Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಲ್ಕ ಹೆಚ್ಚಳ: ಬೀದಿಗಿಳಿದ ವಿದ್ಯಾರ್ಥಿಗಳು, ಫಲ ಕೊಡುತ್ತಾ ಕೇಂದ್ರದ ಮಾತುಕತೆ ತಂತ್ರ

ದೆಹಲಿ: ಬೀದಿಗಳಲ್ಲಿ ಜೆಎನ್​ಯು ವಿದ್ಯಾರ್ಥಿಗಳು ರಣಕಹಳೆ ಮೊಳಗಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಜೆಎನ್​ಯು ಸ್ಟೂಡೆಂಟ್ಸ್ ತಮ್ಮ ಪ್ರೊಟೆಸ್ಟ್ ಮುಂದುವರಿಸಿದ್ದಾರೆ. ಈ ಮಧ್ಯೆ ಮುಂದಿನ ಪರಿಣಾಮಗಳ ಕುರಿತು ಎಚ್ಚೆತ್ತಿರುವ ಕೇಂದ್ರ ಈ ವಿಚಾರದಲ್ಲಿ ಮೃದು ಧೋರಣೆ ತಳೆದು ಮಾತುಕತೆಗೆ ಮುಂದಾಗಿದೆ. ದೆಹಲಿಯಲ್ಲಿ ವಿದ್ಯಾರ್ಥಿ ಸಮೂಹ ಕೇಂದ್ರದ ವಿರುದ್ಧ ಪ್ರತಿಭಟನೆ ಮುಂದುವರಿಸಿದೆ. ನಿಯಂತ್ರಣಕ್ಕೆ ಪೊಲೀಸ್ ಪಡೆಯ ಹರಸಾಹಸ ಪಡುತ್ತಿದ್ದಾರೆ. ಈ ಹೋರಾಟದ ಕಿಚ್ಚು ಹಬ್ಬಲು ಕಾರಣವೇ, ಹಾಸ್ಟೆಲ್‌ ಶುಲ್ಕ ಹಾಗೂ ಅಡ್ಮಿಷನ್ ಫೀಸ್ ಹೆಚ್ಚಳ ಮಾಡಿರೋದು. […]

ಶುಲ್ಕ ಹೆಚ್ಚಳ: ಬೀದಿಗಿಳಿದ ವಿದ್ಯಾರ್ಥಿಗಳು, ಫಲ ಕೊಡುತ್ತಾ ಕೇಂದ್ರದ ಮಾತುಕತೆ ತಂತ್ರ
Follow us
ಸಾಧು ಶ್ರೀನಾಥ್​
|

Updated on:Dec 10, 2019 | 11:31 AM

ದೆಹಲಿ: ಬೀದಿಗಳಲ್ಲಿ ಜೆಎನ್​ಯು ವಿದ್ಯಾರ್ಥಿಗಳು ರಣಕಹಳೆ ಮೊಳಗಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಜೆಎನ್​ಯು ಸ್ಟೂಡೆಂಟ್ಸ್ ತಮ್ಮ ಪ್ರೊಟೆಸ್ಟ್ ಮುಂದುವರಿಸಿದ್ದಾರೆ. ಈ ಮಧ್ಯೆ ಮುಂದಿನ ಪರಿಣಾಮಗಳ ಕುರಿತು ಎಚ್ಚೆತ್ತಿರುವ ಕೇಂದ್ರ ಈ ವಿಚಾರದಲ್ಲಿ ಮೃದು ಧೋರಣೆ ತಳೆದು ಮಾತುಕತೆಗೆ ಮುಂದಾಗಿದೆ.

ದೆಹಲಿಯಲ್ಲಿ ವಿದ್ಯಾರ್ಥಿ ಸಮೂಹ ಕೇಂದ್ರದ ವಿರುದ್ಧ ಪ್ರತಿಭಟನೆ ಮುಂದುವರಿಸಿದೆ. ನಿಯಂತ್ರಣಕ್ಕೆ ಪೊಲೀಸ್ ಪಡೆಯ ಹರಸಾಹಸ ಪಡುತ್ತಿದ್ದಾರೆ. ಈ ಹೋರಾಟದ ಕಿಚ್ಚು ಹಬ್ಬಲು ಕಾರಣವೇ, ಹಾಸ್ಟೆಲ್‌ ಶುಲ್ಕ ಹಾಗೂ ಅಡ್ಮಿಷನ್ ಫೀಸ್ ಹೆಚ್ಚಳ ಮಾಡಿರೋದು.

ಇದರ ವಿರುದ್ಧ ಜೆಎನ್​ಯು ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಕೇಂದ್ರದ ನಿರ್ಧಾರ ವಿರೋಧಿಸಿ ಸುಮಾರು 1 ತಿಂಗಳಿಂದಲೂ ಪ್ರೊಟೆಸ್ಟ್ ಮಾಡ್ತಿದ್ದಾರೆ. ಆದ್ರೆ ಈ ಹೋರಾಟಕ್ಕೆ ಫುಲ್​ಸ್ಟಾಪ್ ಇಡಲು ಮುಂದಾಗಿರುವ ಕೇಂದ್ರ ಸರ್ಕಾರ ಅಂತೂ, ಇಂತೂ ದಿಟ್ಟ ನಿರ್ಧಾರವೊಂದನ್ನ ತೆಗೆದುಕೊಂಡಿದೆ.

ವಿದ್ಯಾರ್ಥಿ ಸಂಘಟನೆಗಳ ಜೊತೆ ಮಾತುಕತೆಗೆ ಕೇಂದ್ರದ ನಿರ್ಧಾರ..! ಜೆಎನ್​ಯು ಸ್ಟೂಡೆಂಟ್ಸ್ ಪ್ರತಿದಿನ ದೆಹಲಿಯಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಸಂಸತ್ ಚಲೋದಿಂದ ಹಿಡಿದು ರಾಷ್ಟ್ರಪತಿ ಭವನ ಚಲೋವರೆಗೂ ಉಗ್ರ ಹೋರಾಟವೇ ನಡೆಯುತ್ತಿದೆ. ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಮುಂದಾದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.

ಅಲ್ಲದೆ ‌ಜೆಎನ್​ಯು ಪ್ರವೇಶಕ್ಕೆ ವಿಧ್ಯಾರ್ಥಿಗಳಿಗೆ, ಪ್ರಾದ್ಯಾಪಕರಿಗೆ ಪೊಲೀಸ್ರು ಅವಕಾಶ ಕೊಡ್ತಿಲ್ಲ ಅನ್ನೋ ಆರೋಪವೂ ಕೇಳಿಬಂದಿದೆ. ಈ ಮಧ್ಯೆ ಪ್ರತಿಭಟನೆ ತಣ್ಣಗಾಗಿಸಲು ಕೇಂದ್ರ ಮುಂದಾಗಿದ್ದು, ವಿದ್ಯಾರ್ಥಿಗಳ ಜೊತೆ ಮಾತುಕತೆಗೆ ನಿರ್ಧರಿಸಿದೆ.

ಮೊದ್ಲೇ ಮಾಲಿನ್ಯದ ಪರಿಣಾಮ ಬೆಚ್ಚಿಬಿದ್ದಿರುವ ರಾಷ್ಟ್ರ ರಾಜಧಾನಿಯ ನಿವಾಸಿಗಳಿಗೆ ವಿದ್ಯಾರ್ಥಿಗಳ ಪ್ರೊಟೆಸ್ಟ್ ಆತಂಕ ತಂದಿತ್ತು. ದಿನಬೆಳಗಾದ್ರೆ ಪ್ರತಿಭಟನೆಗಳನ್ನ ಕಂಡು ಜನ ಬೇಸತ್ತಿದ್ರು. ಇದೀಗ ಇದಕ್ಕೆಲ್ಲಾ ಇತಿಶ್ರೀ ಹಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆದ್ರೆ, ಮಾತುಕತೆ ಯಾವಾಗ ನಡೆಯುತ್ತೆ ಅನ್ನೋದನ್ನ ರಿವೀಲ್ ಮಾಡಿಲ್ಲ.

Published On - 7:25 am, Tue, 10 December 19