ಒಡಿಶಾ ರೈಲು ಅಪಘಾತದಲ್ಲಿ ಸಾವಿಗೀಡಾದವರ ಮೃತದೇಹ ಹೆಚ್ಚು ಕಾಲ ಇರಿಸಲು ಸಾಧ್ಯವಿಲ್ಲ: ವೈದ್ಯರು

ದೇಹ ಕೊಳೆಯುವುದು ಸುತ್ತಲಿನ ತಾಪಮಾನ ಸೇರಿದಂತೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ. ತಾಪಮಾನವು ತುಂಬಾ ಹೆಚ್ಚಿಲ್ಲದಿದ್ದರೆ ದೇಹಗಳು ಏಳು-ಎಂಟು ಗಂಟೆಗಳವರೆಗೆ, 12 ಗಂಟೆಗಳ ಕಾಲ ಉತ್ತಮವಾಗಿರುತ್ತವೆ.

ಒಡಿಶಾ ರೈಲು ಅಪಘಾತದಲ್ಲಿ ಸಾವಿಗೀಡಾದವರ ಮೃತದೇಹ ಹೆಚ್ಚು ಕಾಲ ಇರಿಸಲು ಸಾಧ್ಯವಿಲ್ಲ: ವೈದ್ಯರು
ಒಡಿಶಾ ರೈಲು ಅಪಘಾತ
Follow us
|

Updated on: Jun 06, 2023 | 4:19 PM

ದೆಹಲಿ: ಒಡಿಶಾದಲ್ಲಿ  (Odisha) ಶುಕ್ರವಾರ ಸಂಭವಿಸಿದ ರೈಲು ಅಪಘಾತದಲ್ಲಿ (Train Accident) 278 ಜನರು ಸಾವಿಗೀಡಾಗಿದ್ದು, ಇದರಲ್ಲಿ 100ಕ್ಕಿಂತಲೂ ಹೆಚ್ಚು ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆ ನಡೆದು 80 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದೆ. ಹೀಗಿರುವಾಗ ಛಿದ್ರವಾಗಿರುವ ಮೃತದೇಹಗಳನ್ನು ಅದೆಷ್ಟು ಹೊತ್ತು ಹೀಗೇ ಇರಿಸಲು ಸಾಧ್ಯ ಎಂಬುದರ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಕುಟುಂಬದವರಿಗೆ ಮೃತದೇಹಗಳನ್ನು ಪತ್ತೆ ಹಚ್ಚಲು ಸಹಾಯವಾಗುವಂತೆ ರೈಲ್ವೆ ಇಲಾಖೆ ಉಪಕ್ರಮಗಳನ್ನು ಕೈಗೊಂಡಿದೆ. ಅದೇ ವೇಳೆ ಕುಟುಂಬದವರು ಮೃತದೇಹವನ್ನು ಗುರುತಿಸುವವರೆಗೆ ಮೃತದೇಹಗಳನ್ನು ಕೊಳೆಯದಂತೆ (Embalming) ನೋಡಿಕೊಳ್ಳಲಾಗುತ್ತಿದೆ. ಡಿಎನ್‌ಎ ಹೊಂದಾಣಿಕೆಗಾಗಿ ರಕ್ತದ ಮಾದರಿಗಳನ್ನು ಸಹ ಸಂಗ್ರಹಿಸಲಾಗುತ್ತಿದೆ.

ದೆಹಲಿಯ ಪ್ರೀಮಿಯರ್ ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು, ಎಂಬಾಮಿಂಗ್ ಮಾಡದ ಕಾರಣ ಹಾನಿಗೊಳಗಾದ ದೇಹಗಳನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು. 12 ಗಂಟೆಗಳೊಳಗೆ ಸರಿಯಾಗಿ ಎಂಬಾಮಿಂಗ್ ಮಾಡಿದರೆ ಮಾತ್ರ ದೇಹವನ್ನು “ವರ್ಷಗಳವರೆಗೆ” ಸಂರಕ್ಷಿಸಬಹುದು ಎಂದು ಎಐಐಎಂಎಸ್‌ನ ಅನಾಟಮಿ ವಿಭಾಗದ ಮುಖ್ಯಸ್ಥ ಶರೀಫ್ ಹೇಳಿದ್ದಾರೆ. ದೇಹ ಕೊಳೆಯುವುದು ಸುತ್ತಲಿನ ತಾಪಮಾನ ಸೇರಿದಂತೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ. ತಾಪಮಾನವು ತುಂಬಾ ಹೆಚ್ಚಿಲ್ಲದಿದ್ದರೆ ದೇಹಗಳು ಏಳು-ಎಂಟು ಗಂಟೆಗಳವರೆಗೆ, 12 ಗಂಟೆಗಳ ಕಾಲ ಉತ್ತಮವಾಗಿರುತ್ತವೆ. ಐಸ್ ಮತ್ತು ಕೋಲ್ಡ್ ಸ್ಟೋರೇಜ್ ಕೊಳೆಯುವುದನ್ನು ವಿಳಂಬಗೊಳಿಸುತ್ತದೆ ಎಂದು ಡಾ ಷರೀಫ್ ಎನ್​​ಡಿಟಿವಿಗೆ ತಿಳಿಸಿದರು.

ಶುಕ್ರವಾರ ಸಂಜೆ ಬಾಲಸೋರ್‌ನಲ್ಲಿ ನಡೆದ ಭೀಕರ ಮೂರು ರೈಲು ಅಪಘಾತದ ನಂತರ ತರಲಾದ ದೇಹಗಳ ಕೊಳೆಯುವಿಕೆಯನ್ನು ನಿಧಾನಗೊಳಿಸಲು ಭುವನೇಶ್ವರದ ಏಮ್ಸ್ ಆಸ್ಪತ್ರೆಯು ಪಾರಾದೀಪ್ ಬಂದರಿನಿಂದ ಕನಿಷ್ಠ ಐದು ಫ್ರೀಜರ್‌ಗಳನ್ನು ತರಲಾಗಿದೆ. ದುಃಖಿತ ಕುಟುಂಬಗಳು ಅಧಿಕಾರಿಗಳು ಅವರಿಗೆ ತೋರಿಸುವ ಚಿತ್ರಗಳ ಸ್ಲೈಡ್‌ಶೋನಿಂದ ಗುರುತಿಸಲಾಗದಷ್ಟು ಹಾನಿಗೊಳಗಾದ ಮೃತದೇಹಗಳನ್ನು ಗುರುತಿಸಲು ಹೆಣಗಾಡುತ್ತಿದ್ದಾರೆ.

ಸಾವು ಸಂಭವಿಸಿ 12 ಗಂಟೆ ಕಳೆದ ನಂತರ ಎಂಬಾಮಿಂಗ್ ಮಾಡಿದರೆ ಅದು ಪರಿಣಾಮಕಾರಿಯಾಗಿರುವುದಿಲ್ಲ ಮತ್ತು ಬೇಗನೆ ಕೊಳೆಯುತ್ತದೆ. ದೇಹವು ಹಾನಿಗೊಳಗಾದರೆ, ಅದನ್ನು ಎಂಬಾಮ್ ಮಾಡುವುದು ತುಂಬಾ ಕಷ್ಟ. ಮೃತದೇಹ ಕೆಡದಂತೆ ಅದಕ್ಕೆ ದ್ರವ ಚುಚ್ಚಬೇಕಾಗುತ್ತದೆ ಎಂದು ಡಾ ಷರೀಫ್ ಹೇಳಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸುವಂತೆ ಭಾರತೀಯ ರೈಲ್ವೆ ಮನವಿ

ಸಮಯ ಮೀರಿದ ಕಾರಣ, ಮೃತರನ್ನು ಗುರುತಿಸಲು 139 ಅನ್ನು ಡಯಲ್ ಮಾಡಲು ರೈಲ್ವೆಯು ಸಂಬಂಧಿಕರಿಗೆ ಸಲಹೆ ನೀಡಿದೆ. ಭುವನೇಶ್ವರದ ಏಮ್ಸ್‌ಗೆ ಭಾನುವಾರ 123 ಮೃತದೇಹಗಳನ್ನು ತರಲಾಗಿದೆ. ಏಮ್ಸ್‌ಗೆ ಮೃತದೇಹಗಳನ್ನು ತರುವ ಹೊತ್ತಿಗೆ 30 ಗಂಟೆಗಳು ಕಳೆದಿದ್ದವು. ದೇಹಗಳು ಮತ್ತಷ್ಟು ಕೊಳೆಯುವುದನ್ನು ತಡೆಯುವುದು ನಮ್ಮ ಪ್ರಮುಖ ಉದ್ದೇಶವಾಗಿತ್ತು. ಶವಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಲಾಗಿದೆ. ಸಮರೋಪಾದಿಯಲ್ಲಿ ಎಂಬಾಮಿಂಗ್ ಮಾಡಲಾಗಿದೆ ಎಂದು ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಅಶುತೋಷ್ ಬಿಸ್ವಾಸ್ ಹೇಳಿದ್ದಾರೆ.

ಶವಗಳನ್ನು ಫ್ರೀಜರ್‌ಗಳಲ್ಲಿ ಸಂಗ್ರಹಿಸಲಾಗುವುದು ಎಂದು ಡಾ ಬಿಸ್ವಾಸ್ ಹೇಳಿದ್ದಾರೆ. ಪ್ರತಿಯೊಂದು ಕಂಟೇನರ್ ನಲ್ಲಿ 30-40 ದೇಹಗಳನ್ನು ಸಂಗ್ರಹಿಸಬಹುದು. ಮೃತದೇಹಗಳನ್ನು ಸಂರಕ್ಷಿಸಲು ಹಲವಾರು ಆಸ್ಪತ್ರೆಗಳು ಮತ್ತು ವಿವಿಧ ನಗರಗಳಿಂದ ತಜ್ಞರು ಆಗಮಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ