ಎನ್​ಎಚ್​ಅರ್​ಸಿ ತಂಡಕ್ಕೆ ಕರ್ತವ್ಯ ನಿರ್ವಹಿಸಲು ಅಡ್ಡಿ, ಹೈಕೋರ್ಟ್ ಆದೇಶ ಪಾಲಿಸದ ಪೊಲೀಸ್​ಗೆ ಕಲ್ಕತ್ತಾ ಹೈಕೋರ್ಟ್​ ನ್ಯಾಯಾಂಗ ನಿಂದನೆ ನೋಟೀಸ್

|

Updated on: Jul 02, 2021 | 8:15 PM

ಜೂನ್ 29, 2021ರಂದು ಸಮಿತಿ ಸದಸ್ಯರೊಬ್ಬರು ತಮ್ಮ ತಂಡದೊಂದಿಗೆ ಘಟನೆ ನಡೆಯಿತೆನ್ನಲಾದ ಜಾದವ್​ಪುರ ಸ್ಥಳಕ್ಕೆ ಹೋದಾಗ ಕೆಲವು ಗೂಂಡಾಗಳು ಅವರ ಮೇಲೆ ಹಲ್ಲೆ ನಡೆಸಿ ಅವರ ಕರ್ತ್ಯವ್ಯಕ್ಕೆ ಅಡ್ಡಿಪಡಿಸಿದ್ದರು.

ಎನ್​ಎಚ್​ಅರ್​ಸಿ ತಂಡಕ್ಕೆ ಕರ್ತವ್ಯ ನಿರ್ವಹಿಸಲು ಅಡ್ಡಿ, ಹೈಕೋರ್ಟ್ ಆದೇಶ ಪಾಲಿಸದ ಪೊಲೀಸ್​ಗೆ ಕಲ್ಕತ್ತಾ ಹೈಕೋರ್ಟ್​ ನ್ಯಾಯಾಂಗ ನಿಂದನೆ ನೋಟೀಸ್
ಕಲ್ಕತ್ತಾ ಹೈಕೋರ್ಟ್
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆ ಮುಗಿದ ಮೇಲೆ ಹಿಂಸೆ ನಡೆಯಿತೆನ್ನಲಾದ ಅರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಆಗಮಿಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ (ಎನ್​ಎಚ್​ಆರ್​ಸಿ) ತಂಡವನ್ನು ತಡೆದ ಘಟನೆಯನ್ನು ತಪ್ಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾರ್ಯಕಲಾಪ ಉಲ್ಲಂಘಿಸಿರುವ ಕ್ರಮವನ್ನು ಯಾಕೆ ತೆಗೆದುಕೊಳ್ಳಬಾರದು ಎಂದು ಕೇಳುವ ನೋಟೀಸೊಂದನ್ನು ದಕ್ಷಿಣ ಕೊಲ್ಕತ್ತಾದ ಉಪ ಪೊಲೀಸ್ ಕಮೀಷನರ್​ಗೆ ಕಲ್ಕತ್ತಾ ಹೈಕೋರ್ಟ್​ ಶುಕ್ರವಾರ ಜಾರಿಮಾಡಿದೆ.

ಜೂನ್ 29, 2021ರಂದು ಸಮಿತಿ ಸದಸ್ಯರೊಬ್ಬರು ತಮ್ಮ ತಂಡದೊಂದಿಗೆ ಘಟನೆ ನಡೆಯಿತೆನ್ನಲಾದ ಜಾದವ್​ಪುರ ಸ್ಥಳಕ್ಕೆ ಹೋದಾಗ ಕೆಲವು ಗೂಂಡಾಗಳು ಅವರ ಮೇಲೆ ಹಲ್ಲೆ ನಡೆಸಿ ಅವರ ಕರ್ತ್ಯವ್ಯಕ್ಕೆ ಅಡ್ಡಿಪಡಿಸಿದ್ದರು.

ನ್ಯಾಯಾಲಯಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಎನ್​ಎಚ್​ಆರ್​ಸಿ ತಂಡವು, ಜಿಲ್ಲಾ ಮ್ಯಾಜಿಸ್ಟ್ರೇಟ್​ ಮತ್ತು ಸ್ಥಳೀಯ ಪೊಲೀಸ್​ಗೆ ಸ್ಥಳಕ್ಕೆ ಸಾಕಷ್ಟು ಮೊದಲೇ ನೋಟೀಸ್​ ನೀಡಿದ್ದರೂ ತಮಗೆ ಪೊಲೀಸ್ ಭದ್ರತೆ ಒದಗಿಸಲಿಲ್ಲ ಎಂದು ಹೇಳಿದೆ.

ಇದು ಜೂನ್​ 18 ಅದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿರುವ 5-ಸದಸ್ಯರ ಪೀಠವು ಸಮಿತಿ ಸದಸ್ಯರಿಗೆ ಸಕಲ ರೀತಿಯ ಭದ್ರತೆ ಮತ್ತು ಬೆಂಬಲ ಒದಗಿಸಬೇಕೆಂದು ಆದೇಶಿಸಿದೆ.

ಕೊಲ್ಕತಾ ದಕ್ಷಿಣ ಉಪನಗರ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿರುವ ರಶೀದ್ ಮುನೀರ್ ಖಾನ್​ ಅವರಿಗೆ ಜೂನ್ 18ರಂದು ಈ ಕೋರ್ಟ್​ ನೀಡಿದ ಆದೇಶವನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕಾರ್ಯಕಲಾಪ ನಿಂದನೆ ಕ್ರಮ ಅವರು ವಿರುದ್ಧ ಯಾಕೆ ಜರುಗಿಸಬಾರದು ಅಂತ ಕೇಳುವ ಒಂದು ನೋಟೀಸ್ ಜಾರಿಯಾಗಲಿ,’ ಎಂದು ಪೀಠ ಹೇಳಿದೆ.

ಮುಖ್ಯ ನ್ಯಾಯಾಧಿಶ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿಗಳಾದ ಐಪಿ ಮುಖರ್ಜಿ, ಹರೀಷ್ ಟಂಡನ್, ಸೌಮೆನ್ ಸೇನ್ ಮತ್ತು ಸುಬ್ರತಾ ತಾಲುಕ್ದಾರ್ ಅವರನ್ನೊಳಗೊಂಡ ಪೀಠ ಆದೇಶವನ್ನು ಜಾರಿಮಾಡಿದೆ

ಜೂನ್ 18 ರಂದು ಹೈಕೋರ್ಟ್ ಜಾರಿ ಮಾಡಿದ ಆದೇಶದಲ್ಲಿ, ಎನ್ಎಚ್​ಆರ್​ಸಿ ತಂಡ ತನಿಖೆಗೆ ಆಗಮಿಸಿದಾಗ ಅವರಿಗೆ ಯಾವುದೇ ರೀತಿಯ ಅಡಚಣೆಯಾಗಬಾರದು ಮತ್ತು ಒಂದು ಪಕ್ಷ ಹಾಗಾದಲ್ಲಿ ಅದನ್ನು ನ್ಯಾಯಾಂಗ ನಿಂದನೆ ಕಾಯ್ದೆ ಅಡಿಯಲ್ಲಿ ಬಹಳ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಲಾಗಿತ್ತು

ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಡ್ವೋಕೇಟ್ ಜನರಲ್ ಕಿಶೋರ್ ದತ್ತಾ ಅವರು, ತಮಗೆ ಇನ್ನೂ ಹೆಚ್ಚಿನ ಮನವಿಗಳನ್ನು ಸಲ್ಲಿಸಲು ಸಾಧ್ಯವಾಗುವ ಹಾಗೆ ಸಮಿತಿ ಸಲ್ಲಿಸರುವ ವರದಿಯ ಪ್ರತಿ ಒದಗಿಸಬೇಕೆಂದು ಕೇಳಿದರು.

ಆದರೆ. ಪೀಠವು, ಸಮಿತಿಯ ತನಿಖೆ ಜಾರಿಯಲ್ಲಿದೆ ಎಂದು ಹೇಳಿ ಅವರ ಮನವಿಯನ್ನು ತಳ್ಳಿಹಾಕಿತು.‘ ಅಂತಿಮ ಆದೇಶವನ್ನು ಜಾರಿಗಗೊಳಿಸುವ ಮೊದಲು ಪ್ರಕರಣಕ್ಕೆ ಸಂಬಂಧಿಸಿರುವ ಎಲ್ಲ ಪಕ್ಷಗಳಿಗೆ ತಮ್ಮ ಕೇಸುಗಳನ್ನು ನ್ಯಾಯಾಲಯದ ಮುಂದಿಡಲು ಅವಕಾಶ ನೀಡಲಾಗುವುದು,’ ಎಂದು ಪೀಠವು ಸ್ಪಷ್ಟೀಕರಿಸಿತು.

ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಲಾಯಿತು.

ಇದನ್ನೂ ಓದಿ: Narada Bribery Case: ಟಿಎಂಸಿ ನಾಯಕರಿಗೆ ವಿಶೇಷ ಸಿಬಿಐ ಕೋರ್ಟ್ ನೀಡಿದ್ದ ಜಾಮೀನಿಗೆ ತಡೆ