Presidential election: ರಾಷ್ಟ್ರಪತಿ ಚುನಾವಣೆಗೆ ಸಾಮಾನ್ಯ ಪ್ರಜೆಯೂ ಸ್ಪರ್ಧಿಸಬಹುದು? ಸ್ಪರ್ಧಿಸೋಕೆ ಇರುವ ನಿಯಮಗಳು ಇಲ್ಲಿದೆ

ರಾಷ್ಟ್ರಪತಿ ಚುನಾವಣೆಗೆ ಸಾಮಾನ್ಯ ಪ್ರಜೆಯು ಸ್ಪರ್ಧಿಸಬಹುದೆ? ಸ್ಪರ್ಧಿಸೋಕೆ ಇರುವ ನಿಯಮಗಳು ಇಲ್ಲಿದೆ

Presidential election: ರಾಷ್ಟ್ರಪತಿ ಚುನಾವಣೆಗೆ ಸಾಮಾನ್ಯ ಪ್ರಜೆಯೂ ಸ್ಪರ್ಧಿಸಬಹುದು? ಸ್ಪರ್ಧಿಸೋಕೆ ಇರುವ ನಿಯಮಗಳು ಇಲ್ಲಿದೆ
ರಾಷ್ಟ್ರಪತಿ ಭವನ
Image Credit source: Hindustan Times
Updated By: ವಿವೇಕ ಬಿರಾದಾರ

Updated on: Jun 14, 2022 | 11:28 AM

ಜುಲೈ 18 ರಂದು  ರಾಷ್ಟ್ರಪತಿ ಚುನಾವಣೆ (President Election)  ನಡೆಯಲಿದ್ದು, ಭಾರತೀಯ ಜನತಾ ಪಕ್ಷವು (ಬಿಜೆಪಿ) (BJP) ಇನ್ನು ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಿದೆ. ಪ್ರತಿಪಕ್ಷಗಳಾದ ಟಿಎಂಸಿ (TMC) ಸೇರಿ ಹಲವು ಪಕ್ಷಗಳು ಸೇರಿ ಶರದ್ ಪವಾರ್​ (Shard Pawar) ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಈ ರಾಷ್ಟ್ರಪತಿ ಚುನಾವಣೆಗೆ ಭಾರತ ಯಾವುದೇ ಪ್ರಜೆಯು ಸ್ಪರ್ಧಿಸಬಹುದೇ?

ಸ್ಪರ್ಧಿಸಬಹದು ಆದರೆ ಕೆಲವೊಂದು ನಿಯಮಗಳಿವೆ. ಅವು ಅಭ್ಯರ್ಥಿಯಾಗುವ ವ್ಯಕ್ತಿ ಭಾರತೀಯ ಪ್ರಜೆಯಾಗಿರಬೇಕು. ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಕನಿಷ್ಠ 50 ಮಂದಿ ಶಾಸಕರು, ಸಂಸದರ ಬೆಂಬಲವನ್ನು ಖಾತ್ರಿಪಡಿಸಬೇಕು (ನಾಮನಿರ್ದೇಶನಗೊಂಡವರಲ್ಲ). ಉಮೇದುವಾರಿಕೆ ಸಲ್ಲಿಸುವಾಗ ಭಾರತೀಯ ರಿಸರ್ವ ಬ್ಯಾಂಕ್‌ನಲ್ಲಿ 15 ಸಾವಿರ ಮೊತ್ತವನ್ನು ಠೇವಣಿ ಇಡಬೇಕು. ಆಯ್ಕೆಯಾದ ಬಳಿಕ ಹಿತಾಸಕ್ತಿಗಳ ತಾಕಲಾಟಕ್ಕೆ ಎಡೆಮಾಡಿಕೊಡುವಂತಹ ಯಾವುದೇ ಸಂವಿಧಾನಿಕ ಹುದ್ದೆ, ಸ್ಥಾನಮಾನವನ್ನು ಹೊಂದಿರಬಾರದು. ಲಾಭದಾಯಕ ಹುದ್ದೆಯಲ್ಲಿರಬಾರದು. ಒಂದು ವೇಳೆ ಸಂಸತ್‌ ಅಥವಾ ವಿಧಾನಸಭಾ ಸದಸ್ಯರು ಚುನಾವಣೆಗೆ ನಿಂತು ಆಯ್ಕೆಯಾದಲ್ಲಿ ಅಧಿಕಾರ ಸ್ವೀಕರಿಸುವ ಹಿಂದಿನ ದಿನವೇ ಆತ ಆ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು.

ಇದನ್ನು ಓದಿ: ರಾಷ್ಟ್ರಪತಿ ಚುನಾವಣೆ: ಶರದ್ ಪವಾರ್​ ಉಮೇದುವಾರಿಕೆಗೆ ಕಾಂಗ್ರೆಸ್ ಒಲವು, ಟಿಎಂಸಿ ಸೇರಿ ಹಲವು ಪಕ್ಷಗಳ ಬೆಂಬಲ

2017 ರ ರಾಷ್ಟ್ರಪತಿ ಚುನಾವಣೆಯಲ್ಲಿ 95 ಅಭ್ಯರ್ಥಿಗಳಿಂದ ಒಟ್ಟು 108 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಒಬ್ಬ ಅಭ್ಯರ್ಥಿಯು ನಾಲ್ಕು ನಾಮಪತ್ರಗಳನ್ನು ಸಲ್ಲಿಸಬಹುದು. ಪರಿಶೀಲನೆಯ ನಂತರ, ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಮತ್ತು ವಿರೋಧ ಪಕ್ಷದ ಅಭ್ಯರ್ಥಿ ಮೀರಾ ಕುಮಾರ್ ಎಂಬ ಇಬ್ಬರ ಹೆಸರುಗಳು ಮಾತ್ರ ಕಣದಲ್ಲಿ ಉಳಿದಿವೆ. ಕೋವಿಂದ್ 6,61,278 ಮತಗಳನ್ನು ಪಡೆದು ಜಯಗಳಿಸಿದರೆ, ಕಾಂಗ್ರೆಸ್ ಬೆಂಬಲಿತ ಮೀರಾ ಕುಮಾರ್ 4,34,241 ಮತಗಳನ್ನು ಪಡೆದರು.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:00 am, Tue, 14 June 22