಿದ್ದು ತಯಾರಿಕಾ ವೆಚ್ಚ ಈ ಬಾರಿ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಗಲ್ಲುಗಂಬ ಏರುವ ಅಪರಾಧಿಯ ಎತ್ತರಕ್ಕಿಂತ 1.6 ಪಟ್ಟು ಹೆಚ್ಚು ಉದ್ದದ ಹಗ್ಗವನ್ನು ಬಳಸಬೇಕಾಗುತ್ತದೆ.
Published On - 2:18 pm, Mon, 9 December 19