ಕೊರೊನಾ ಬಂದಮೇಲೆ ಪತ್ನಿಯನ್ನು ತಬ್ಬಿಕೊಳ್ಳಲು, ಚುಂಬಿಸಲು ಸಾಧ್ಯವಾಗಿಲ್ಲ: ಫಾರುಕ್​ ಅಬ್ದುಲ್ಲಾ ಬೇಸರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 18, 2021 | 4:21 PM

ಕೊರೊನಾ ಸೋಂಕು ದಾಂಗುಡಿ ಇಟ್ಟ ಮೇಲೆ ಜನರು ಕೈಕುಲಕಲು, ಪರಸ್ಪರ ಅಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜಗತ್ತಿನಾದ್ಯಂತ ಒಂದು ದಿನಕ್ಕೆ ಸಾವಿರ ಜನರು ಕೊವಿಡ್​ನಿಂದ ಸಾಯುತ್ತಿದ್ದಾರೆ ಎಂದು ಫಾರೂಕ್​ ಅಬ್ದುಲ್ಲಾ ಆತಂಕ ವ್ಯಕ್ತಪಡಿಸಿದರು.

ಕೊರೊನಾ ಬಂದಮೇಲೆ ಪತ್ನಿಯನ್ನು ತಬ್ಬಿಕೊಳ್ಳಲು, ಚುಂಬಿಸಲು ಸಾಧ್ಯವಾಗಿಲ್ಲ: ಫಾರುಕ್​ ಅಬ್ದುಲ್ಲಾ ಬೇಸರ
ಫಾರೂಕ್​ ಅಬ್ದುಲ್ಲಾ
Follow us on

ದೆಹಲಿ: ಇಂದು ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ಅಧ್ಯಕ್ಷ, ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ತುಂಬ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಹೇಳಿದ್ದನ್ನು ಕೇಳಿ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದ್ದಾರೆ.

ಸುಮಾರು 35 ನಿಮಿಷಗಳ ಭಾಷಣದಲ್ಲಿ ಕೊರೊನಾ ಬಗ್ಗೆ ಬೇಸರ ವ್ಯಕ್ತಪಡಿಸಿದ 83 ವರ್ಷದ  ಫಾರೂಕ್​, ಕೊರೊನಾ ಸೋಂಕಿನಿಂದ ನನ್ನ ಜೀವನಕ್ಕೆ ಅಡ್ಡಿಯಾಗಿದ್ದಂತೂ ಸತ್ಯ. ಕೊರೊನಾ ಬಂದಾಗಿನಿಂದ ನನಗೆ ನನ್ನ ಪತ್ನಿಗೆ ಚುಂಬಿಸಲು ಸಾಧ್ಯವಾಗಿಲ್ಲ. ಇನ್ನು ತಬ್ಬಿಕೊಳ್ಳುವ ಪ್ರಶ್ನೆಯೇ ಇಲ್ಲ ಬಿಡಿ. ಇದೆಲ್ಲ ಯಾರಿಗೆ ಗೊತ್ತು? ನನ್ನ ಹೃದಯ ಇದೆನ್ನಲ್ಲ ಬಯಸುತ್ತದೆ. ಆದರೆ ಏನೂ ಮಾಡಲು ಸಾಧ್ಯವಾಗಿಲ್ಲ. ಈ ಮಾತುಗಳನ್ನು ಸುಮ್ಮನೆ ಹೇಳುತ್ತಿಲ್ಲ. ನನಗಾದ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಿದ್ದೇನೆ ಎಂದಿದ್ದೇನೆ.

ಕೊರೊನಾ ಸೋಂಕು ದಾಂಗುಡಿ ಇಟ್ಟ ಮೇಲೆ ಜನರು ಕೈಕುಲಕಲು, ಪರಸ್ಪರ ಅಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜಗತ್ತಿನಾದ್ಯಂತ ಒಂದು ದಿನಕ್ಕೆ ಸಾವಿರ ಜನರು ಕೊವಿಡ್​ನಿಂದ ಸಾಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಆದಷ್ಟು ಬೇಗ, ಇಡೀ ಜಗತ್ತು ಕೊರೊನಾದಿಂದ ಮುಕ್ತವಾಗಿ, ಸಹಜಸ್ಥಿತಿಗೆ ಬರಲೆಂದು ಪ್ರಾರ್ಥಿಸುತ್ತೇನೆ ಎಂದೂ ಹೇಳಿದರು.

2021ರ ಮೊದಲ ದಿನ | ಕ್ಯಾಮೆರಾ ಕಣ್ಣಿಗೆ ಕಂಡ ಬಗೆಬಗೆಯ ನೋಟಗಳು

ಲಹರಿ | ಲಾಕ್​ಡೌನ್ ಏಕಾಂತದಲ್ಲಿ ಮನೆಮುಂದೆ ಗಿಡ ಬೆಳೆಸಿದೆ, ಹೂ ಅರಳಿತು

Published On - 4:13 pm, Mon, 18 January 21