Video: ಬೈಜುಸ್ನ ಹಿರಿಯ ಅಧಿಕಾರಿಯೊಂದಿಗೆ ಜಗಳವಾಡುತ್ತಿರುವ ಮಹಿಳಾ ಉದ್ಯೋಗಿಯ ವಿಡಿಯೋ ವೈರಲ್
ಬೈಜುಸ್(BYJU's)ನ ಇಬ್ಬರು ಉದ್ಯೋಗಿಗಳು ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಬೈಜುಸ್(BYJU’s)ನ ಇಬ್ಬರು ಉದ್ಯೋಗಿಗಳು ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಮೆರಿಕದ ಎರಡು ನ್ಯಾಯಾಲಯಗಳಲ್ಲಿ ಪ್ರಕರಣ ಎದುರಿಸುತ್ತಿರುವ ಹಾಗೂ ಸಾಲದ ಸುಳಿಗೆ ಸಿಲುಕಿರುವ ಬೆಂಗಳೂರು ಮೂಲದ ಬೈಜುಸ್ ಸಂಸ್ಥೆಯು ಇದೀಗ ಉದ್ಯೋಗ ಕಡಿತಕ್ಕೆ ಆಲೋಚಿಸುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿರುವ ಹೊತ್ತಲ್ಲೇ ಈ ವಿಡಿಯೋ ವೈರಲ್ ಆಗಿರುವುದು ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ಈ ಮೊದಲು ಒಂದೆರಡು ಬಾರಿ ಬೈಜುಸ್ ಸಂಸ್ಥೆ ತನ್ನ ಕೆಲ ಉದ್ಯೋಗಿಗಳನ್ನು ವಜಾ ಗೊಳಿಸಿತ್ತು. ಜನವರಿ ತಿಂಗಳಲ್ಲೂ 1,000 ಮಂದಿಯನ್ನು ಬೈಜುಸ್ ಆಡಳಿತ ಕೆಲಸದಿಂದ ತೆಗೆದು ಹಾಕಿತ್ತು. ಕೆಲಸದ ಸಮಯದಲ್ಲಿ ಹೆಚ್ಚು ಒತ್ತಡ ನೀಡುವುದಕ್ಕಾಗಿ ಉದ್ಯೋಗಿ ಹಾಗೂ ಬೈಜುಸ್ ಸಂಸ್ಥೆಯ ಅಧಿಕಾರಿಗಳ ಮಧ್ಯೆ ಜಗಳ ನಡೆದಂತೆ ತೋರುತ್ತದೆ.
ಮಹಿಳೆಯು ಇನ್ಸೆಂಟೀವ್ಸ್ ಬಗ್ಗೆ ಹಿರಿಯ ಅಧಿಕಾರಿಯ ಜತೆ ಮಾತನಾಡುವುದನ್ನು ಕಾಣಬಹುದು. ಕಂಪನಿಯ ಉದ್ಯೋಗಿಗಳು ಬೈಜುಸ್ನ ಕೆಲಸದ ಸಂಸ್ಕೃತಿ ಬಗ್ಗೆ ದೂರು ನೀಡಿದರೆ ಈಗ ಬಿಡುಗಡೆಯಾದ ವಿಡಿಯೋದಲ್ಲಿ ಮಹಿಳೆ ಇನ್ಸೆಂಟೀವ್ಸ್ ಮತ್ತು ಬೆಂಬಲದ ಕೊರತೆಯ ಬಗ್ಗೆ ದೂರುತ್ತಿರುವುದನ್ನು ಕಾಣಬಹುದು.
ಮತ್ತಷ್ಟು ಓದಿ: Byjus Layoffs: ಸಾಲದ ಸುಳಿ, ಕೋರ್ಟ್ ಕೇಸ್ಗೆ ಸಿಲುಕಿದ ಬೈಜುಸ್; ಉದ್ಯೋಗಿಗಳಿಗೆ ಮತ್ತೊಂದು ಸುತ್ತಿನ ಲೇ ಆಫ್ ಭೀತಿ
ಭಾರತೀಯ ಕ್ರಿಕೆಟ್ ಮಂಡಳಿಗೆ ಕೋಟಿಗಟ್ಟಲೆ ದೇಣಿಗೆ ನೀಡುವ ಬೈಜುಸ್ 12 ತಿಂಗಳ ಕಾಲ ಸೇವೆ ಸಲ್ಲಿಸಿದ ನಂತರ ಅಥವಾ ವಜಾಗೊಳಿಸಿದ ನಂತರ ಅವರಿಗೆ ಕೇವಲ 2 ಸಾವಿರ ರೂ ಗ್ರಾಚ್ಯುಟಿಯನ್ನು ನೀಡಿರುವುದು ತುಂಬಾ ಬೇಸರದ ವಿಚಾರ ಎಂದು ನೆಟ್ಟಿಗರು ಹೇಳಿದ್ದಾರೆ.
Kalesh b/w Employee and Byjus Companyy over giving lot’s of mental pressure during job (Unfortunately Girl is missing since then) pic.twitter.com/xzgIUbqjeq
— Ghar Ke Kalesh (@gharkekalesh) July 22, 2023
12 ತಿಂಗಳಿಂದ ನಮಗೆ ಪ್ರೋತ್ಸಾಹಧನ ಸಿಕ್ಕಿಲ್ಲ ಎಂದು ಮಹಿಳಾ ಉದ್ಯೋಗಿ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. 2021 ರ ಹಣಕಾಸು ವರ್ಷದಲ್ಲಿ, ಬೈಜಸ್ 4,500 ಕೋಟಿ ರೂಪಾಯಿಗಳ ದೊಡ್ಡ ನಷ್ಟವನ್ನು ಹೊಂದಿತ್ತು. ಈ ಅವಧಿಯಲ್ಲಿ ಕಂಪನಿಯು ಕೆಲವು ಉದ್ಯೋಗಿಗಳನ್ನು ವಜಾಗೊಳಿಸಿದೆ.
ವೀಡಿಯೊವನ್ನು ಸುಮಾರು ನಾಲ್ಕು ಲಕ್ಷ ಬಾರಿ ವೀಕ್ಷಿಸಲಾಗಿದೆ ಮತ್ತು 1000 ಕ್ಕೂ ಹೆಚ್ಚು ಬಳಕೆದಾರರು ಅದನ್ನು ರೀಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ